Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಹಣಕಾಸಿನ ಕೊರತೆ: ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಟ್ಟ ದ್ಯುತೀ ಚಂದ್

Dutee Chand Puts BMW on Sale to Cover Training Costs

ಜೈಪುರ, ಜುಲೈ 11: ಭಾರತದ ಸ್ಟಾರ್ ಅಥ್ಲೀಟ್ ದ್ಯುತೀ ಚಂದ್ ತನ್ನ ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಟ್ಟಿದ್ದಾರೆ. ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಪ್ರಾಯೋಜಕರಿಂದ ಬರುತ್ತಿದ್ದ ಆದಾಯವಿಲ್ಲದೆ ಟೋಕಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿರುವ ದ್ಯುತಿಗೆ ಹಣಕಾಸಿ ಸಮಸ್ಯೆ ಎದುರಾಗಿದೆ. ಹೀಗಾಗಿ ದ್ಯುತೀ ತನ್ನಲ್ಲಿದ್ದ ದುಬಾರಿ ಕಾರನ್ನು ಮಾರಾಟಕ್ಕಿಡಲು ನಿರ್ಧರಿಸಿದ್ದಾರೆ.

ತಾನು ಬಿಎಂಡಬ್ಲ್ಯೂ ಕಾರು ಮಾರಾಟಕ್ಕಿಡುತ್ತಿರುವುದನ್ನು ದ್ಯುತೀ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಆ ಬಳಿಕ ದ್ಯುತೀ ತನ್ನ ಪೋಸ್ಟನ್ನು ಡಿಲೀಟ್ ಮಾಡಿದ್ದರು. ಅಂದ್ಹಾಗೆ ದ್ಯುತೀ ಮಾರಾಟಕ್ಕಿಟ್ಟಿರುವ ಕಾರು 2015 ಬಿಎಂಡಬ್ಲ್ಯೂ 3-ಸೀರೀಸ್ ಮಾದರಿಯದ್ದು. ಇದನ್ನು ದ್ಯುತೀ 30 ಲಕ್ಷ ರೂ.ಗೆ ಖರೀದಿಸಿದ್ದರು.

'ಕೊರೊನಾ ಪಿಡುಗಿನ ಕಾರಣ ಯಾವುದೇ ಪ್ರಾಯೋಜಕರು ನನ್ನ ಅಭ್ಯಾಸಕ್ಕೆ ಹಣ ಖರ್ಚು ಮಾಡಲು ಮುಂದಾಗುತ್ತಿಲ್ಲ. ನಾನು ಟೋಕಿಯೋ ಒಲಿಂಪಿಕ್ಸ್‌ಗೆ ತಯಾರಿ ನಡೆಯುತ್ತಿರುವುದರಿಂದ ಅಭ್ಯಾಸಕ್ಕೆ ಮತ್ತು ಆಹಾರಕ್ಕೆ ನನಗೆ ಹಣದ ಅವಶ್ಯಕತೆಯಿದೆ. ಹೀಗಾಗಿ ನಾನು ಕಾರು ಮಾರಲು ನಿರ್ಧರಿಸಿದ್ದೇನೆ,' ಎಂದು ದ್ಯುತೀ ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ.

2018ರಲ್ಲಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ದ್ಯುತೀ ಚಂದ್ 100 ಮೀ. ಮತ್ತು 200 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆ ಕ್ರೀಡಾಕೂಟದಲ್ಲಿನ ಉತ್ತಮ ಪ್ರದರ್ಶನಕ್ಕಾಗಿ ಒಡಿಶಾ ಸರ್ಕಾರಾ ದ್ಯುತೀಗೆ ನಗದು ಪುರಸ್ಕಾರ ನೀಡಿತ್ತು. ಈ ಹಣದಲ್ಲಿ ದ್ಯುತೀ ಬಿಎಂಡಬ್ಲ್ಯೂ ಕಾರು ಖರೀದಿಸಿದ್ದರು.

Story first published: Saturday, July 11, 2020, 17:42 [IST]
Other articles published on Jul 11, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+