ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Cricket Controversy: ರಾಹುಲ್ ದ್ರಾವಿಡ್‌ಗೆ ಕ್ಷಮೆಯಾಚಿಸಿದ ಬಾಂಗ್ಲಾ ಕೋಚ್ ಅಲನ್ ಡೊನಾಲ್ಡ್

IND vs BAN 1st Test: Bangladesh Bowling Coach Allan Donald Apologizes To Rahul Dravid For Ugly Sledge

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಎರಡು ತಂಡಗಳಲ್ಲಿ ಇಬ್ಬರು ಹಳೆಯ ಪ್ರತಿಸ್ಪರ್ಧಿಗಳಿದ್ದಾರೆ ಎಂಬುದು ಮತ್ತೊಂದು ವಿಶೇಷ.

ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದರೆ, ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲನ್ ಡೊನಾಲ್ಡ್ ಬಾಂಗ್ಲಾದೇಶ ತಂಡದ ಬೌಲಿಂಗ್ ಕೋಚ್ ಆಗಿದ್ದಾರೆ.

ಕ್ರಿಕೆಟ್‌ನಲ್ಲಿ ರಾಹುಲ್ ದ್ರಾವಿಡ್ ಮತ್ತು ಅಲನ್ ಡೊನಾಲ್ಡ್ ಪೈಪೋಟಿಯು 90ರ ದಶಕದ ಉತ್ತರಾರ್ಧ ಮತ್ತು 2000ರ ಆರಂಭದಲ್ಲಿ ದೊಡ್ಡ ಸದ್ದು ಮಾಡಿತ್ತು. ವಿಶ್ವದ ಪ್ರಮುಖ ವೇಗದ ಬೌಲರ್‌ ಮತ್ತು ವಿಶ್ವದ ಟೆಕ್ನಿಕಲ್ ಬ್ಯಾಟರ್‌ನ ನಡುವಿನ ಸ್ಪರ್ಧೆ ನೋಡುಗರಿಗೆ ರಸದೌತಣ ನೀಡುತ್ತಿತ್ತು.

ರಣಜಿ ಟ್ರೋಫಿ 2022: ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಅರ್ಜುನ್ ತೆಂಡೂಲ್ಕರ್‌ಗೆ ಸಹೋದರಿ ಪ್ರತಿಕ್ರಿಯೆರಣಜಿ ಟ್ರೋಫಿ 2022: ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ ಅರ್ಜುನ್ ತೆಂಡೂಲ್ಕರ್‌ಗೆ ಸಹೋದರಿ ಪ್ರತಿಕ್ರಿಯೆ

ಏಕದಿನ ಕ್ರಿಕೆಟ್‌ನಲ್ಲಿಯೂ ಸಹ ತಾಂತ್ರಿಕವಾಗಿ ಅತ್ಯುತ್ತಮ ಬ್ಯಾಟರ್ ಎಂದು ಕರೆಯಲ್ಪಡುತ್ತಿದ್ದ ರಾಹುಲ್ ದ್ರಾವಿಡ್, ದಕ್ಷಿಣ ಆಫ್ರಿಕಾದಲ್ಲಿ ನಡೆದ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿದರು.

ರಾಹುಲ್ ದ್ರಾವಿಡ್ 94 ಎಸೆತಗಳಲ್ಲಿ 84 ರನ್

ರಾಹುಲ್ ದ್ರಾವಿಡ್ 94 ಎಸೆತಗಳಲ್ಲಿ 84 ರನ್

1997ರ ಫೆಬ್ರವರಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ನಾಯಕತ್ವದಲ್ಲಿ 40 ಓವರ್‌ಗಳಲ್ಲಿ 251 ರನ್‌ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ, ರಾಹುಲ್ ದ್ರಾವಿಡ್ ಅವರ ಅತ್ಯುತ್ತಮ ಏಕದಿನ ಪ್ರದರ್ಶನ ನೀಡಿದರು. 94 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 84 ರನ್ ಗಳಿಸಿದರು.

ಅಲನ್ ಡೊನಾಲ್ಡ್‌ ಬೌಲಿಂಗ್‌ನಲ್ಲಿ ಏಕೈಕ ಸಿಕ್ಸರ್ ಬಾರಿಸಿದರು, ಲಾಂಗ್-ಆನ್‌ನ ಮೇಲ್ಭಾಗದಲ್ಲಿ ಅದ್ಭುತವಾಗಿ ಹೊಡೆದರು. ಕ್ರೀಸ್‌ನಲ್ಲಿದ್ದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಸ್ಲೆಡ್ಜಿಂಗ್ ಮಾಡುವುದನ್ನು ನಿಲ್ಲಿಸಲು ಅಲನ್ ಡೊನಾಲ್ಡ್‌ಗೆ ಸಾಧ್ಯವಾಗಲಿಲ್ಲ.

1997ರಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದ ವೇಳೆ ಸ್ಲೆಡ್ಜ್

ಆ ಪಂದ್ಯವನ್ನು ಭಾರತ ತಂಡ 17 ರನ್‌ಗಳಿಂದ ಸೋತಿತು. ಆದರೆ ರಾಹುಲ್ ದ್ರಾವಿಡ್ ಮಾಡಿದ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಭಯ ಕಾಡಿತ್ತು. ಭಾರತ ತಂಡದ ವಿರುದ್ಧ ಅಲನ್ ಡೊನಾಲ್ಡ್ 48 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಆದರೆ 6.54ರಂತೆ ರನ್ ಬಿಟ್ಟುಕೊಟ್ಟರು.

1997ರಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದ ವೇಳೆ ಭಾರತೀಯ ಬ್ಯಾಟರ್ ರಾಹುಲ್ ದ್ರಾವಿಡ್‌ಗೆ ಸ್ಲೆಡ್ಜಿಂಗ್ ಮಾಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾ ಮಾಜಿ ಬೌಲರ್ ಅಲನ್ ಡೊನಾಲ್ಡ್ ಕ್ಷಮೆಯಾಚಿಸಿದ್ದಾರೆ.

ಆ ಮಾತು ಹೇಳಿದ್ದಕ್ಕಾಗಿ ನಾನು ಈಗಲೂ ಕ್ಷಮೆಯಾಚಿಸುತ್ತೇನೆ

ಆ ಮಾತು ಹೇಳಿದ್ದಕ್ಕಾಗಿ ನಾನು ಈಗಲೂ ಕ್ಷಮೆಯಾಚಿಸುತ್ತೇನೆ

"ಡರ್ಬನ್‌ನಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದ ವೇಳೆ ಒಂದು ಕೊಳಕು ಘಟನೆ ನಡೆದಿದೆ. ದ್ರಾವಿಡ್ ಮತ್ತು ಸಚಿನ್ ನಮಗೆ ಎಲ್ಲಾ ಭಾಗಗಳಿಗೆ ಹೊಗೆಯಾಡಿಸುತ್ತಿದ್ದರು. ನಾನು ಸ್ವಲ್ಪ ಮಟ್ಟಿಗೆ ಮಿತಿಮೀರಿ ವರ್ತಿಸಿದೆ. ನನಗೆ ರಾಹುಲ್ ದ್ರಾವಿಡ್ ಬಗ್ಗೆ ಅಪಾರ ಗೌರವ ಹೊರತು ಬೇರೇನೂ ಇಲ್ಲ. ನಾನು ದ್ರಾವಿಡ್ ಜೊತೆ ಕುಳಿತು ರಾತ್ರಿಯ ಊಟಕ್ಕೆ ಹೋಗಲು ಇಷ್ಟಪಡುತ್ತೇನೆ ಮತ್ತು ಆ ದಿನ ನಡೆದ ಘಟನೆಯ ಬಗ್ಗೆ ಮತ್ತೊಮ್ಮೆ ಕ್ಷಮಿಸಿ ಎಂದು ಹೇಳುತ್ತೇನೆ. ನಾನು ಅವನ ವಿಕೆಟ್‌ ಪಡೆದುಕೊಂಡ ನಂತರ, ಬೇರೆ ಹೇಗಾದರೂ ಸಂಭ್ರಮಿಸಬೇಕಿತ್ತು".

