ರಸ್ಲರ್ ವಿನೇಶ್ ಫೋಗಾಟ್‌ಗೆ ಟೋಕಿಯೋ ಒಲಿಂಪಿಕ್ಸ್ ಪದಕ ಗೆಲ್ಲೋ ಕನಸು

ನವದೆಹಲಿ, ಮೇ 1: ಗೋಲ್ಡ್ ಕೋಸ್ಟ್ ಗೇಮ್ಸ್ ವನಿತಾ ರಸ್ಲಿಂಗ್ ಚಾಂಪಿಯನ್ ವಿನೇಶ್ ಫೋಗಾಟ್ ಗೆ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದು ಇತಿಹಾಸ ನಿರ್ಮಿಸುವ ಕನಸು. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್ ನ ವನಿತಾ ವಿಭಾಗದ ರಸ್ಲಿಂಗ್ 50 ಕೆಜಿ ಸ್ಪರ್ಧೆಯಲ್ಲಿ ವಿನೇಶ್ ಚಿನ್ನದ ಪದಕ ಕೊರಳೇರಿಸಿಕೊಂಡಿದ್ದರು. 2016ರ ರಿಯೋ ಒಲಿಂಪಿಕ್ಸ್ ನಲ್ಲೂ ವಿನೇಶ್ ಪದಕದ ನಿರೀಕ್ಷೆ ಮೂಡಿಸಿದ್ದರಲ್ಲದೆ ಅದಕ್ಕಾಗಿ ಕೊಸರಾಡಿದ್ದರೂ ಕೂಡ. ಆದರೆ ಮೊಣಕಾಲು ಗಾಯಕ್ಕೆ ತುತ್ತಾದ ಕಾರಣ ವಿನೇಶ್‌ಗೆ ಪದಕ ಒಲಿದಿರಲಿಲ್ಲ.
ಗೋಲ್ಡ್ ಕೋಸ್ಟ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ವಿನೇಶ್ ಸುಶೀಲ್ ಕುಮಾರ್ ಜೊತೆ.
ಕಳೆದ ವರ್ಷ ಸದ್ದು ಮಾಡಿದ್ದ ಅಮೀರ್ ಖಾನ್ ಅಭಿನಯದ ಬಾಲಿವುಡ್ ಚಿತ್ರ 'ದಂಗಲ್'ನಲ್ಲಿ ಕಾಣಿಸಲಾಗಿದ್ದ ಫೋಗಾಟ್ ಫ್ಯಾಮಿಲಿಯವರಾದ ವಿನೇಶ್, ರಿಯೋ ಪದಕ ನಿರಾಸೆಯನ್ನು ಗೋಲ್ಡ್ ಕೋಸ್ಟ್ ಪದಕದ ಮೂಲಕ ಕೊಂಚ ಮಟ್ಟಿಗೆ ಸರಿದೂಗಿಸಿಕೊಂಡಿದ್ದರು.
'ಮುಂದಿನ ವರ್ಷ ಒಲಿಂಪಿಕ್ಸ್ ಗೆ ಅರ್ಹತಾ ಸ್ಪರ್ಧೆಗಳು ನಡೆಯಲಿವೆ. ನಂತರ ತಯಾರಿಯೂ ಆರಂಭಗೊಳ್ಳಲಿದೆ. ಒಲಿಂಪಿಕ್ಸ್ ಗೆ ಇನ್ನೂ ಸಾಕಷ್ಟು ಸಮಯ ಇದೆ. ಆದರೆ ನಾನು ಈಗಾಗಲೇ ಟೋಕಿಯೋ ಒಲಿಂಪಿಕ್ಸ್ ನತ್ತ ದೃಷ್ಟಿ ನೆಟ್ಟಿದ್ದೇನೆ' ಎಂದು ಸಂದರ್ಶನವೊಂದರಲ್ಲಿ ಫೋಗಾಟ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications