ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕ ಎಂಎಸ್ ಧೋನಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರೂ, ವಿವಿಧ ವಾಣಿಜ್ಯ ಒಪ್ಪಂದಗಳು, ಐಪಿಎಲ್ ಒಪ್ಪಂದ ಮತ್ತು ಜಾಹೀರಾತುಗಳ ಮೂಲಕ ವಾರ್ಷಿಕ ನೂರಾರು ಕೋಟಿ ರೂಪಾಯಿ ಗಳಿಸುತ್ತಾರೆ. ಹೀಗಾಗಿ ಅವರ ಬ್ರಾಂಡ್ ಮೌಲ್ಯ ಇನ್ನೂ ಕಡಿಮೆಯಾಗಿಲ್ಲ.

ಭಾರತೀಯ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಗಳಿಸಿದ್ದರೂ, ಎಂಎಸ್ ಧೋನಿ ರಾಂಚಿ ನಗರವನ್ನು ತೊರೆಯಲು ನಿರಾಕರಿಸಿದರು ಮತ್ತು ಅಲ್ಲೇ ವಾಸಿಸುತ್ತಿದ್ದಾರೆ.

ಎಂಎಸ್ ಧೋನಿ ತಮ್ಮ ಮಗಳಿಗೂ ಕೂಡ ಅದೇ ಭಾವನೆ ತುಂಬಲು ಬಯಸುತ್ತಾರೆ. ಧೋನಿ ಪತ್ನಿ ಸಾಕ್ಷಿ 2015ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆ ಸಮಯದಲ್ಲಿ ಎಂಎಸ್ ಧೋನಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು ಮತ್ತು ಏಕದಿನ ವಿಶ್ವಕಪ್ ಟ್ರೋಫಿ ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಮಗಳು ಝಿವಾ ಜನಿಸಿದಾಗ, ಧೋನಿ ಭಾರತದಲ್ಲಿ ಇರಲಿಲ್ಲ.
ತನ್ನ ದೇಶವನ್ನು ಪ್ರತಿನಿಧಿಸಲು ಮತ್ತು ಮುನ್ನಡೆಸಲು ಎಂಎಸ್ ಧೋನಿ ತಮ್ಮ ಕುಟುಂಬದ ಅತಿ ದೊಡ್ಡ ಕ್ಷಣಗಳನ್ನು ತ್ಯಾಗ ಮಾಡಿದರು. ಇದು ಮುಂಬರುವ ಯುವ ಕ್ರಿಕೆಟಿಗರಿಗೆ ಮಾದರಿಯಾಗಬಹುದು. ಇನ್ನು ಮಗಳು ಝಿವಾಳನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಬೆಳೆಸಲಾಗುತ್ತಿದೆ.
ಸದ್ಯ 8 ವರ್ಷ ವಯಸ್ಸಿನ ಝಿವಾ ರಾಂಚಿಯಲ್ಲಿಯೇ ಶಾಲೆಗೆ ಹೋಗುತ್ತಿದ್ದು, 3ನೇ ತರಗತಿ ಓದುತ್ತಿದ್ದಾಳೆ. ಶಾಲೆಯಲ್ಲಿ ಅತಿ ಬುದ್ಧಿವಂತಳು ಎಂದು ತಿಳಿದುಬಂದಿದೆ. ಝಿವಾ ಧೋನಿ ಹೋಗುವ ಶಾಲೆಯ ಹೆಸರು ರಾಂಚಿಯ ಟೌರಿಯನ್ ವರ್ಲ್ಡ್ ಸ್ಕೂಲ್.
ಝಿವಾ ಧೋನಿಯ ಶಾಲಾ ಶುಲ್ಕ ಎಷ್ಟು?
ಟೌರಿಯನ್ ವರ್ಲ್ಡ್ ಸ್ಕೂಲ್ ರಾಂಚಿಯ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಹೀಗಾಗಿ ಶಾಲೆಯ ವಾರ್ಷಿಕ ಶುಲ್ಕವೂ ಹೆಚ್ಚಾಗಿಯೇ ಇರುತ್ತದೆ. ದೊಡ್ಡ ಸೆಲೆಬ್ರಿಟಿ ಆಗಿರುವ ಎಂಎಸ್ ಧೋನಿ ತನ್ನ ಮಗಳು ಶೈಕ್ಷಣಿಕ, ಕ್ರೀಡೆ ಅಥವಾ ಕಲೆಯಲ್ಲಿ ಹಿಂದೆ ಉಳಿಯಲು ಬಯಸುವುದಿಲ್ಲ.
ಝಿವಾ ಧೋನಿ ಓದುತ್ತಿರುವ ಶಾಲೆಯು ಆಕೆ ಚೆನ್ನಾಗಿ ಕಲಿಯಲು ಎಲ್ಲಾ ಸಂಪನ್ಮೂಲಗಳನ್ನು ಒದಗಿಸುತ್ತದೆ. ಝಿವಾಳನ್ನು ಈ ಶಾಲೆಗೆ ಕಳುಹಿಸಲು ಎಂಎಸ್ ಧೋನಿ ಭರಿಸುತ್ತಿರುವ ಶುಲ್ಕ ಕೇಳಿದರೆ ನೀವು ಅಚ್ಚರಿ ಪಡುತ್ತೀರಾ.
ಟೌರಿಯನ್ ವರ್ಲ್ಡ್ ಸ್ಕೂಲ್‌ನ ಶುಲ್ಕ ರಚನೆಯನ್ನು ಶಾಲೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಡೇ ಸ್ಕಾಲರ್ ವಿದ್ಯಾರ್ಥಿಗಳು (ಗ್ರೇಡ್ 2ರಿಂದ 8 ವರೆಗೆ) ವಾರ್ಷಿಕವಾಗಿ 2,75,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಝಿವಾ ಧೋನಿ ಅವರು 3ನೇ ತರಗತಿಯಲ್ಲಿ ಓದುತ್ತಿರುವಾ ಕಾರಣ, ಅವಳ ಶಾಲಾ ವಾರ್ಷಿಕ ಶುಲ್ಕವೂ ಅಷ್ಟೇ ಇರುತ್ತದೆ. ಝಿವಾ ಕೂಡ ಡೇ ಸ್ಕಾಲರ್ ವಿದ್ಯಾರ್ಥಿನಿಯಾಗಿದ್ದು, ಆಕೆಯ ಮಾಸಿಕ ಶುಲ್ಕವು 23,000 ರೂಪಾಯಿ ಆಗಿದೆ.
ಒಂದು ವೇಳೆ ಝಿವಾ ಧೋನಿ ಈ ಶಾಲೆಯ ಬೋರ್ಡಿಂಗ್‌ನಲ್ಲಿದ್ದಿದ್ದರೆ, ಎಂಎಸ್ ಧೋನಿ ತನ್ನ ಮಗಳ ಶಾಲಾ ಶುಲ್ಕವಾಗಿ ವರ್ಷಕ್ಕೆ 4,40,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತಿತ್ತು ಎಂಬುದನ್ನು ಮರೆಯಬಾರದು.
ಈ ಮೊತ್ತವು ಕೋಟ್ಯಂತರ ಆಸ್ತಿ ಹೊಂದಿರುವ ಧೋನಿಗೆ ದೊಡ್ಡದಾಗಿರುವುದಿಲ್ಲ. ಇನ್ನು ಝಿವಾ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಅವಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2.3 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಮೈದಾನದಲ್ಲಿ ತನ್ನ ಎಂಎಸ್ ಧೋನಿಗಾಗಿ ಝಿವಾ ಹುರಿದುಂಬಿಸುವುದನ್ನು ಕಾಣಬಹುದು. ಝಿವಾ ತನ್ನ ತಂದೆ ಧೋನಿಯ ವಿಶ್ವದ ಅತಿ ದೊಡ್ಡ ಅಭಿಮಾನಿಯಾಗಿದ್ದಾಳೆ ಎಂಬುದನ್ನು ಸೂಚಿಸುತ್ತದೆ.