ಕಾಮನ್‌ವೆಲ್ತ್ ಗೇಮ್ಸ್ 2022: 11ನೇ ದಿನದಲ್ಲಿ ಭಾರತದ ಪ್ರಮುಖ ಸ್ಪರ್ಧೆಗಳ ವೇಳಾಪಟ್ಟಿ

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ಗೇಮ್ಸ್ 2022ರ ಕ್ರೀಡಾಕೂಟ ಅಂತಿಮ ಹಾಗೂ 11ನೇ ದಿನದ ಸ್ಪರ್ಧೆಗಳಲ್ಲಿ ಭಾರತವು ಮತ್ತಷ್ಟು ಪದಕಗಳ ಗೆಲ್ಲುವ ನಿರೀಕ್ಷೆ ಹೊಂದಿದೆ. 10 ದಿನದಲ್ಲಿ ಒಟ್ಟು 15 ಪದಕಗಳನ್ನ ತನ್ನ ಮಡಿಲಿಗೆ ಹಾಕಿಕೊಂಡ ಭಾರತ, ಅಂತಿಮ ದಿನದಲ್ಲಿ ಚಿನ್ನದ ಪದಕಗಳಿಗೆ ಗುರಿಯಿಟ್ಟಿದೆ.
10ನೇ ದಿನದ ಸ್ಪರ್ಧೆಯಲ್ಲಿ ಒಟ್ಟು ಐದು ಚಿನ್ನದ ಪದಕ ಸೇರಿದಂತೆ ಒಟ್ಟು 15 ಪದಕಗಳನ್ನ ಗೆದ್ದಿರುವ ಭಾರತ ಪದಕಗಳ ಸಂಖ್ಯೆಯನ್ನ 55ಕ್ಕೆ ಏರಿಸಿದೆ. ಪದಕಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಭಾರತವು ನ್ಯೂಜಿಲೆಂಡ್‌ಗಿಂತ ಕೇವಲ ಒಂದು ಚಿನ್ನದ ಪದಕಗಳ ಹಿನ್ನಡೆಯಲ್ಲಿದೆ. ಹೀಗಾಗಿ ಅಂತಿಮ ದಿನದಲ್ಲಿ ಭಾರತವು ಹೆಚ್ಚಿನ ಸ್ವರ್ಣ ಪದಕಗಳನ್ನ ಗೆದ್ದುಕೊಂಡು ನಾಲ್ಕನೇ ಸ್ಥಾನವನ್ನ ಪಡೆಯಲಿದ್ಯಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕಾಮನ್‌ವೆಲ್ತ್ ಗೇಮ್ಸ್ 2022ರ 11ನೇ ದಿನದ ಕ್ರೀಡಾಕೂಟದಲ್ಲಿ ಭಾರತವು ಯಾವೆಲ್ಲ ಪ್ರಮುಖ ಪದಕಗಳ ಸ್ಪರ್ಧೆಯನ್ನಾಡಲಿದೆ ಎಂಬುದನ್ನ ಈ ಕೆಳಗೆ ತಿಳಿಯಿರಿ.

ಬ್ಯಾಡ್ಮಿಂಟನ್
ಭಾರತವು ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೋಮವಾರ ಹೆಚ್ಚಿನ ಪದಕಗಳ ನಿರೀಕ್ಷೆಯಲ್ಲಿದೆ. ಇದಕ್ಕೆ ಕಾರಣ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧು, ಲಕ್ಷ್ಯ ಸೇನ್ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಸ್ಪರ್ಧಿಸುತ್ತಿದ್ದು, ಸಾತ್ವಿಕ್ ಮತ್ತು ಚಿರಾಗ್ ಪುರುಷರ ಡಬಲ್ಸ್ ಜೋಡಿ ಫೈನಲ್‌ನಲ್ಲಿ ಸ್ವರ್ಣ ಪದಕಕ್ಕೆ ಪೈಪೋಟಿ ನಡೆಸಲಿದೆ.
ಪಿ.ವಿ. ಸಿಂಧು ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ 2014ರ ಕಾಮನ್‌ವೆಲ್ತ್ ಚಾಂಪಿಯನ್ ಮಿಚೆಲ್ ಲಿ ಅವರನ್ನು ಎದುರಿಸಲಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ನಡೆಯಲಿದೆ.
ಬ್ಯಾಡ್ಮಿಂಟರ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಲಕ್ಷ್ಯಸೇನ್, ಮಲೇಷಿಯಾದ 22 ವರ್ಷದ ಯುವ ಆಟಗಾರ ಎನ್‌ಜಿ ಟಾಜಿ ಯಾಂಗ್ ಅವರೊಂದಿಗೆ ಕಾದಾಟ ನಡೆಸಲಿದ್ದು, ಪಂದ್ಯವು ಮಧ್ಯಾಹ್ನ 2.10ಕ್ಕೆ ಪ್ರಾರಂಭಗೊಳ್ಳಲಿದೆ.
ಇನ್ನು ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಸಾತ್ವಿಕ್ ಮತ್ತು ಚಿರಾಗ್ ಜೋಡಿ ಸ್ಪರ್ಧಿಸುತ್ತಿದ್ದು, ಇಂಗ್ಲೆಂಡ್‌ನ ಸೇನ್ ವೆಂಡಿ ಮತ್ತು ಬೆನ್ ಲೇನ್ ಜೋಡಿ ವಿರುದ್ಧ ಸ್ವರ್ಣ ಪದಕಕ್ಕೆ ಹೋರಾಟ ನಡೆಸಲಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಕಾಮನ್‌ವೆಲ್ತ್ ಗೇಮ್ಸ್ 2022: 10ನೇ ದಿನದಲ್ಲಿ ಭಾರತಕ್ಕೆ ಸಿಕ್ಕ ಪದಕಗಳೆಷ್ಟು? ಎಷ್ಟನೇ ಸ್ಥಾನ?

ಹಾಕಿ
ಭಾರತದ ಪುರುಷರ ಹಾಕಿ ತಂಡವು ಇಂದು ಸ್ವರ್ಣ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದು, ಫೈನಲ್‌ನಲ್ಲಿ ಬಲಿಷ್ಟ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಶನಿವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್ ಪುರುಷರ ಹಾಕಿ ಸೆಮಿಫೈನಲ್‌ನಲ್ಲಿ ಭಾರತ 3-2 ಗೋಲುಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್ ತಲುಪಿದೆ.
ಮತ್ತೊಂದೆಡೆ ಆಸ್ಟ್ರೇಲಿಯಾ ಎರಡನೇ ಸೆಮಿಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನ ಸೋಲಿಸಿ ಫೈನಲ್ ಪ್ರವೇಶಿಸಿದ್ದು ಭಾರತಕ್ಕೆ ಸವಾಲೊಡ್ಡಲಿದೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 5 ಗಂಟೆಗೆ ನಡೆಯಲಿದ್ದು, ಪಂದ್ಯವನ್ನು ಡಿಡಿ ಸ್ಪೋರ್ಟ್ಸ್, ಸೋನಿ ಟೆನ್ 3 ಹಾಗೂ ಸೋನಿ ಲಿವ್ ಆ್ಯಪ್‌ನಲ್ಲಿ ವೀಕ್ಷಿಸಬಹುದಾಗಿದೆ.
CWG 2022 ಮಹಿಳಾ ಕ್ರಿಕೆಟ್: ಹರ್ಮನ್ ಹೋರಾಟ ವ್ಯರ್ಥ: ರೋಚಕ ಪಂದ್ಯದಲ್ಲಿ ಮಣಿದ ಭಾರತಕ್ಕೆ ಬೆಳ್ಳಿ

ಟೇಬಲ್ ಟೆನಿಸ್
ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಈಗಾಗಲೇ ಕೆಲವು ಪದಕಗಳನ್ನ ತನ್ನದಾಗಿಸಿಕೊಂಡಿರುವ ಭಾರತವು ಅಂತಿಮ ದಿನದ ಹೋರಾಟದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕಕ್ಕಾಗಿ ಹಾಗೂ ಕಂಚಿನ ಪದಕಕ್ಕಾಗಿ ಹೋರಾಟ ನಡೆಸಲಿದೆ.
ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ದೇಶದ ಟೇಬಲ್ ಟೆನಿಸ್ ಲೆಜೆಂಡ್ ಅಚಂತಾ ಶರತ್ ಕಮಲ್, ಇಂಗ್ಲೆಂಡ್‌ನ ಲಿಯಾಮ್ ಪಿಚ್ಫೋರ್ಡ್ ವಿರುದ್ಧ ಸ್ವರ್ಣ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ. ಪಂದ್ಯವು ಭಾರತೀಯ ಕಾಲಮಾನ ಸಂಜೆ 4.25ಕ್ಕೆ ನಡೆಯಲಿದೆ.
ಇದಕ್ಕೂ ಮೊದಲು ಪುರುಷರ ಸಿಂಗಲ್ಸ್ ಕಂಚಿನ ಪದಕದ ಸ್ಪರ್ಧೆಯಲ್ಲಿ ಭಾರತದ ಜಿ. ಸತ್ಯನ್ ಅವರು ಬ್ರಿಟಿಶ್ ಟೇಬಲ್ ಟೆನಿಸ್ ಆಟಗಾರ ಪೌಲ್ ಡ್ರಿಂಕ್‌ಹಾಲ್ ವಿರುದ್ಧ ಪದಕಕ್ಕೆ ಪೈಪೋಟಿ ನಡೆಸಲಿದ್ದಾರೆ. ಈ ಪಂದ್ಯವು ಮಧ್ಯಾಹ್ನ 3.35ಕ್ಕೆ ಪ್ರಾರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications