ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 2022: 10ನೇ ದಿನದ ಭಾರತೀಯ ಕ್ರೀಡಾಪಟುಗಳ ಸಂಪೂರ್ಣ ವೇಳಾಪಟ್ಟಿ

Commonwealth Games 2022: Full Schedule of Indian Athletes For Day 10

ಬರ್ಮಿಂಗ್‍ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2022ರಲ್ಲಿ ಭಾರತೀಯ ಕ್ರೀಡಾಪಟುಗಳು ಶನಿವಾರ (ಆಗಸ್ಟ್ 6) ಅಂತ್ಯದ ವೇಳೆಗೆ ತಮ್ಮ ಪದಕಗಳ ಸಂಖ್ಯೆಯನ್ನು 26ರಿಂದ 40ಕ್ಕೆ ಹೆಚ್ಚಿಸಿಕೊಳ್ಳಲು 14 ಪದಕಗಳನ್ನು ಗೆದ್ದುಕೊಂಡರು.

ಭಾರತೀಯ ಕುಸ್ತಿ ತಂಡ ಬರ್ಮಿಂಗ್‌ಹ್ಯಾಮ್‌ನಲ್ಲಿ 12 ಪದಕಗಳಲ್ಲಿ 12 ಗೆದ್ದು ಮತ್ತೆ ಇತಿಹಾಸವನ್ನು ಸೃಷ್ಟಿಸಿದೆ. 8ನೇ ದಿನ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ದೀಪಕ್ ಪುನಿಯಾ ಚಿನ್ನ ಗೆದ್ದ ನಂತರ, ಶನಿವಾರದಂದು ರವಿ ದಹಿಯಾ, ವಿನೇಶ್ ಫೋಗಟ್ ಮತ್ತು ನವೀನ್ ಚಿನ್ನದ ಪದಕ ತಂದುಕೊಟ್ಟರು. ಇನ್ನು ಪೂಜಾ ಗೆಹ್ಲೋಟ್, ಪೂಜಾ ಸಿಹಾಗ್ ಮತ್ತು ದೀಪಕ್ ನೆಹ್ರಾ ತಮ್ಮ ವಿಭಾಗಗಳಲ್ಲಿ ಕಂಚು ಗೆದ್ದರು.

CWG 2022: 9ನೇ ದಿನ; ಕುಸ್ತಿಯಲ್ಲಿ 3 ಚಿನ್ನ, ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ 1 ಚಿನ್ನ ಗೆದ್ದ ಭಾರತೀಯರುCWG 2022: 9ನೇ ದಿನ; ಕುಸ್ತಿಯಲ್ಲಿ 3 ಚಿನ್ನ, ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ 1 ಚಿನ್ನ ಗೆದ್ದ ಭಾರತೀಯರು

ಇನ್ನು ಕಾಮನ್‌ವೆಲ್ತ್ ಕ್ರೀಡಾಕೂಟದ 10ನೇ ದಿನ (ಭಾನುವಾರ, ಆಗಸ್ಟ್ 7)ದಂದು ಭಾರತ ಮಹಿಳಾ ಕ್ರಿಕೆಟ್ ತಂಡವು ಚಿನ್ನದ ಪದಕಕ್ಕಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ ಮತ್ತು ಮಹಿಳಾ ಹಾಕಿ ತಂಡವು ಕಂಚಿನ ಪದಕಕ್ಕಾಗಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ.

ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಸೆಮಿಫೈನಲ್

ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಸೆಮಿಫೈನಲ್

ಶಟ್ಲರ್‌ಗಳಾದ ಪಿವಿ ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಅವರು ತಮ್ಮ ಸಿಂಗಲ್ಸ್ ಸೆಮಿಫೈನಲ್‌ಗಳನ್ನು ಆಡಲಿದ್ದು, ನಿತು ಗಂಗಾಸ್, ಅಮಿತ್ ಪಂಗಲ್ ಮತ್ತು ನಿಖತ್ ಜರೀನ್ ಅವರು ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಫೈನಲ್ ಪಂದ್ಯಗಳನ್ನು ಆಡಲಿದ್ದಾರೆ.

ಟೇಬಲ್ ಟೆನಿಸ್ ತಾರೆಗಳಾದ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ತಮ್ಮ ಚಿನ್ನದ ಪದಕದ ಪಂದ್ಯದಲ್ಲಿ ಆಡಲಿದ್ದಾರೆ.

10ನೇ ದಿನ ಭಾರತದ ಪೂರ್ಣ ವೇಳಾಪಟ್ಟಿ ಇಲ್ಲಿದೆ

10ನೇ ದಿನ ಭಾರತದ ಪೂರ್ಣ ವೇಳಾಪಟ್ಟಿ ಇಲ್ಲಿದೆ

ಹಾಕಿ (1:30 PM) - ಭಾರತ vs ನ್ಯೂಜಿಲೆಂಡ್ (ಮಹಿಳೆಯರ ಕಂಚಿನ ಪದಕದ ಪಂದ್ಯ)

