CWG 2014: ಕುಸ್ತಿಪಟುಗಳ ವಿಕ್ರಮ, ಪದಕಗಳ ಮಾಲೆ
ಗ್ಲಾಸ್ಕೋ, ಜು.29: ಸ್ಕಾಟ್ಲೆಂಡಿನಲ್ಲಿ ನಡೆದಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಏಳನೇ ದಿನ ಕುಸ್ತಿಪಟುಗಳು ಸಂತಸವನ್ನು ತಂದಿದ್ದಾರೆ. ವೇಟ್ ಲಿಫ್ಟಿಂಗ್, ಶೂಟಿಂಗ್ ನಲ್ಲಿ ಉತ್ತಮ ಸಾಧನೆಯ ನಂತರ ಕುಸ್ತಿಪಟುಗಳು ಚಿನ್ನದ ಬೇಟೆಯಾಡಿದ್ದಾರೆ.
ಏಳನೇ ದಿನದ ಅಂತ್ಯಕ್ಕೆ(ಜು.29) ಭಾರತ ಒಟ್ಟಾರೆ 36 ಪದಕಗಳನ್ನು ಗಳಿಸಿದೆ. ನಿರೀಕ್ಷೆಯಂತೆ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಅಮಿತ್ ಕುಮಾರ್ ಕುಸ್ತಿಯಲ್ಲಿ ವಿಕ್ರಮ ಸಾಧಿಸಿದ್ದಾರೆ. ಒಟ್ಟಾರೆ 10 ಚಿನ್ನ, 15 ಬೆಳ್ಳಿ ಹಾಗೂ 11 ಕಂಚಿನ ಪದಕ ಗೆದ್ದುಕೊಂಡಿದೆ. ದೆಹಲಿಯಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟ 2010ರಲ್ಲಿ ಭಾರತ 101 ಪದಕ (38 ಚಿನ್ನ, 27 ಬೆಳ್ಳಿ ಹಾಗೂ 36 ಕಂಚು) ಗಳಿಸಿತ್ತು.
ಜುಲೈ 29ರಂತೆ ಭಾರತದ ಪದಕ ವಿಜೇತರ ಪಟ್ಟಿ
ಚಿನ್ನ 10
* ಸುಶೀಲ್ ಕುಮಾರ್ : ಪುರುಷರ ಕುಸ್ತಿ, 75 ಕೆಜಿ ವಿಭಾಗ
* ಅಮಿತ್ ಕುಮಾರ್ : ಪುರುಷರ ಕುಸ್ತಿ, 57 ಕೆಜಿ ವಿಭಾಗ
* ವಿನೇಶ್ ಫೊಗಾತ್ : ಮಹಿಳೆಯರ ಕುಸ್ತಿ, 48 ಕೆಜಿ ವಿಭಾಗ
* ಜೆತು ರೈ : ಪುರುಷರ ಶೂಟಿಂಗ್ 50 ಮೀ ಏರ್ ರೈಫಲ್
* ಸತೀಶ್ ಶಿವಲಿಂಗಮ್: ಪುರುಷರ 77 ಕೆ.ಜಿ ವಿಭಾಗ ವೇಟ್ ಲಿಫ್ಟಿಂಗ್
* ಅಪೂರ್ವಿ ಚಾಂಡೆಲ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ರಾಹಿ ಸರ್ನೊಬಾತ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ರೈಫಲ್
* ಅಭಿನವ್ ಬಿಂದ್ರಾ : ಪುರುಷರ ಶೂಟಿಂಗ್ 10 ಮೀ ಏರ್ ರೈಫಲ್
* ಕೆ ಸಂಜೀತಾ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 173 ಕೆಜಿ, 77+96)
* ಸುಕೇನ್ ಡೇ: ಪುರುಷರ 56 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 248 ಕೆಜಿ, 109+139)

ಬೆಳ್ಳಿ 15
* ಸಂಜೀವ್ ರಾಜ್ ಪುಟ್ : ಪುರುಷರ ಶೂಟಿಂಗ್ 50 ಮೀ ಏರ್ ಪಿಸ್ತೂಲ್ 3 ಪೊಸಿಷನ್
* ಹರ್ಪೀತ್ ಸಿಂಗ್ : ಪುರುಷರ ಶೂಟಿಂಗ್ 25 ಮೀ ಫಯರ್ ಪಿಸ್ತೂಲ್
* ರಾಜೀವ್ ತೊಮಾರ್ : ಪುರುಷರ ಕುಸ್ತಿ, 125 ಕೆಜಿ ವಿಭಾಗ
* ಗುರ್ ಪಾಲ್ ಸಿಂಗ್: ಪುರುಷರ ಶೂಟಿಂಗ್ 50 ಮೀ ಏರ್ ಪಿಸ್ತೂಲ್
* ಗಗನ್ ನಾರಂಗ್: ಪುರುಷರ ಶೂಟಿಂಗ್ 50 ಮೀ ಏರ್ ಪಿಸ್ತೂಲ್
* ವಿಕಾಸ್ ಠಾಕೂರ್ : ಪುರುಷರ ವೇಟ್ ಲಿಫ್ಟಿಂಘ್, 95 ಕೆಜಿ
* ಶ್ರೇಯಸಿ ಸಿಂಗ್: ಮಹಿಳೆಯರ ಶೂಟಿಂಗ್ ಡಬಲ್ ಟ್ರಾಪ್
* ರವಿ ಕಟುಲು : ಪುರುಷರ 77 ಕೆ.ಜಿ ವಿಭಾಗ ವೇಟ್ ಲಿಫ್ಟಿಂಗ್
* ಪ್ರಕಾಶ್ ನಂಜಪ್ಪ: ಪುರುಷರ ಶೂಟಿಂಗ್ 10 ಮೀ ಏರ್ ಪಿಸ್ತೂಲ್
* ಅಯೋನಿಕಾ ಪಾಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಮಲೈಕಾ ಗೋಯಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಅನಿಶಾ ಸಯೀದ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ಪಿಸ್ತೂಲ್
* ಎಸ್ ಮಿರಾಬಾಯಿ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 170 ಕೆಜಿ, 75+95)
* ನವಜ್ಯೋತ್ ಚಾನ : ಪುರುಷರ ಜುಡೋ 60 ಕೆ.ಜಿ ವಿಭಾಗ (ಅಶ್ಲೆ ಮೆಕ್ ಕೆಂಜನಿ (ಇಂಗ್ಲೆಂಡ್) ಪೆನಾಲ್ಟಿ ಪಾಯಿಂಟ್ ನಲ್ಲಿ ಸೋಲು ಕಂಡರು)
* ಸುಶೀಲಾ ಲಿಕ್ಮಾಬಾಮ್ : ಮಹಿಳೆಯರ ಜುಡೋ 48 ಕೆ.ಜಿ ವಿಭಾಗ(ಸ್ಕಾಟ್ಲೆಂಡಿನ ಕಿಂಬರ್ಲಿ ರೆನಿಕ್ಸ್ ವಿರುದ್ಧ ಸೋಲು)
ಕಂಚು 11
* ಗಗನ್ ನಾರಂಗ್: ಪುರುಷರ ಶೂಟಿಂಗ್ 50 ಮೀ ರೈಫಲ್ 3 ಪೊಸಿಷನ್
* ಮಾನವ್ಜಿತ್ ಸಿಂಘ್ ಸಂಧು : ಪುರುಷರ ಶೂಟಿಂಗ್ ಟ್ರಾಪ್
* ಲಜ್ಜಾ ಗೋಸ್ವಾಮಿ : ಮಹಿಳೆಯರ ಶೂಟಿಂಗ್ 50 ಮೀ ರೈಫಲ್ 3 ಪೊಸಿಷನ್
* ಚಂದ್ರಕಾತ್ ಮಾಲಿ : ಪುರುಷರ ವೇಟ್ ಲಿಫ್ಟಿಂಗ್, 94 ಕೆಜಿ ವಿಭಾಗ
* ಮಹಮ್ಮದ್ ಅಸಾಬ್: ಪುರುಷರ ಶೂಟಿಂಗ್ ಡಬಲ್ ಟ್ರಾಪ್
* ಪೂನಮ್ ಯಾದವ್ : ಮಹಿಳೆಯರ ವೇಟ್ ಲಿಫ್ಟಿಂಗ್ 63 ಕೆಜಿ
* ರಾಜ್ವಿಂದರ್ ಕೌರ್ : ಮಹಿಳೆಯರ 78 ಕೆಜಿ ವಿಭಾಗ ಜುಡೋ
* ಓಂಕಾರ್ ಓಟಾರಿ: ಪುರುಷರ 69 ಕೆಜಿ ವೇಟ್ ಲಿಫ್ಟಿಂಗ್
* ಸಂತೋಷಿ ಮಾತ್ಸಾ: ಮಹಿಳೆಯರ 53 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್.
* ಕಲ್ಪನಾ ಥೌಡಮ್ : ಮಹಿಳೆ ಜುಡೋ 52 ಕೆ.ಜಿ(ಮಾರಿಷಸ್ ನ ಕ್ರಿಶ್ಚಿಯನ್ ಲೆಗೆನ್ಟಿಲ್ ಸೋಲಿಸಿದರು)
* ಗಣೇಶ್ ಮಾಲಿ : ಪುರುಷರ ವೆಟ್ ಲಿಫ್ಟಿಂಗ್ 56 ಕೆ.ಜಿ (ಒಟ್ಟಾರೆ ಲಿಫ್ಟ್ 244 ಕೆಜಿ, 111+133)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications