'ಟೋಕಿಯೋ ಒಲಿಂಪಿಕ್ಸ್ ಎಂಜಾಯ್ ಮಾಡುತ್ತಾ ಸ್ಪರ್ಧಿಸಿ': ಭಾರತೀಯರಿಗೆ ಸಚಿನ್ ಕರೆ

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಎಂಜಾಯ್ ಮಾಡುತ್ತ ಸ್ಪರ್ಧಿಸಿ, ಒತ್ತಡವನ್ನು ಪಕ್ಕದಲ್ಲಿಡಿ ಎಂದು ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗಾಗಿ ತೆರಳಿರುವ ಅಥ್ಲೀಟ್‌ಗಳಿಗೆ ವರ್ಚುಯಲ್ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಸಚಿನ್ ಕ್ರೀಡಾಳುಗಳಿಗೆ ಸ್ಫೂರ್ತಿ ತುಂಬಿದ್ದಾರೆ.
ಇಂಡಿಯನ್ ಸ್ಪೋರ್ಟ್ಸ್ ಫೆಡರೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿನ್ ತೆಂಡೂಲ್ಕರ್, ಒತ್ತಡವನ್ನು ಅನುಭವಿಸದೆ ಖುಷಿಯಾಗಿ ನಿಮ್ಮ ಕನಸಿನ ಪದಕ ಗೆಲ್ಲಲು ಯತ್ನಿಸಿ ಎಂದು ಶುಭಹಾರೈಸಿದ್ದಾರೆ. ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ ನಡೆಯಲಿದೆ.
"ಬಹಳಷ್ಟು ಮಂದಿ ಹೇಳ್ತಾರೆ, ಕ್ರೀಡೆಯಲ್ಲಿ ಸೋಲು ಗೆಲುವು ಇದ್ದಿದ್ದೇ ಅಂತ. ಆದರೆ ನನ್ನ ಸಂದೇಶ ಏನೆಂದರೆ, ಸೋಲೇನಿದ್ದೂ ಅದು ನಿಮ್ಮ ಪ್ರತಿಸ್ಪರ್ಧಿಗಳಿಗೆ. ನಿಮ್ಮದೇನಿದ್ದೂ ಗೆಲುವು ಆಗಿಬೇಕು. ಪದಕ ಗೆಲ್ಲುವ ಗುರಿ ನಿಮ್ಮದಾಗಿರಬೇಕು," ಎಂದು ಸಚಿನ್ ಹೇಳಿದ್ದಾರೆ.
"ನಿಮ್ಮ ಕನಸಿನ ಬೆಂಬತ್ತಿ ಹೋಗೋದನ್ನು ನಿಲ್ಲಿಸಬೇಡಿ. ಒಲಿಂಪಿಕ್ಸ್ ಪದಕ ನಿಮ್ಮ ಕೊರಳ ಮೇಲಿರಬೇಕು. ಆ ವೇಳೆ ರಾಷ್ಟ್ರಗೀತೆ ಮೊಳಗಿ ಹೆಮ್ಮೆ ಉಕ್ಕಿ ಬರಬೇಕು; ಅಂಥ ಕನಸು ಕಾಣಿ," ಎಂದು ತೆಂಡೂಲ್ಕರ್ ಸ್ಫೂರ್ತಿ ತುಂಬಿದ್ದಾರೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಇಬ್ಬರು ಮೀಸಲು ಆಟಗಾರರಲ್ಲದೆ ಒಟ್ಟಾರೆ 127 ಮಂದಿ ಅಥ್ಲೀಟ್‌ಗಳು ಭಾರತದಿಂದ ಸ್ಪರ್ಧಿಸುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications