Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Cricket vs FIFA World Cup: ಕಳೆದ ಒಂದು ವಾರ ಭಾರತದಲ್ಲಿ ಯಾವುದನ್ನು ಹೆಚ್ಚು ಹುಡುಕಾಡಲಾಗಿದೆ?

Cricket vs FIFA World Cup: Which Sports Was Most Searched In India Last Week?

ಕಳೆದ ಒಂದೆರಡು ತಿಂಗಳಿನಿಂದ ಜನರು ಕ್ರೀಡೆಗಳಲ್ಲಿ ಬ್ಯುಸಿಯಾಗಿದ್ದಾರೆ. 2022ರ ಏಷ್ಯಾ ಕಪ್, 2022ರ ಟಿ20 ವಿಶ್ವಕಪ್ ಸೇರಿದಂತೆ ಇತರ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಮತ್ತು ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯನ್ನು ವೀಕ್ಷಿಸುವುದರಲ್ಲಿ ಜನರು ಮುಳುಗಿಹೋಗಿದ್ದಾರೆ.

ಒಂದು ಕಡೆ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ನಿರ್ಣಾಯಕ ಘಟ್ಟಕ್ಕೆ ತಲುಪಿದ್ದು, ಲೀಗ್ ಪಂದ್ಯಗಳು, ಕಾರ್ಟರ್ ಫೈನಲ್, ಸೆಮಿಫೈನಲ್ ಪಂದ್ಯಗಳು ಮುಗಿದು ಫೈನಲ್ ಪಂದ್ಯಕ್ಕೆ ಒಂದೇ ದಿನ ಬಾಕಿ ಇದೆ.

ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಭಾನುವಾರ ಡಿಸೆಂಬರ್ 18ರಂದು ನಡೆಯುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಶನಿವಾರ ರಾತ್ರಿ ಕ್ರೊಯೇಶಿಯಾ ಮತ್ತು ಮೊರಾಕೊ ನಡುವೆ ಮೂರನೇ ಸ್ಥಾನಕ್ಕಾಗಿ ಕಾಳಗ ನಡೆಯಲಿದೆ.

ಮತ್ತೊಂದೆಡೆ, ಕಳೆದ ಒಂದು ವಾರದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಏಕದಿನ ಮತ್ತು ಟೆಸ್ಟ್ ಸರಣಿ ನಡೆಯುತ್ತಿದೆ. ಹೀಗಾಗಿ ಫಿಫಾ ಫುಟ್ಬಾಲ್ ವಿಶ್ವಕಪ್ ಮತ್ತು ಕ್ರಿಕೆಟ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ವಿಶ್ವದೆಲ್ಲೆಡೆ ಫುಟ್ಬಾಲ್ ವಿಶ್ವಕಪ್ ಮೆಚ್ಚುಗೆ ಗಳಿಸಿದ್ದರೆ, ಭಾರತದಲ್ಲಿ ಕ್ರಿಕೆಟ್ ಮನೆಮಾತಾಗಿದೆ.

Cricket vs FIFA World Cup: Which Sports Was Most Searched In India Last Week?

ಡಿಸೆಂಬರ್ 5ರಿಂದ ಡಿಸೆಂಬರ್ 12ರವರೆಗಿನ ಒಂದು ವಾರದ ಅವಧಿಯಲ್ಲಿ ಗೂಗಲ್ ಟ್ರೆಂಡ್‌ಗಳ ಹುಡುಕಾಟ ಡೇಟಾವನ್ನು ನೋಡಿದರೆ, ಭಾರತದಲ್ಲಿ ಅಂತರ್ಜಾಲದಲ್ಲಿ ಹೆಚ್ಚು ಹುಡುಕಾಡಲ್ಪಟ್ಟ ಕ್ರೀಡೆಗಳಲ್ಲಿ ಕ್ರಿಕೆಟ್ ಹೆಚ್ಚಿನ ರಾಜ್ಯಗಳನ್ನು ಆವರಿಸಿದ್ದರೆ, ಫಿಫಾ ಫುಟ್ಬಾಲ್ ವಿಶ್ವಕಪ್ ಕೆಲವು ರಾಜ್ಯಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿದೆ.

ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯನ್ನು ಈಶಾನ್ಯ ರಾಜ್ಯಗಳಾದ ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಸಿಕ್ಕಿಂ, ಅರುಣಾಚಲ, ಅಸ್ಸಾಂ, ತ್ರಿಪುರ ಮತ್ತು ಕೇರಳ, ಪಶ್ಚಿಮ ಬಂಗಾಳ, ಗೋವಾ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಜನ ವೀಕ್ಷಿಸಿದ್ದಾರೆ.

Cricket Controversy: ರಾಹುಲ್ ದ್ರಾವಿಡ್‌ಗೆ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್ ಅಲನ್ ಡೊನಾಲ್ಡ್

ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಗುಜರಾತ್ ಮತ್ತು ಈತರ ರಾಜ್ಯಗಳಲ್ಲಿ ಕ್ರಿಕೆಟ್ ಹೆಚ್ಚು ಪ್ರಾಬಲ್ಯ ಹೊಂದಿದೆ.

Story first published: Friday, December 16, 2022, 12:50 [IST]
Other articles published on Dec 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+