"ಆದರೆ ನಾನು ಆ ದಿನ ಆ ಮಾತು ಹೇಳಿದ್ದಕ್ಕಾಗಿ ನಾನು ಈಗಲೂ ಕ್ಷಮೆಯಾಚಿಸುತ್ತೇನೆ. ದ್ರಾವಿಡ್ ಎಂತಹ ಮಹಾನ್ ವ್ಯಕ್ತಿ. ಆದ್ದರಿಂದ ರಾಹುಲ್, ನೀವು ಈ ಆಡಿಯೋ ಕೇಳುತ್ತಿದ್ದರೆ, ನಾನು ನಿಮ್ಮೊಂದಿಗೆ ರಾತ್ರಿ ಕಳೆಯಲು ಇಷ್ಟಪಡುತ್ತೇನೆ," ಎಂದು ಅಲನ್ ಡೊನಾಲ್ಡ್ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮಾಜಿ ವೇಗಿಯ ಬಗ್ಗೆ ಮೆಚ್ಚುಗೆಯ ಮಾತು

ದಕ್ಷಿಣ ಆಫ್ರಿಕಾ ಮಾಜಿ ವೇಗಿಯ ಬಗ್ಗೆ ಮೆಚ್ಚುಗೆಯ ಮಾತು

ಮತ್ತೊಂದೆಡೆ, ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ದಕ್ಷಿಣ ಆಫ್ರಿಕಾ ಮಾಜಿ ವೇಗಿಯ ಬಗ್ಗೆ ಮೆಚ್ಚುಗೆಯ ಮಾತುಗಳಾನ್ನಾಡಿದ್ದಾರೆ. "ಅಲನ್ ಡೊನಾಲ್ಡ್ ಶ್ರೇಷ್ಠ ಬೌಲರ್ ಆಗಿದ್ದರು. ಬಹುಶಃ ನನ್ನ ವೃತ್ತಿಜೀವನದಲ್ಲಿ ನಾನು ಆಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನಾನು ಈಗ ಅವನನ್ನು ನೋಡಿದಾಗ ಮತ್ತು ಮೈದಾನದಲ್ಲಿ ಅವರನ್ನು ಭೇಟಿಯಾದಾಗ ಅವರ ಕ್ಷಮೆಯನ್ನು ಒಪ್ಪಿಕೊಳ್ಳಬೇಕ," ಎಂದರು.

"ನಿಮ್ಮ ಕೈಯಲ್ಲಿ ಚೆಂಡಿಲ್ಲದೆ ಮತ್ತು ಮುಖದ ಮೇಲೆ ಸನ್‌ಸ್ಕ್ರೀನ್‌ಗಾಗಿ ಗುರುತು ಹಾಕದಿರುವ ನಿಮ್ಮನ್ನು ಈ ರೀತಿ ನೋಡುವುದು ತುಂಬಾ ಸಂತೋಷವಾಗಿದೆ," ಎಂದು ರಾಹುಲ್ ದ್ರಾವಿಡ್ ಹೇಳಿದರು.

"ಅಲನ್ ಡೊನಾಲ್ಡ್ ಅವರು ಭಯ ಹುಟ್ಟಿಸುವ ವೇಗದ ಬೌಲರ್ ಆಗಿದ್ದರು. ನಾನು ಅವರ ವೇಗದ ಬೌಲಿಂಗ್ ಬಗ್ಗೆ ಮಾತನಾಡಲು ಇಷ್ಟಪಡುತ್ತೇನೆ, ಅವರು ಇದೀಗ ಅತ್ಯಂತ ಯಶಸ್ವಿ ಕೋಚ್ ಆಗಿದ್ದಾರೆ. ಬಹಳಷ್ಟು ಯುವ ವೇಗದ ಬೌಲರ್‌ಗಳಿಗೆ ತರಬೇತಿ ನೀಡಿದ್ದಾರೆ. ಅವರೊಂದಿಗೆ ಸ್ಥಾನ ಹಂಚಿಕೊಳ್ಳುವ ಭಾಗ್ಯ ಅಸಾಧಾರಣವಾಗಿದೆ," ಎಂದು ರಾಹುಲ್ ದ್ರಾವಿಡ್ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Friday, December 16, 2022, 10:07 [IST]
Other articles published on Dec 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X