For Quick Alerts
ALLOW NOTIFICATIONS  
For Daily Alerts

ಕಾಮನ್‌ವೆಲ್ತ್‌ ಗೇಮ್ಸ್‌: ಟೇಬಲ್ ಟೆನಿಸ್‌ ಸಿಂಗಲ್ಸ್‌ನಲ್ಲಿ ಸ್ವರ್ಣ ಗೆದ್ದ ಅಚಂತಾ ಶರತ್ ಕಮಲ್

Achanta sharat kamal

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ 2022ರ 11 ಹಾಗೂ ಅಂತಿಮ ದಿನದಾಟದಲ್ಲಿ ಭಾರತವು ಚಿನ್ನದ ಪದಕಗಳ ಸುರಿಮಳೆಗೈದಿದೆ. ದಿನದ ಆರಂಭದಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದಿದ್ದ ಭಾರತವು, ಡಬಲ್ಸ್‌ನಲ್ಲೂ ಗೆದ್ದ ಬಳಿಕ, ಟೇಬಲ್‌ ಟೆನಿಸ್‌ನಲ್ಲೂ ಸ್ವರ್ಣ ಜಯಿಸಿದೆ.

ಪುರುಷರ ಸಿಂಗಲ್ಸ್‌ ಫೈನಲ್ ಪಂದ್ಯದಲ್ಲಿ ಭಾರತದ ಲೆಜೆಂಡರಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು 11-13, 11-7, 11-2, 11-6, 11-7 ಸೆಟ್‌ಗಳಿಂದ ಸೋಲಿಸಿ ಚಿನ್ನದ ಪದಕ ಗೆದ್ದರು.

ಎದುರಾಳಿ ಇಂಗ್ಲೆಂಡ್‌ ಆಟಗಾರನಿಗೆ ಯಾವುದೇ ಅವಕಾಶ ನೀಡದ ಅನುಭವಿ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಅದ್ಭುತ ಆಟವಾಡುವ ಮೂಲಕ ಭಾರತಕ್ಕೆ 22ನೇ ಚಿನ್ನದ ಪದಕ ಜಯಿಸಿಕೊಟ್ಟಿದ್ದಾರೆ. ಸೋಮವಾರ ಭಾರತವು ನಾಲ್ಕು ಚಿನ್ನದ ಪದಕ ಹಾಗೂ ಒಂಚು ಕಂಚಿನ ಪದಕವನ್ನ ತನ್ನದಾಗಿಸಿಕೊಂಡಿದೆ.

ಅಚಂತಾ ಶರತ್ ಕಮಲ್ ಒಟ್ಟಾರೆ ಕಾಮನ್‌ವೆಲ್ತ್‌ ಗೇಮ್ಸ್ ಇತಿಹಾಸದಲ್ಲಿ ಟೇಬಲ್ ಟೆನಿಸ್ ವಿವಿಧ ವಿಭಾಗದಲ್ಲಿ ಏಳನೇ ಚಿನ್ನದ ಪದಕವನ್ನು ಜಯಿಸಿದ್ದು ತನ್ನ ದಾಖಲೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಯುವ ಬ್ಯಾಡ್ಮಿಂಟನ್ ತಾರೆ ಲಕ್ಷ್ಯಸೇನ್‌, ಮಲೇಷಿಯಾದ 22 ವರ್ಷದ ಯುವ ಆಟಗಾರ ಎನ್‌ಜಿ ಟಾಜಿ ಯಾಂಗ್ ಅವರೊಂದಿಗೆ ಕಾದಾಟ ನಡೆಸಿ ಸ್ವರ್ಣ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದಕ್ಕೂ ಮೊದಲು ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಸ್ವರ್ಣ ಪದಕ ಜಯಿಸಿದ್ದಾರೆ.

ಇದಾದ ಬಳಿಕ ಪುರುಷರ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಭಾರತದ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಇಂಗ್ಲೆಂಡ್‌ನ ಸೇನ್ ವೆಂಡಿ ಮತ್ತು ಬೆನ್ ಲೇನ್‌ ಜೋಡಿ ವಿರುದ್ಧ 21-15, 21-12 ನೇರ ಗೇಮ್‌ಗಳಿಂದ ಗೆಲ್ಲುವ ಮೂಲಕ ಚಿನ್ನಕ್ಕೆ ಮುತ್ತಿಟ್ಟಿತು.

ಒಟ್ಟಾರೆ ಕ್ರೀಡಾಕೂಟದಲ್ಲಿ ಭಾರತ 22 ಚಿನ್ನದ ಪದಕ 16 ಬೆಳ್ಳಿ, 23 ಕಂಚಿನ ಪದಕಗಳೊಂದಿಗೆ ಒಟ್ಟಾರೆ 61 ಪದಕಗಳನ್ನ ಗೆದ್ದುಕೊಂಡಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ.

11ನೇ ಅಥವಾ ಅಂತಿಮ ದಿನದಲ್ಲಿ ಭಾರತಕ್ಕೆ ಬಂದ ಪದಕಗಳು:
4 ಚಿನ್ನದ ಪದಕಗಳು: ಪಿವಿ ಸಿಂಧು (ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್), ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ / ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್ ಬ್ಯಾಡ್ಮಿಂಟನ್), ಅಚಂತಾ ಶರತ್ ಕಮಲ್ (ಪುರುಷರ ಟೇಬಲ್ ಟೆನಿಸ್ ಸಿಂಗಲ್ಸ್)
1 ಬೆಳ್ಳಿ ಪದಕ : ಭಾರತೀಯ ಪುರುಷರ ಹಾಕಿ ತಂಡ
1 ಕಂಚಿನ ಪದಕ : ಜಿ ಸಂಥಿಯಾನ್ (ಪುರುಷರ ಸಿಂಗಲ್ಸ್ ಟೇಬಲ್ ಟೆನಿಸ್)

Story first published: Monday, August 8, 2022, 18:45 [IST]
Other articles published on Aug 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+