ಟೋಕಿಯೋ ಒಲಿಂಪಿಕ್ಸ್ 2021ನಿಂದ ಹಿಂದೆ ಸರಿದ ಉತ್ತರ ಕೊರಿಯಾ

ಕೊರೊನಾ ಸೋಂಕು ಭೀತಿಯಿಂದ ಈ ವರ್ಷದ ಮಹತ್ವದ ಕ್ರೀಡಾಕೂಟ ಟೋಕಿಯೋ ಒಲಿಂಪಿಕ್ಸ್ 2021ನಿಂದ ಹಿಂದೆ ಸರಿದಿದೆ. ಕಳೆದ ವರ್ಷ ಜಪಾನ್‌ನಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್ ಕ್ರೀಡಾ ಕೂಟ ಕೊರೊನಾ ದೆಸೆಯಿಂದಲೇ ನಿಂತು ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ಕೊವಿಡ್ 19 ಸಾಂಕ್ರಾಮಿಕದ ನಡುವೆಯೂ ಜುಲೈ 23ರಿಂದ ಆಗಸ್ಟ್ 8ರವರೆಗೂ ಜಪಾನ್ ರಾಜಧಾನಿ ಟೋಕಿಯೊದಲ್ಲಿ ಒಲಿಂಪಿಕ್ಸ್ ಭರ್ಜರಿಯಾಗಿ ನಡೆಸಲು ಸಿದ್ಧತೆ ನಡೆದಿದೆ.
ಕೊರೊನಾ ಬಿಕ್ಕಟ್ಟಿನಿಂದ ಉತ್ತರ ಕೊರಿಯಾ ಕ್ರೀಡಾಪಟುಗಳನ್ನು ರಕ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಉತ್ತರ ಕೊರಿಯಾ ಕ್ರೀಡಾ ಸಚಿವಾಲಯ ಹೇಳಿದೆ. ಆದರೆ ಉತ್ತರ ಕೊರಿಯಾದ ಈ ನಿರ್ಧಾರದ ಬಗ್ಗೆ ಒಲಿಂಪಿಕ್ ಸಮಿತಿ ಇನ್ನೂ ಪ್ರತಿಕ್ರಿಯಿಸಿಲ್ಲ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಉತ್ತರ ಕೊರಿಯಾ ಹೆಚ್ಚಾಗಿ ವೇಯ್ಟ್ ಲಿಫ್ಟಿಂಗ್ ಹಾಗೂ ಕುಸ್ತಿಯಲ್ಲಿ ಮೇಲುಗೈ ಸಾಧಿಸಿದೆ. ಇಲ್ಲಿ ತನಕ 13 ಬಾರಿ 'ಒಲಿಂಪಿಕ್ಸ್' ಕ್ರೀಡಾ ಕೂಟದಲ್ಲಿ ಭಾಗವಹಿಸಿದೆ. ಈ ಪೈಕಿ ಒಟ್ಟು 16 ಚಿನ್ನದ ಪದಕ, 17 ಬೆಳ್ಳಿ ಪದಕ ಹಾಗೂ 23 ಕಂಚಿನ ಪದಕಗಳು ಸೇರಿದಂತೆ ಒಟ್ಟು 56 ಪದಕಗಳನ್ನು ಗೆದ್ದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications