CWG 2022 ಮಹಿಳಾ ಕ್ರಿಕೆಟ್: ಹರ್ಮನ್ ಹೋರಾಟ ವ್ಯರ್ಥ: ರೋಚಕ ಪಂದ್ಯದಲ್ಲಿ ಮಣಿದ ಭಾರತಕ್ಕೆ ಬೆಳ್ಳಿ

ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಕ್ರಿಕೆಟ್ ವಿಭಾಗದಲ್ಲಿ ಭಾರತ ಚಿನ್ನದ ಪದಕವನ್ನು ಗೆಲ್ಲುವ ಅದ್ಭುತ ಅವಕಾಶವನ್ನು ಸಣ್ಣ ಅಂತರದಿಂದ ಕಳೆದುಕೊಂಡಿದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಹೋರಾಟವನ್ನು ಪ್ರದರ್ಶಿಸಿದರೂ ಭಾರತದ ಪಾಲಿಗೆ ಗೆಲುವು ಸಾಧ್ಯವಾಗಲಿಲ್ಲ. ಕೇವಲ 9 ರನ್‌ಗಳ ಅಂತರದಿಂದ ಭಾರತ ಆಸ್ಟ್ರೇಲಿಯಾಗೆ ಶತಣಾಗಿದ್ದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದೆ. ಮಹಿಳಾ ಕ್ರಿಕೆಟ್‌ನಲ್ಲಿನ ಚೊಚ್ಚಲ ಚಿನ್ನದ ಪದಕವನ್ನು ಆಸ್ಟ್ರೇಲಿಯಾ ಕೊರಳಿಗೇರಿಸಿಕೊಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 161 ರನ್‌ಗಳನ್ನು ಗಳಿಸಲು ಶಕ್ತವಾಯಿತು. ಭಾರತ ತಂಡದ ಬೌಲಿಂಗ್ ವಿಭಾಗ ಅಂತಿಮ ಹಂತದಲ್ಲಿ ಅಮೋಘ ಬೌಲಿಂಗ್ ಪ್ರದರ್ಶಿಸಿದ ಕಾರಣ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಗುರಿ ನಿಡಲು ವಿಫಲವಾಗಿ ಸವಾಲಿನ ಮೊತ್ತ ಸೇರಿಸಲಷ್ಟೇ ಶಕ್ತವಾಯಿತು. ಈ ಗುರಿಯನ್ನು ರೋಚಕವಾಗಿ ಬೆನ್ನಟ್ಟಿದ ಭಾರತದ ಆಟಗಾರ್ತಿಯರು ಅಂತಿಮವಾಗಿ 9 ರನ್‌ಗಳ ಅಂತರದಿಂದ ಶರಣಾದರು.

CWG 2022: 9ನೇ ದಿನ; ಕುಸ್ತಿಯಲ್ಲಿ 3 ಚಿನ್ನ, ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ 1 ಚಿನ್ನ ಗೆದ್ದ ಭಾರತೀಯರುCWG 2022: 9ನೇ ದಿನ; ಕುಸ್ತಿಯಲ್ಲಿ 3 ಚಿನ್ನ, ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ 1 ಚಿನ್ನ ಗೆದ್ದ ಭಾರತೀಯರು

ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

ಸವಾಲಿನ ಗುರಿ ನೀಡಿದ ಆಸ್ಟ್ರೇಲಿಯಾ

ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕ ಆಟಗಾರ್ತಿ ಬೆತ್ ಮೂನಿ ಬ್ಯಾಟಿಂಗ್ ಬಲ ನೀಡಿತು. 41 ಎಸೆತಗಳಲ್ಲಿ 61 ರನ್ ಬಾರಿಸಿ ಮೂನಿ ಮಿಂಚಿದರು. ನಾಯಕಿ ಲ್ಯಾನ್ನಿಂಗ್ 3 ರನ್‌ಗಳ ಕೊಡುಗೆ ನೀಡಿದರು. ಭಾರತದ ಪರವಾಗಿ ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಹಾಗೂ ಸ್ನೇಹ್ ರಾಣಾ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ತಂಡ 161 ರನ್‌ಗಳನ್ನು ಗಳಿಸಲು ಯಶಸ್ವಿಯಾಯಿತು.

ಆರಂಭಿಕರ ವೈಫಲ್ಯ

ಆರಂಭಿಕರ ವೈಫಲ್ಯ

ಆಸ್ಟ್ರೇಲಿಯಾ ನೀಡಿದ ಗುರಿಯನ್ನು ಬೆನ್ನಟ್ಟಿದ ಭಾರತದ ಪರವಾಗಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧಾನ ವೈಫಲ್ಯ ಅನುಭವಿಸಿದರು. ತಂಡದ ಮೊತ್ತ 22 ಆಗುವಷ್ಟರಲ್ಲಿ ಇಬ್ಬರು ಆರಂಭಿಕರು ಕೂಡ ಫೆವಿಲಿಯನ್ ಸೇರಿಕೊಂಡಿದ್ದರು. ಆದರೆ ನಂತರ ಬ್ಯಾಟಿಂಗ್‌ಗೆ ಇಳಿದ ಜೆಮಿಮಾ ರೋಡ್ರಿಗಸ್ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 96 ರನ್‌ಗಳ ಅಮೂಲ್ಯ ಜೊತೆಯಾಟವನ್ನು ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ತಂಡ ಕುಸಿತವನ್ನು ಕಂಡಿತು.

ಹರ್ಮನ್‌-ಜಮಿಮಾ ಹೋರಾಟ

ಹರ್ಮನ್‌-ಜಮಿಮಾ ಹೋರಾಟ

ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಜಮಿಮಾ ರೋಡ್ರಿಗಸ್ ಪ್ರದರ್ಶನ ಭಾರತಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಈ ಜೋಡಿ ಬೇರ್ಪಡುವುದರೊಂದಿಗೆ ಭಾರತದ ಕುಸಿತ ಆರಂಭವಾಯಿತು. 33 ರನ್‌ಗಳಿಸಿದ ಜಮಿಮಾ ಬೌಲ್ಡ್ ಆಗಿ ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತದ ಕುಸಿತ ಆರಂಭವಾಯಿತು. ನಂತರ ನಾಯಕಿ ಹರ್ಮನ್‌ಪ್ರೀತ್ ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಭಾರತಕ್ಕೆ ಜೊತೆಯಾಟ ಲಭ್ತವಾಗಲೇ ಇಲ್ಲ. ಹೀಗಾಗಿ ಕೇವಲ 9 ರನ್‌ಗಳ ಅಂತರದಿಂದ ಭಾರತ ಸೋಲು ಅನುಭವಿಸಬೇಕಾಯಿತು.

ಪ್ಲೇಯಿಂಗ್ XI ಹೀಗಿದೆ

ಪ್ಲೇಯಿಂಗ್ XI ಹೀಗಿದೆ

ಭಾರತ ಮಹಿಳಾ ತಂಡ ಆಡುವ ಬಳಗ: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಸ್ನೇಹ ರಾಣಾ, ತನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಮೇಘನಾ ಸಿಂಗ್, ರೇಣುಕಾ ಸಿಂಗ್
ಬೆಂಚ್: ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ

ಆಸ್ಟ್ರೇಲಿಯಾ ಮಹಿಳಾ ತಂಡ ಆಡುವ ಬಳಗ: ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕಿ), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್
ಬೆಂಚ್: ಎಲ್ಲೀಸ್ ಪೆರ್ರಿ, ನಿಕೋಲಾ ಕ್ಯಾರಿ, ಅಮಂಡಾ ವೆಲ್ಲಿಂಗ್ಟನ್, ಅನ್ನಾಬೆಲ್ ಸದರ್ಲ್ಯಾಂಡ್

ಭಾರತದ ಪರವಾಗಿ ಈವರೆಗೆ ಪದಕ ಗೆದ್ದ ಕ್ರೀಡಾಪಟುಗಳು

ಸಂಕೇತ್ ಸರ್ಗರ್: ಪುರುಷರ 55 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಗುರುರಾಜ ಪೂಜಾರಿ ಪುರುಷರ 61 ಕೆಜಿ ವೇಟ್ ಲಿಫ್ಟಿಂಗ್: ಕಂಚು
ಮೀರಾಬಾಯಿ ಚಾನು: ಮಹಿಳೆಯರ 49 ಕೆಜಿ ವೇಟ್ ಲಿಫ್ಟಿಂಗ್: ಚಿನ್ನ
ಬಿಂದ್ಯಾರಾಣಿ ದೇವಿ: ಮಹಿಳೆಯರ 55 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಜೆರೆಮಿ ಲಾಲ್ರಿನ್ನುಂಗಾ: ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್: ಚಿನ್ನ
ಅಚಿಂತಾ ಶೆಯುಲಿ: ಪುರುಷರ 73 ಕೆಜಿ ವೇಟ್‌ಲಿಫ್ಟಿಂಗ್: ಚಿನ್ನ
ಸುಶೀಲಾ ದೇವಿ : ಮಹಿಳೆಯರ 48 ಕೆಜಿ ಜೂಡೋ: ಬೆಳ್ಳಿ
ವಿಜಯ್ ಕುಮಾರ್ ಯಾದವ್: ಪುರುಷರ 60 ಕೆಜಿ ಜೂಡೋ: ಕಂಚು
ಹರ್ಜಿಂದರ್ ಕೌರ್: ಮಹಿಳೆಯರ 71 ಕೆಜಿ ವೇಟ್ ಲಿಫ್ಟಿಂಗ್: ಕಂಚು
ಭಾರತ ವನಿತೆಯರ ತಂಡ ಮಹಿಳಾ ಲಾನ್ ಬೌಲ್: ಚಿನ್ನ
ವಿಕಾಸ್ ಠಾಕೂರ್: ಪುರುಷರ 96 ಕೆಜಿ ವೇಟ್ ಲಿಫ್ಟಿಂಗ್: ಬೆಳ್ಳಿ
ಭಾರತ ಪುರುಷರ ತಂಡ: ಟೇಬಲ್ ಟೆನಿಸ್: ಚಿನ್ನ
ಭಾರತ ಮಿಶ್ರ ತಂಡ ಮಿಶ್ರ ತಂಡ ಬ್ಯಾಡ್ಮಿಂಟನ್: ಬೆಳ್ಳಿ
ಲವ್‌ಪ್ರೀತ್ ಸಿಂಗ್: ಪುರುಷರ 109 ಕೆಜಿ ವೇಟ್‌ಲಿಫ್ಟಿಂಗ್: ಕಂಚು
ಸೌರವ್ ಘೋಸಲ್: ಪುರುಷರ ಸಿಂಗಲ್ಸ್ ಸ್ಕ್ವಾಷ್: ಕಂಚು
ತುಲಿಕಾ ಮಾನ್: ಮಹಿಳೆಯರ +78 ಕೆಜಿ ಜೂಡೋ; ಬೆಳ್ಳಿ
ಗುರುದೀಪ್ ಸಿಂಗ್ ಪುರುಷರ +109 ಕೆಜಿ ವೇಟ್‌ಲಿಫ್ಟಿಂಗ್: ಕಂಚು
ತೇಜಸ್ವಿನ್ ಶಂಕರ್: ಪುರುಷರ ಹೈಜಂಪ್ ಅಥ್ಲೆಟಿಕ್ಸ್: ಕಂಚಿನ ಪದಕ
ಮುರಳಿ ಶ್ರೀಶಂಕರ್: ಪುರುಷರ ಲಾಂಗ್ ಜಂಪ್ ಅಥ್ಲೆಟಿಕ್ಸ್: ಬೆಳ್ಳಿ
ಸುಧೀರ್ ಪುರುಷರ ಹೆವಿವೇಟ್ ಪ್ಯಾರಾ ಪವರ್ ಲಿಫ್ಟಿಂಗ್ ಚಿನ್ನ
ಅಂಶು ಮಲಿಕ್: ಮಹಿಳೆಯರ 57 ಕೆಜಿ ಫ್ರೀಸ್ಟೈಲ್ ಕುಸ್ತಿ: ಬೆಳ್ಳಿ
ಬಜರಂಗ್ ಪುನಿಯಾ: ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ಸಾಕ್ಷಿ ಮಲಿಕ್: ಮಹಿಳೆಯರ 62 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ದೀಪಕ್ ಪುನಿಯಾ: ಪುರುಷರ 86 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ದಿವ್ಯಾ ಕಕ್ರಾನ್: ಮಹಿಳೆಯರ 68 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಮೋಹಿತ್ ಗ್ರೆವಾಲ್: ಪುರುಷರ 125 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಪ್ರಿಯಾಂಕಾ ಗೋಸ್ವಾಮಿ: ಮಹಿಳೆಯರ 10000 ಮೀಟರ್ ಓಟದ ನಡಿಗೆ: ಬೆಳ್ಳಿ
ಅವಿನಾಶ್ ಮುಕುಂದ್ ಸಾಬ್ಲೆ: ಪುರುಷರ 3000 ಮೀಟರ್ ಸ್ಟೀಪಲ್ ಚೇಸ್ : ಬೆಳ್ಳಿ
ಭಾರತ ಪುರುಷರ ತಂಡ ಪುರುಷರ ಲಾನ್ ಬೌಲ್‌: ಬೆಳ್ಳಿ
ಜೈಸ್ಮಿನ್ ಲಂಬೋರಿಯಾ: ಮಹಿಳೆಯರ 60 ಕೆಜಿ ಬಾಕ್ಸಿಂಗ್: ಕಂಚು
ಪೂಜಾ ಗೆಹ್ಲೋಟ್: ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ರವಿಕುಮಾರ್ ದಹಿಯಾ: ಪುರುಷರ 57 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ವಿನೇಶ್ ಫೋಗಟ್: ಮಹಿಳೆಯರ 53 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ನವೀನ್: ಪುರುಷರ 74 ಕೆಜಿ ಫ್ರೀಸ್ಟೈಲ್ ಕುಸ್ತಿ: ಚಿನ್ನ
ಪೂಜಾ ಸಿಹಾಗ್: ಮಹಿಳೆಯರ 76 ಕೆಜಿ ಫ್ರೀಸ್ಟೈಲ್ ಕುಸ್ತಿ: ಕಂಚಿನ ಪದಕ
ಹುಸ್ಸಾಮ್ ಉದ್ದೀನ್ ಮೊಹಮ್ಮದ್: ಪುರುಷರ 54 ಕೆಜಿ- 57 ಕೆಜಿ ಫೆದರ್‌ವೇಟ್ ಬಾಕ್ಸಿಂಗ್: ಕಂಚು
ದೀಪಕ್ ನೆಹ್ರಾ: ಪುರುಷರ ಫ್ರೀಸ್ಟೈಲ್ 97 ಕೆಜಿ ಕುಸ್ತಿ: ಕಂಚಿನ ಪದಕ
ಸೋನಾಲ್ಬೆನ್ ಮನುಭಾಯ್ ಪಟೇಲ್: ಮಹಿಳೆಯರ ಸಿಂಗಲ್ಸ್ ಪ್ಯಾರಾ ಟೇಬಲ್ ಟೆನಿಸ್: ಕಂಚು
ರೋಹಿತ್ ಟೋಕಾಸ್ ಪುರುಷರ 63.5 ಕೆಜಿ-67 ಕೆಜಿ ಓವರ್ ವೆಲ್ಟರ್ ವೇಟ್ ಬಾಕ್ಸಿಂಗ್: ಕಂಚು
ಭಾವಿನಾ ಹಸ್ಮುಖಭಾಯ್ ಪಟೇಲ್: ಮಹಿಳಾ ಸಿಂಗಲ್ಸ್ ಪ್ಯಾರಾ ಟೇಬಲ್ ಟೆನಿಸ್: ಚಿನ್ನ
ಮಹಿಳಾ ಹಾಕಿ ತಂಡ: ಕಂಚಿನ ಪದಕ
ನಿತು ಘಂಗಾಸ್: ಮಹಿಳೆಯರ 48 ಕೆಜಿ ಕನಿಷ್ಠ ತೂಕ ಬಾಕ್ಸಿಂಗ್: ಚಿನ್ನದ ಪದಕ
ಅಮಿತ್ ಪಂಗಲ್: ಪುರುಷರ 51 ಕೆಜಿ ಫ್ಲೈವೇಟ್ ಬಾಕ್ಸಿಂಗ್: ಚಿನ್ನದ ಪದಕ
ಎಲ್ಡೋಸ್ ಪಾಲ್: ಪುರುಷರ ಟ್ರಿಪಲ್ ಜಂಪ್ ಅಥ್ಲೆಟಿಕ್ಸ್: ಚಿನ್ನದ ಪದಕ
ಅಬ್ದುಲ್ಲಾ ಅಬೂಬಕರ್: ಪುರುಷರ ಟ್ರಿಪಲ್ ಜಂಪ್ ಅಥ್ಲೆಟಿಕ್ಸ್: ಬೆಳ್ಳಿ
ಸಂದೀಪ್ ಕುಮಾರ್: ಪುರುಷರ 10000 ಮೀ ಓಟದ ನಡಿಗೆ ಅಥ್ಲೆಟಿಕ್ಸ್: ಕಂಚು
ಅನ್ನು ರಾಣಿ: ಮಹಿಳೆಯರ ಜಾವೆಲಿನ್ ಥ್ರೋ ಅಥ್ಲೆಟಿಕ್ಸ್: ಕಂಚು
ನಿಖತ್ ಜರೀನ್: ಮಹಿಳೆಯರ 50 ಕೆಜಿ ಲೈಟ್ ಫ್ಲೈವೇಟ್ ಬಾಕ್ಸಿಂಗ್: ಚಿನ್ನದ ಪದಕ
ಶರತ್ ಕಮಲ್/ ಜಿ ಸತ್ಯನ್: ಪುರುಷರ ಡಬಲ್ಸ್ ಟೇಬಲ್ ಟೆನಿಸ್: ಬೆಳ್ಳಿ ಪದಕ
ಭಾರತ ಮಹಿಳಾ ಕ್ರಿಕೆಟ್ ತಂಡ: ಬೆಳ್ಳಿ ಪದಕ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, August 8, 2022, 0:59 [IST]
Other articles published on Aug 8, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X