
ಲಿಯೋನೆಲ್ ಮೆಸ್ಸಿ ನಂತರ ಕೈಲಿಯನ್ ಎಂಬಪ್ಪೆ ಎರಡನೇ ಸ್ಥಾನ
ಗೋಲ್ಡನ್ ಬಾಲ್ ರೇಸ್‌ನಲ್ಲಿ ಲಿಯೋನೆಲ್ ಮೆಸ್ಸಿ ನಂತರ ಕೈಲಿಯನ್ ಎಂಬಪ್ಪೆ ಎರಡನೇ ಸ್ಥಾನ ಪಡೆದರು. ಕ್ರೊಯೇಷಿಯಾ ನಾಯಕ ಲೂಕಾ ಮೊಡ್ರಿಕ್ ಮೂರನೇ ಸ್ಥಾನ ಪಡೆದರು.
ಇದೀಗ ಭಾರತದ ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಲಿಯೋನೆಲ್ ಮೆಸ್ಸಿ ಮತ್ತು ಅರ್ಜೆಂಟೀನಾ ತಂಡ ಫಿಫಾ ಫುಟ್ಬಾಲ್ ವಿಶ್ವಕಪ್ ಗೆದ್ದಿರುವುದನ್ನು 2011ರ ಕ್ರಿಕೆಟ್‌ನಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದ ಪ್ರದರ್ಶನಕ್ಕೆ ಹೋಲಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಎರಡು ಅಭಿಯಾನಗಳಿಗೆ ವ್ಯತಿರಿಕ್ತವಾದ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು "ಭಾರತದಲ್ಲಿ ನಡೆದ 2011ರ ಕ್ರಿಕೆಟ್ ವಿಶ್ವಕಪ್‌ನ ಚಾಂಪಿಯನ್‌ಗಳು, 2022ರಲ್ಲಿ ನೀವು ಏನು ಮಾಡುತ್ತೀರಿ?" ಎಂದು ಹಂಚಿಕೊಂಡಿದ್ದರು.

2003ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು
ಸಾಮಾಜಿಕ ಮಾಧ್ಯಮಗಳಲ್ಲಿ ಫಿಫಾ ವಿಶ್ವಕಪ್ 2022 ಮತ್ತು ಏಕದಿನ ಕ್ರಿಕೆಟ್ ವಿಶ್ವಕಪ್ 2011ರಲ್ಲಿ ಕ್ರಮವಾಗಿ ಸಚಿನ್ ತೆಂಡೂಲ್ಕರ್ ಮತ್ತು ಲಿಯೋನೆಲ್ ಮೆಸ್ಸಿ ಅವರ ಪ್ರದರ್ಶನಗಳನ್ನು ಹೋಲಿಸಲಾಗಿದೆ.
ಇಬ್ಬರೂ ಎರಡು ಪ್ರತ್ಯೇಕ ಕ್ರೀಡೆಗಳ ಆಡಿದ್ದಾರೆ ಮತ್ತು ದಂತಕಥೆಗಳಾಗಿದ್ದಾರೆ. ಆದರೂ ಇಬ್ಬರು ಕೆಲವು ಸಾಮಾನ್ಯ ಸಾಮ್ಯತೆಗಳನ್ನು ಹೊಂದಿದ್ದಾರೆ. 2011ರಲ್ಲಿ ಸಚಿನ್ ತೆಂಡೂಲ್ಕರ್ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಭಾರತವು 2003ರ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು ಮತ್ತು ಎಂಟು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಶ್ರೀಲಂಕಾವನ್ನು ಸೋಲಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಗೆದ್ದರು.

ತೆಂಡೂಲ್ಕರ್ ಮತ್ತು ಮೆಸ್ಸಿ ಒಂದೇ ಜೆರ್ಸಿ ಸಂಖ್ಯೆಯನ್ನು ಹೊಂದಿದ್ದಾರೆ
ಸಚಿನ್ ತೆಂಡೂಲ್ಕರ್ ಮತ್ತು ಲಿಯೋನೆಲ್ ಮೆಸ್ಸಿ ಒಂದೇ ಜೆರ್ಸಿ (10) ಸಂಖ್ಯೆಯನ್ನು ಹೊಂದಿದ್ದಾರೆ. 2011ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸಚಿನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇನ್ನು ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ 2014ರ ವಿಶ್ವಕಪ್ ಅನ್ನು ಸೋತಿತ್ತು. ಅದಾದ ಎಂಟು ವರ್ಷಗಳ ನಂತರ 2022ರ ಫಿಫಾ ವಿಶ್ವಕಪ್ ಫೈನಲ್‌ಗೆ ಎಂಟ್ರಿಯಾಯಿತು ಮತ್ತು ಫ್ರಾನ್ಸ್ ವಿರುದ್ಧ ಗೆದ್ದು ಬೀಗಿತು. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಕ್ರೊಯೇಷಿಯಾ ವಿರುದ್ಧದ ಉತ್ತಮ ಪ್ರದರ್ಶನಕ್ಕಾಗಿ ಮೆಸ್ಸಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಫೈನಲ್‌ಗೂ ಮುನ್ನ ಅರ್ಜೆಂಟೀನಾ ಮತ್ತು ಫ್ರಾನ್ಸ್ ತಲಾ ಎರಡು ವಿಶ್ವಕಪ್ ಗೆದ್ದಿದ್ದವು. 1986ರಲ್ಲಿ ಅರ್ಜೆಂಟೀನಾ ಅಂತಿಮ ವಿಶ್ವಕಪ್ ವಿಜಯವನ್ನು ಕಂಡಿತ್ತು. ಈ ಮಧ್ಯೆ ಫ್ರಾನ್ಸ್ ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಆಗಿತ್ತು. ಸೌದಿ ಅರೇಬಿಯಾ ವಿರುದ್ಧದ ಅನಿರೀಕ್ಷಿತ ಸೋಲಿನೊಂದಿಗೆ ಅರ್ಜೆಂಟೀಯಾದ ವಿಶ್ವಕಪ್ ಅಭಿಯಾನ ಪ್ರಾರಂಭವಾಯಿತು. ಇದೇ ವೇಳೆ ಗ್ರೂಪ್ ಹಂತದಲ್ಲಿ ಫ್ರಾನ್ಸ್‌ಗೆ ಟುನೀಶಿಯಾ ಆಘಾತ ನೀಡಿತ್ತು.

ವೃತ್ತಿಜೀವನದ ಮೊದಲ ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಮೆಸ್ಸಿ
ಅಂತಿಮವಾಗಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿಯಲ್ಲಿ 4-2ರಿಂದ ಸೋಲಿಸಿ ನೂತನ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ತನ್ನ ವೃತ್ತಿಜೀವನದ ಮೊದಲ ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟರು. ಇದಕ್ಕೂ ಮುನ್ನ ಹೆಚ್ಚುವರಿ ಸಮಯದ ನಂತರ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಂದ್ಯವು ಸಮಬಲ ಸಾಧಿಸಿತ್ತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಅರ್ಜೆಂಟೀನಾ ವಿಜಯಶಾಲಿಯಾಯಿತು.


Click it and Unblock the Notifications
