For Quick Alerts
ALLOW NOTIFICATIONS  
For Daily Alerts

Hardik Pandya: ಈ ವಿಚಾರದಲ್ಲಿ ಇತಿಹಾಸ ಸೃಷ್ಟಿಸಿದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿದ ಹಾರ್ದಿಕ್ ಪಾಂಡ್ಯ

Hardik Pandya Becomes Youngest Cricketer To Reach 25 Million Followers On Instagram

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಮತ್ತು ಐಪಿಎಲ್‌ನ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸದ್ಯ ಕ್ರಿಕೆಟ್‌ನಲ್ಲಿ ಉತ್ತುಂಗದಲ್ಲಿದ್ದು, ಭಾರತ ಟಿ20 ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

2022ರಲ್ಲಿ ಚೊಚ್ಚಲ ಬಾರಿಗೆ ಐಪಿಎಲ್ ಪ್ರವೇಶಿಸಿದ ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ನೇಮಕಗೊಂಡರು ಮತ್ತು ಅದೇ ವರ್ಷ ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದರು. ಇದೀಗ ಭಾರತ ತಂಡದ ಪೂರ್ಣ ಸಮಯದ ಟಿ20 ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಸೋಮವಾರ, ಮಾರ್ಚ್ 6ರಂದು ಹಾರ್ದಿಕ್ ಪಾಂಡ್ಯ ಅವರು ತಮ್ಮ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ 25 ಮಿಲಿಯನ್ ಅನುಯಾಯಿಗಳನ್ನು (ಫಾಲೋವರ್ಸ್) ತಲುಪಿದ ವಿಶ್ವದ ಅತ್ಯಂತ ಕಿರಿಯ ಕ್ರಿಕೆಟಿಗ ಎನಿಸಿದರು.

ಇದೇ ವೇಳೆ ರಾಫೆಲ್ ನಡಾಲ್, ರೋಜರ್ ಫೆಡರರ್, ಮ್ಯಾಕ್ಸ್ ವರ್ಸ್ಟಪ್ಪೆನ್ ಮತ್ತು ಎರ್ಲಿಂಗ್ ಹಾಲೆಂಡ್ ಅವರಂತಹ ಕೆಲವು ವಿಶ್ವದ ತಾರೆಗಳಿಗಿಂತ ಹಾರ್ದಿಕ್ ಪಾಂಡ್ಯ ಹೆಚ್ಚಿನ ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ.

Hardik Pandya Becomes Youngest Cricketer To Reach 25 Million Followers On Instagram

ಹಾರ್ದಿಕ್ ಪಾಂಡ್ಯ ಪ್ರಸ್ತುತ ಇನ್‌ಸ್ಟಾಗ್ರಾಮ್‌ನಲ್ಲಿ 25.1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, "ನಿಮ್ಮ ಪ್ರೀತಿಗಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಪ್ರತಿಯೊಬ್ಬ ಅಭಿಮಾನಿಗಳು ನನಗೆ ವಿಶೇಷ ಮತ್ತು ಈ ವರ್ಷಗಳಲ್ಲಿ ಅವರು ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ," ಎಂದು ಸಾಮಾಜಿಕ ಮಾಧ್ಯಮದ ಅನುಯಾಯಿಯಾಗಿದ್ದಕ್ಕೆ ತಮ್ಮ ಅಭಿಮಾನಿಗಳಿಗೆ ಹಾರ್ದಿಕ್ ಪಾಂಡ್ಯ ಕೃತಜ್ಞತೆ ಸಲ್ಲಿಸಿದರು.

ಹಾರ್ದಿಕ್ ಪಾಂಡ್ಯ ಅವರು 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು. 29ನೇ ವಯಸ್ಸಿನಲ್ಲಿ ಅವರು ಭಾರತೀಯ ತಂಡದ ಏಕದಿನ ಹಾಗೂ ಟಿ20 ಮತ್ತು ಐಪಿಎಲ್‌ನಲ್ಲಿ ಪ್ರಮುಖ ಆಟಗಾರನಾಗಿದ್ದಾರೆ.

ಹಾರ್ದಿಕ್ ಪಾಂಡ್ಯ 2018ರಿಂದ ಟೆಸ್ಟ್‌ ಪಂದ್ಯಗಳಿಗೆ ಆಯ್ಕೆಯಾಗಿಲ್ಲ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿರುವ ಭಾರತೀಯ ಟೆಸ್ಟ್ ತಂಡದ ಭಾಗವಾಗಿಲ್ಲ.

2021ರಿಂದ 2022 ರವರೆಗೆ ಕಾಡಿದ ಬೆನ್ನುನೋವಿನಿಂದ ಹಾರ್ದಿಕ್ ಪಾಂಡ್ಯ ವೃತ್ತಿಜೀವನದ ದೊಡ್ಡ ಏರಿಳಿತ ಕಂಡರು. ಐಪಿಎಲ್ ವೇಳೆಗೆ ಚೇತರಿಸಿಕೊಂಡು, ಜೂನ್ 2022ರಿಂದ ಭಾರತದ ವೈಟ್‌ಬಾಲ್ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಆಲ್‌ರೌಂಡರ್ ಆಗಿದ್ದಾರೆ.

Hardik Pandya Becomes Youngest Cricketer To Reach 25 Million Followers On Instagram

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅವರು ರೋಹಿತ್ ಶರ್ಮಾ ಅವರಿಗೆ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಪೂರ್ಣಪ್ರಮಾಣದ ನಾಯಕತ್ವ ವಹಿಸಿಕೊಳ್ಳಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ನಂತರ, ಹಾರ್ದಿಕ್ ಪಾಂಡ್ಯ 2023ರ ಋತುವಿನಲ್ಲಿ ಐಪಿಎಲ್ ಪ್ರಶಸ್ತಿ ಉಳಿಸಿಕೊಳ್ಳಲು ಗುಜರಾತ್ ಟೈಟನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. 2023ರ ಐಪಿಎಲ್ ಪಂದ್ಯಾವಳಿ ಮಾರ್ಚ್ 31ರಂದು ಪ್ರಾರಂಭವಾಗಲಿದ್ದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.

ಐಪಿಎಲ್ 2022ರಲ್ಲಿ ಹಾರ್ದಿಕ್ ಪಾಂಡ್ಯ 15 ಪಂದ್ಯಗಳಲ್ಲಿ ನಾಲ್ಕು ಅರ್ಧ ಶತಕಗಳೊಂದಿಗೆ 131.2 ಸ್ಟ್ರೈಕ್ ರೇಟ್‌ನಲ್ಲಿ 487 ರನ್ ಗಳಿಸಿದರು. ಇದರಲ್ಲಿ ಅಜೇಯ 87 ರನ್ ಗಳಿಸಿ ಉತ್ತಮ ಸ್ಕೋರ್ ಆಗಿದೆ. ಬೌಲಿಂಗ್‌ನಲ್ಲಿ 27.75 ಸರಾಸರಿಯಲ್ಲಿ 8 ವಿಕೆಟ್‌ಗಳನ್ನು ಪಡೆದರು.

Story first published: Tuesday, March 7, 2023, 8:58 [IST]
Other articles published on Mar 7, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+