ಚಿತ್ರಗಳಲ್ಲಿ ಕಾಮನ್ ವೆಲ್ತ್ ನಲ್ಲಿ ಪದಕ ಗೆದ್ದ ಕನ್ನಡಿಗರು
ಗ್ಲಾಸ್ಗೊ, ಅ.4: ಇಪ್ಪತ್ತನೇ ಕಾಮನ್‌ವೆಲ್ತ್ ಕ್ರೀಡಾಕೂಟ ನಿನ್ನೆ ಮುಕ್ತಾಯಗೊಂಡಿದ್ದು ಆರಂಭದ ದಿನದಿಂದಲೂ ಪದಕಗಳನ್ನು ಬೇಟೆಯಾಡುತ್ತಾ ಬಂದ ಭಾರತ ತಂಡವು 64 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಪದಕ ವಿಜೇತರ ಪೈಕಿ ಏಳು ಜನ ಕನ್ನಡಿಗರು ಸೇರಿರುವುದು ಹೆಮ್ಮೆಯ ವಿಚಾರ.
ಕೊನೆ ದಿನ ಕೂಡ ಪುರುಷರ ಸಿಂಗಲ್ಸ್ ಬ್ಯಾಡ್‌ಮಿಂಟನ್‌ನಲ್ಲಿ ಕಶ್ಯಪ್ ಚಿನ್ನದ ಪದಕ ಗೆದ್ದುಕೊಂಡರೆ, ಮಹಿಳೆಯರ ಡಬಲ್ಸ್ ಬ್ಯಾಡ್‌ಮಿಂಟನ್‌ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಹಾಗೂ ಪುರುಷರ ಹಾಕಿ ತಂಡವು ರಜತ ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಮೂಲಕ ಭಾರತ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 64 ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು.
ಟಾಪ್ 5 ತಂಡಗಳು: 58 ಚಿನ್ನ ,59 ಬೆಳ್ಳಿ ಹಾಗೂ 57 ಕಂಚಿನ ಪದಕಗಳೊಂದಿಗೆ ಒಟ್ಟು 174 ಪದಕಗಳ ಬೇಟೆಯಾಡಿದ ಇಂಗ್ಲೆಂಡ್ ಅಗ್ರಸ್ಥಾನ ಪಡೆದುಕೊಂಡರೆ, ಹಾಕಿಯಲ್ಲಿ ಸ್ವರ್ಣ ಪದಕ ಗಳಿಸಿದ ಆಸ್ಟ್ರೇಲಿಯಾ 49 ಚಿನ್ನ , 42 ಬೆಳ್ಳಿ ಹಾಗೂ 46 ಕಂಚಿನ ಪದಕಗಳೊಂದಿಗೆ ಒಟ್ಟು 137 ಪದಕಗಳನ್ನು ಗಳಿಸುವ ಮೂಲಕ ಎರಡನೆ ಸ್ಥಾನ ಅಲಂಕರಿಸಿತು. ಉಳಿದಂತೆ ಕೆನಡಾ 82 ಪದಕ, ಅತಿಥೇಯ ಸ್ಕಾಟ್‌ಲೆಂಡ್ ತಂಡ 53 ಪದಕಗಳೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಪಡೆದುಕೊಂಡಿವೆ.

ವಿಕಾಸ್ ಗೌಡ, ಡಿಸ್ಕಸ್, ಚಿನ್ನ
ಮೈಸೂರು ಮೂಲದ ವಿಕಾಸ್ ಗೌಡ ಅವರು ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಜೋಶ್ನಾ ಚಿನ್ನಪ್ಪ, ಸ್ಕ್ವಾಷ್ ನಲ್ಲಿ ಚಿನ್ನ
ಸ್ಕ್ವಾಷ್ ನ ಡಬಲ್ಸ್ ನಲ್ಲಿ ಪಿ ದೀಪಿಕಾ ಜತೆಗೂಡಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ ಕೊಡಗು ಮೂಲದ ಜೋಶ್ನಾ ಚಿನ್ನಪ್ಪ

ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ಪ್ರಕಾಶ್
ಶೂಟಿಂಗ್ ನಲ್ಲಿ ಬೆಳ್ಳಿ ಗೆದ್ದ ಪ್ರಕಾಶ್ ನಂಜಪ್ಪ ಅವರು ವರ್ಷಗಳ ಹಿಂದೆ ತಮಗಾದ ದೈಹಿಕ ನೂನ್ಯತೆಯನ್ನು ಲೆಕ್ಕಿಸದೆ ದೇಶಕ್ಕಾಗಿ ಪದಕ ಗೆದ್ದುಕೊಟ್ಟಿದ್ದಾರೆ.

ಬಾಡ್ಮಿಂಟನ್ ತಾರೆ ಅಶ್ವಿನಿ
ಬಾಡ್ಮಿಂಟನ್ ತಾರೆ ಅಶ್ವಿನಿ ಪೊನ್ನಪ್ಪ ಅವರು ಜ್ವಾಲ ಗುಟ್ಟಾ ಜತೆಗೂಡಿ ಬಾಡ್ಮಿಂಟನ್ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಹಾಕಿ ವೀರ ರಘುನಾಥ್
ಹಾಕಿ ವೀರ ರಘುನಾಥ್(ಎಡಬದಿ) ಅವರು ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ.

ನಿಖಿಲ್ ತಿಮ್ಮಯ್ಯ, ಹಾಕಿ
ಹಾಕಿ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟ ನಿಖಿಲ್ ತಿಮ್ಮಯ್ಯ

ಹಾಕಿ ಪಟು ಎಸ್ ವಿ ಸುನಿಲ್
ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟ ಹಾಕಿ ಪಟು ಎಸ್ ವಿ ಸುನಿಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications