For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್‌‌ 2014: ಕನ್ನಡಿಗ ವಿಕಾಸ್‌ ಗೌಡಗೆ ಚಿನ್ನ

By Ashwath

ಗ್ಲಾಸ್ಗೊ, ಆ.1:ಕನ್ನಡಿಗ ವಿಕಾಸ್‌ ಗೌಡ ಕಾಮನ್‌ವೆಲ್ತ್‌ ಕ್ರೀಡಾಕೂಟದ ಡಿಸ್ಕಸ್‌ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ವಿಕಾಸ್‌ ಗೌಡ ತಮ್ಮ ಮೂರನೇ ಪ್ರಯತ್ನದಲ್ಲಿ 63.64 ಮೀಟರ್‌ ದೂರಕ್ಕೆ ಡಿಸ್ಕ್‌ ಎಸೆಯುವ ಮೂಲಕ ಈ ಸಾಧನೆ ಮಾಡಿದರು.

ಈ ಸಾಧನೆಯ ಮೂಲಕ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ತಂದು ಕೊಟ್ಟ ಗೌರವಕ್ಕೆ ವಿಕಾಸ್‌ ಗೌಡ ಪಾತ್ರರಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ತಾವು ಗೆದ್ದ ಬೆಳ್ಳಿ ಪದಕವನ್ನು ವಿಕಾಸ್ ಗೌಡ ಈಗ ಚಿನ್ನವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ.

vikas gowda

ವಿಕಾಸ್‌ ಗೌಡ ಜೊತೆಗೆ ಯೋಗೀಶ್ವರ್‌ ದತ್‌ ಮತ್ತು ಬಬಿತಾ ಕುಮಾರಿ ಗುರುವಾರ ಕಾಮನ್‌‌‌ವೆಲ್ತ್‌ ಕ್ರೀಡೆಯ ಕುಸ್ತಿಯಲ್ಲಿ ಬಂಗಾರ ಗೆದ್ದಿದ್ದಾರೆ. 9ನೇ ದಿನದ ಗೇಮ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳು 6 ಪದಕಗಳನ್ನು ಜಯಿಸಿದ್ದಾರೆ.

ತ್ರಿಪುರಾದ ದೀಪಾ ಕರ್ಮಾರ್ಕರ್‌ ಜಿಮ್ನಾಸ್ಟಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಕಾಮನ್‌‌ವೆಲ್ತ್‌‌‌‌‌ ಕ್ರೀಡಾಕೂಟದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜಿಮ್ನಾಸ್ಟಿಕ್ಸ್‌ನಲ್ಲಿ ಸ್ಪರ್ಧೆ‌ಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ. ಮಹಿಳಾ ವಾಲ್ಟ್‌‌ ಫೈನಲ್‌‌‌ನಲ್ಲಿ ಒಟ್ಟು 14,366 ಅಂಕಗಳಿಸಿ ಕಂಚಿನ ಪದಕ ಗೆದ್ದಿದ್ದಾರೆ.

ಪ್ರಸ್ತುತ 47 ಪದಕಗಳನ್ನು ಬಾಚಿರುವ ಭಾರತ ಕೂಟದಲ್ಲಿ ಐದನೇ ಸ್ಥಾನದಲ್ಲಿದೆ. 2010ರ ದೆಹಲಿಯ ಕಾಮನ್‌ ವೆಲ್ತ್‌‌ ಗೇಮ್ಸ್‌ನಲ್ಲಿ101( 38 ಚಿನ್ನ, 27 ಬೆಳ್ಳಿ 36 ಕಂಚಿನ) ಪದಕಗಳನ್ನುಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿತ್ತು.


ಜು.31 ಗುರುವಾರದ ಅಂತ್ಯಕ್ಕೆ 47(13 ಚಿನ್ನ, 20 ಬೆಳ್ಳಿ, 14 ಕಂಚಿನ)ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ -3
ಯೋಗೀಶ್ವರ್‌ ದತ್‌- ಕುಸ್ತಿ
ಬಬಿತಾ ಕುಮಾರಿ- ಕುಸ್ತಿ
ವಿಕಾಸ್‌ ಗೌಡ- ಡಿಸ್ಕಸ್‌


ಬೆಳ್ಳಿ-1
ಗೀತಿಕಾ - ಮಹಿಳೆಯರ ಕುಸ್ತಿ- 63 ಕೆ.ಜಿ. ಫ್ರೀಸ್ಟೈಲ್‌


ಕಂಚು -2
ಪವನ್‌ ಕುಮಾರ್‌- ಪುರುಷರ ಕುಸ್ತಿ- 86 ಕೆಜಿ ಫ್ರೀಸ್ಟೈಲ್‌
ದೀಪಾ ಕರ್ಮಾ‌ಕರ್‌‌ ಮಹಿಳೆಯರ ಆರ್ಟಿಸ್ಟಿಕ್‌ ಜಿಮ್ನಾಸ್ಟಿಕ್‌


ಜು.30 ಬುಧವಾರದ ಅಂತ್ಯಕ್ಕೆ 41(10 ಚಿನ್ನ, 19 ಬೆಳ್ಳಿ, 12 ಕಂಚಿನ) ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಬೆಳ್ಳಿ ಪದಕ -4
ಸತ್ಯವರ್ಥ್‌ ಕಡಿಯನ್‌- ಪುರುಷರ ಕುಸ್ತಿ, 97 ಕೆಜಿ ಫ್ರೀಸ್ಟೆಲ್‌ವಿಭಾಗ
ಭಜರಂಗ್‌- ಪುರುಷರ 61 ಕೆಜಿ ಕುಸ್ತಿ
ಲಲಿತಾ ಶೇರಾವತ್‌ - ಮಹಿಳೆಯರ ಕುಸ್ತಿ 53 ಕೆಜಿ
ಸಾಕ್ಷಿ ಮಲ್ಲಿಕ್‌- ಮಹಿಳೆಯರ ಕುಸ್ತಿ 58 ಕೆಜಿ


ಕಂಚಿನ ಪದಕ - 1
ನವಜೋತ್‌ ಕೌರ್‌- ಮಹಿಳೆಯರ ಕುಸ್ತಿ 69 ಕೆಜಿ


ಜು.29 ಮಂಗಳವಾರದ ಅಂತ್ಯಕ್ಕೆ 36(10 ಚಿನ್ನ, 15 ಬೆಳ್ಳಿ, 11ಕಂಚಿನ)ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ- 3
ಸುಶೀಲ್‌ ಕುಮಾರ್‌ - ಪುರುಷರ ಕುಸ್ತಿ 75 ಕೆಜಿ
ಅಮಿತ್‌ ಕುಮಾರ್‌ - ಪುರುಷರ ಕುಸ್ತಿ- 57 ಕೆಜಿ
ವಿನೇಶ್‌ ಪೋಗಾಟ್‌- ಮಹಿಳೆಯರ ಕುಸ್ತಿ -48 ಕೆಜಿ


ಬೆಳ್ಳಿ- 3
ಸಂಜೀವ್‌ ರಾಜ್‌ಪುತ್‌‌ -ಪುರುಷರ ಶೂಟಿಂಗ್‌ 50 ಮೀ. ರೈಫಲ್‌3
ಹರ್‌ಪ್ರೀತ್‌ ಸಿಂಗ್‌- ಪುರುಷರ ಶೂಟಿಂಗ್‌ 25 ಮೀ ರ್‍ಯಾಪಿಡ್‌ ಫೈರ್‌ ಪಿಸ್ತೂಲ್‌
ರಾಜೀವ್‌ ತೋಮರ್‌- ಪುರುಷರ 125 ಕೆಜಿ


ಕಂಚಿನ ಪದಕ- 4
ಗಗನ್‌ ನಾರಂಗ್‌- ಪುರುಷರ ಶೂಟಿಂಗ್‌ 50 ಮೀ. ರೈಫಲ್‌ 3
ಮನವ್‌‌‌ಜಿತ್‌ ಸಿಂಗ್‌ ಸಂಧು - ಪುರುಷರ ಶೂಟಿಂಗ್‌ ಟ್ರಾಪ್‌
ಲಜ್ಜಾ ಗೋಸ್ವಾಮಿ - ಪುರುಷರ ಶೂಟಿಂಗ್‌ 50 ರೈಫಲ್‌ 3
ಚಂದ್ರಕಾಂತ್‌‌ ಮಲಿ ಪುರುಷರ ವೇಟ್‌ಲಿಫ್ಟಿಂಗ್‌ 94 ಕೆಜಿ


ಜು.28 ಸೋಮವಾರದ ಅಂತ್ಯಕ್ಕೆ ಒಟ್ಟು 26(7 ಚಿನ್ನ, 12 ಬೆಳ್ಳಿ, 7ಕಂಚಿನ)ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ- 1
ಜಿತು ರೈ- ಪುರುಷರ ಶೂಟಿಂಗ್‌ 50 ಮೀ. ಪಿಸ್ತೂಲ್‌


ಬೆಳ್ಳಿ- 3
ಗುರುಪಾಲ್‌ ಸಿಂಗ್‌ - ಪುರುಷರ ಶೂಟಿಂಗ್‌ 50 ಮೀ. ಪಿಸ್ತೂಲ್‌
ಗಗನ್‌ ನಾರಂಗ್‌ -ಪುರುಷರ ಶೂಟಿಂಗ್‌ 50 ಮೀ. ರೈಫಲ್‌
ವಿಕಾಸ್‌ ಥಾಕೂರ್‌ - ಪುರುಷರ ವೇಟ್‌ಲಿಫ್ಟಿಂಗ್‌ 85 ಕೆಜಿ


ಜು.27 ಭಾನುವಾರದ ಅಂತ್ಯಕ್ಕೆ ಒಟ್ಟು 22(6 ಚಿನ್ನ, 9 ಬೆಳ್ಳಿ, 7ಕಂಚಿನ)ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ-1
ಸತೀಶ್‌ ಶಿವಲಿಂಗಮ್‌ ಪುರುಷರ ವೇಟ್‌ಲಿಫ್ಟಿಂಗ್‌ 77 ಕೆಜಿ


ಬೆಳ್ಳಿ- 2
ಶ್ರೇಯಾಸ್ವಿ ಸಿಂಗ್‌- ಮಹಿಳೆಯರ ಶೂಟಿಂಗ್‌ ಡಬಲ್‌ ಟ್ರಾಪ್‌
ರವಿ ಕಾಟುಲು ಪುರುಷರ ವೇಟ್‌ಲಿಫ್ಟಿಂಗ್‌ 77 ಕೆಜಿ


ಕಂಚು- 2
ಮಹಮ್ಮದ್‌ ಅಸಬ್‌ - ಪುರುಷರ ಶೂಟಿಂಗ್‌ ಡಬಲ್‌ ಟ್ರಾಪ್‌
ಪುನಂ ಯಾದವ್‌ - ಮಹಿಳೆಯರ ವೇಟ್‌ಲಿಫ್ಟಿಂಗ್‌ 63 ಕೆಜಿ


ಜು.26 ಶನಿವಾರದ ಅಂತ್ಯಕ್ಕೆ ಒಟ್ಟು17 (5 ಚಿನ್ನ, 7 ಬೆಳ್ಳಿ, 5ಕಂಚಿನ) ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ - 2
ಅಪೂರ್ವ‌ ಚಾಂಡಿಲ- ಮಹಿಳೆಯರ ಶೂಟಿಂಗ್‌ 10 ಮೀ. ಏರ್‌ ರೈಫಲ್‌‌
ರಹಿ ಸರ್ನ‌‌ಬಟ್‌- ಮಹಿಳೆಯರ ಶೂಟಿಂಗ್‌ 25 ಮೀ. ಪಿಸ್ತೂಲ್‌


ಬೆಳ್ಳಿ- 3
ಪ್ರಕಾಶ್‌ ನಂಜಪ್ಪ- ಪುರುಷರ ಶೂಟಿಂಗ್‌ 10 ಮೀ. ಏರ್‌ ಪಿಸ್ತೂಲ್‌
ಅಯೋನಿಕ ಪೌಲ್‌- ಮಹಿಳೆಯರ ಶೂಟಿಂಗ್‌ 10 ಮೀ ಏರ್‌ ರೈಫಲ್‌
ಅನಿಸಾ ಸಯೀದ್ ಮಹಿಳೆಯರ ಶೂಟಿಂಗ್‌ 25 ಮೀ. ಪಿಸ್ತೂಲ್‌


ಕಂಚು- 2
ರಜ್ವಿಂದರ್‌ ಕೌರ್‌- ಮಹಿಳೆಯರ +78 ಜುಡೊ
ಓಂಕಾರ್‌ ಒಟರಿ ಪುರುಷರ 69 ಕೆಜಿ ವೇಟ್‌‌‌‌ಲಿಫ್ಟಿಂಗ್‌


ಜು.25 ಶುಕ್ರವಾರದ ಅಂತ್ಯಕ್ಕೆ ಒಟ್ಟು10 (3ಚಿನ್ನ, 4 ಬೆಳ್ಳಿ, 3ಕಂಚಿನ) ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ-1
ಅಭಿನವ್‌ ಬಿಂದ್ರಾ- ಪುರುಷರ 10 ಮೀ. ಏರ್‍ ರೈಫಲ್‌ ಶೂಟಿಂಗ್‌


ಬೆಳ್ಳಿ-1
ಮಲ್ಲಿಕಾ ಗೋಯಲ್‌- ಮಹಿಳೆಯರ 10 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌


ಕಂಚು- 1
ಸಂತೋಷಿ ಮಾತ್ಸಾ- ಮಹಿಳೆಯರ 53 ಕೆಜಿ ವೇಟ್‌ಲಿಫ್ಟಿಂಗ್‌


ಜು.24 ಗುರುವಾರದ ಅಂತ್ಯಕ್ಕೆ ಒಟ್ಟು7 (2ಚಿನ್ನ, 3ಬೆಳ್ಳಿ, 2ಕಂಚಿನ) ಪದಕಗಳನ್ನು ಭಾರತದ ಕ್ರೀಡಾಪಟುಗಳು ಜಯಿಸಿದ್ದಾರೆ.


ಚಿನ್ನ- 2
ಕೆ. ಸಂಜಿತಾ ಚಾನು ಮಹಿಳೆಯರ ವೇಟ್‌ಲಿಫ್ಟಿಂಗ್‌- 48 ಕೆಜಿ ವಿಭಾಗ(ಒಟ್ಟು173 ಕೆಜಿ, 77+96)
ಸುಖನ್‌ ದೆ ಪುರುಷರ 56 ಕೆಜಿ ವಿಭಾಗ (ಒಟ್ಟು 248 ಕೆಜಿ, 109+139)


ಬೆಳ್ಳಿ-3
ಎಸ್‌ ಮೀರಾಬಾಯ್‌ ಚಾನು- ಮಹಿಳೆಯರ ವೇಟ್‌‌ಲಿಫ್ಟಿಂಗ್‌‌ 48 ಕೆಜಿ ವಿಭಾಗ( ಒಟ್ಟು ಎತ್ತಿದ್ದು 170 ಕೆಜಿ, 75+95)
ನವ್‌ಜೊತ್‌ ಚನ- ಪುರುಷರ ಜೂಡೊ 60 ಕೆಜಿ ವಿಭಾಗ
ಸುಷಿಲಾ- ಮಹಿಳೆಯರ ಜೂಡೊ 48 ವಿಭಾಗ


ಕಂಚು - 2
ಕಲ್ಪನಾ ಟಂಡನ್‌‌- ಮಹಿಳೆಯರ ಜೂಡೊ 52 ಕೆಜಿ ವಿಭಾಗ
ಗಣೇಶ್‌ ಮಾಲಿ- ಪುರುಷರ ವೇಟ್‌ಲಿಫ್ಟಿಂಗ್‌ 56 ಕೆಜಿ ವಿಭಾಗ( ಒಟ್ಟಿ ಎತ್ತಿದ್ದು 244 ಕೆಜಿ, 111+133)

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+