Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೋಪಿಂಗ್ ಟೆಸ್ಟ್ ನಲ್ಲಿ ಭಾರತದ ವೇಯ್ಟ್ ಲಿಫ್ಟರ್ ಸಂಜಿತಾ ಫೇಲ್!

Doping: Sanjita Chanu, Commonwealth Games gold medal-winning weightlifter tests positive

ನವದೆಹಲಿ, ಮೇ 31: ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಚಾಂಪಿಯನ್ ವೇಯ್ಟ್ ಲಿಫ್ಟರ್ ಸಂಜಿತಾ ಚಾನು ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಎರಡು ಬಾರಿ ಚಾಂಪಿಯನ್ ಸಂಜಿತಾ ಅವರು ನಿಷೇಧಿತ ಅನಾಬೋಲಿಕ್ ಸ್ಟೆರಾಯ್ಡ್ ಸೇವಿಸಿರುವುದು ಪತ್ತೆಯಾಗಿದೆ.

ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕಾಮನ್ ವೆಲ್ತ್ ಗೇಮ್ಸ್ (ಗೋಲ್ಡ್ ಕೋಸ್ಟ್ ನಲ್ಲಿ ನಡೆದ) ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕೆ ಸಂಜಿತಾ ಅವರು, ಅನಾಬೋಲಿಕ್ ಸ್ಟೆರಾಯ್ಡ್(testosterone) ಹೊಂದಿರುವುದು ಪತ್ತೆಯಾಗಿದ್ದು ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಅಂತಾರಾಷ್ಟ್ರೀಯ ವೇಯ್ಟ್ ಲಿಫ್ಟಿಂಗ್ ಫೆಡೆರೇಷನ್ (ಐಡಬ್ಲ್ಯೂ ಎಫ್) ತನ್ನ ವೆಬ್ ಸೈಟ್ ನಲ್ಲಿ ಬರೆದುಕೊಂಡಿದೆ.

ಉದ್ದೀಪನ ಮದ್ದು ಸೇವನೆ ನಿಷೇಧ ನಿಯಮದ ಅನ್ವಯ, ಚಾನು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಒಂದು ವೇಳೆ, ಇದು ಅಕಸ್ಮಾತ್ ಆಗಿ ಸೇವಿಸಿ, ಆಗಿರುವ ಪ್ರಮಾದ ಎಂದು ಸಾಬೀತಾದರೆ, ಮುಂದಿನ ನಿರ್ಣಯವನ್ನು ಪ್ರಕಟಿಸಲಾಗುವುದು ಎಂದು ಫೆಡರೇಷನ್ ಹೇಳಿದೆ.

ಸದ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ಅಭ್ಯಾಸ ನಿರತರಾಗಿದ್ದ ಸಂಜಿತಾ ಅವರು ಮಣಿಪುರಕ್ಕೆ ವಾಪಸ್ ಆಗಿದ್ದಾರೆ. 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್ ವೆಲ್ತ್ ಗೇಮ್ಸ್ ನಲ್ಲೂ ಚಿನ್ನದ ಪದಕ ಗೆದ್ದಿದ್ದರು. ಆದರೆ, ಚಾನು ಅವರ ಸ್ಯಾಂಪಲ್ ಯಾವಾಗ ತೆಗೆದುಕೊಳ್ಳಲಾಯಿತು, ಉದ್ದೀಪನ ಪರೀಕ್ಷೆ ನಡೆಸಿದ್ದು ಯಾವಾಗ? ಪರೀಕ್ಷೆ ವಿವರಗಳು ಏನು? ಎಂಬುದರ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ಯಾವುದೇ ದೇಶ 2008ರಿಂದ 2020 ರ ಅವಧಿಯಲ್ಲಿ 20ಕ್ಕೂ ಅಧಿಕ ಡೋಪಿಂಗ್ ಪಾಸಿಟಿವ್ ಪ್ರಕರಣಗಳನ್ನು ಹೊಂದಿದ್ದರೆ, ಆ ದೇಶದಿಂಡ ಕೇವಲ ಇಬ್ಬರು ಸ್ಪರ್ಧಿಗಳಿಗೆ ಅವಕಾಶ ನೀಡಲಾಗುತ್ತದೆ. ಭಾರತದ ವಿಷಯದಲ್ಲಿ ಇಲ್ಲಿ ತನಕ 12 ವೇಯ್ಟ್ ಲಿಫ್ಟರ್ ಗಳು ಪಾಸಿಟಿವ್ ಎಂದು ವರದಿ ಬಂದಿದೆ.

Story first published: Thursday, May 31, 2018, 23:55 [IST]
Other articles published on May 31, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+