ಬ್ಯಾಡ್ಮಿಂಟನ್ (ಮಧ್ಯಾಹ್ನ 2:20) - ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್, ಕಿಡಂಬಿ ಶ್ರೀಕಾಂತ್ ಪುರುಷರ ಸಿಂಗಲ್ಸ್ ಸೆಮಿಫೈನಲ್ (ಮಧ್ಯಾಹ್ನ 3.10), ಲಕ್ಷ್ಯ ಸೇನ್ ಪುರುಷರ ಸಿಂಗಲ್ಸ್ ಸೆಮಿಫೈನಲ್ (ಮಧ್ಯಾಹ್ನ 3.10), ಟ್ರೀಸಾ ಜಾಲಿ/ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ ಸೆಮಿ- ಫೈನಲ್ (ಸಂಜೆ 4 ಗಂಟೆಗೆ), ಚಿರಾಗ್ ಶೆಟ್ಟಿ/ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಪುರುಷರ ಡಬಲ್ಸ್ ಸೆಮಿಫೈನಲ್ (ಸಂಜೆ 4.50)

ಬಾಕ್ಸಿಂಗ್- ನಿತು ಗಂಗಾಸ್, ಅಮಿತ್ ಪಂಗಲ್

ಬಾಕ್ಸಿಂಗ್- ನಿತು ಗಂಗಾಸ್, ಅಮಿತ್ ಪಂಗಲ್

ಅಥ್ಲೆಟಿಕ್ಸ್ (2:45 PM) - ಪುರುಷರ ಟ್ರಿಪಲ್ ಜಂಪ್ ಫೈನಲ್- ಅಬ್ದುಲ್ಲಾ ಅಬೂಬಕರ್, ಎಲ್ದೋಸ್ ಪಾಲ್, ಪ್ರವೀಣ್ ಚಿತ್ರವೇಲ್, ಪುರುಷರ 10 ಕಿಮೀ ಓಟದ ನಡಿಗೆ ಫೈನಲ್ - ಅಮಿತ್, ಸಂದೀಪ್ ಕುಮಾರ್ (ಮಧ್ಯಾಹ್ನ 3.50), ಮಹಿಳೆಯರ ಜಾವೆಲಿನ್ ಥ್ರೋ ಫೈನಲ್- ಶಿಲ್ಪಾ ರಾಣಿ, ಅಣ್ಣು ರಾಣಿ (ಸಂಜೆ 4.05), ಮಹಿಳೆಯರ 4x100 ಮೀ ಫೈನಲ್ (ಸಂಜೆ 5.24), ಪುರುಷರ ಜಾವೆಲಿನ್ ಥ್ರೋ ಫೈನಲ್ - ರೋಹಿತ್ ಯಾದವ್, ಡಿಪಿ ಮನು (12.10), ಪುರುಷರ 4x400 ಮೀ ಫೈನಲ್ (ಬೆಳಿಗ್ಗೆ 1)

ಭಾರತ, ಆಸ್ಟ್ರೇಲಿಯಾ ಕ್ರಿಕೆಟ್ ಫೈನಲ್

ಭಾರತ, ಆಸ್ಟ್ರೇಲಿಯಾ ಕ್ರಿಕೆಟ್ ಫೈನಲ್

ಬಾಕ್ಸಿಂಗ್ (ಎಲ್ಲಾ ಫೈನಲ್‌ಗಳು) (ಮಧ್ಯಾಹ್ನ 3) - ನಿತು ಗಂಗಾಸ್, ಅಮಿತ್ ಪಂಗಲ್ (ಮಧ್ಯಾಹ್ನ 3.15), ನಿಖತ್ ಜರೀನ್ (ಸಂಜೆ 7), ಸಾಗರ್ ಅಹ್ಲಾವತ್ (ಮಧ್ಯಾಹ್ನ 1.15)

ಟೇಬಲ್ ಟೆನ್ನಿಸ್ (3:35 PM) - ಶ್ರೀಜಾ ಅಕುಲಾ ಕಂಚಿನ ಪಂದ್ಯ, ಶರತ್ ಕಮಲ್/ಸತ್ಯನ್ ಜ್ಞಾನಶೇಖರನ್ ಚಿನ್ನದ ಪಂದ್ಯ (ಸಂಜೆ 6.15), ಶರತ್ ಕಮಲ್ ಎಸ್‌ಎಫ್ (ರಾತ್ರಿ 9.50), ಸತ್ಯನ್ ಜ್ಞಾನಶೇಖರನ್ ಎಸ್‌ಎಫ್ (ರಾತ್ರಿ 10.40), ಶರತ್ ಕಮಲ್/ಶ್ರೀಜಾ ಅಕುಲಾ (12.15) pm)

ಕ್ರಿಕೆಟ್ (ರಾತ್ರಿ 9:30) - ಭಾರತ ವಿರುದ್ಧ ಆಸ್ಟ್ರೇಲಿಯಾ, ಫೈನಲ್ (ರಾತ್ರಿ 9.30)

ಸ್ಕ್ವಾಷ್ (10:30 PM) - ದೀಪಿಕಾ ಪಲ್ಲಿಕಲ್/ಸೌರವ್ ಘೋಷಾಲ್ ಕಂಚಿನ ಪಂದ್ಯ

Story first published: Sunday, August 7, 2022, 10:15 [IST]
Other articles published on Aug 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X