ಕಾಮನ್ ವೆಲ್ತ್ ಕ್ರೀಡೆಯಲ್ಲಿ ಚಿನ್ನದ ಪದಕ ವಿಜೇತರು
ಬೆಂಗಳೂರು, ಆ.5: ಇಪ್ಪತ್ತನೇ ಕಾಮನ್‌ವೆಲ್ತ್ ಕ್ರೀಡಾಕೂಟ ಮುಕ್ತಾಯಗೊಂಡಿದ್ದು ಆರಂಭದ ದಿನದಿಂದಲೂ ಪದಕಗಳನ್ನು ಬೇಟೆಯಾಡುತ್ತಾ ಬಂದ ಭಾರತ ತಂಡವು 64 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 5ನೇ ಸ್ಥಾನವನ್ನು ಅಲಂಕರಿಸಿದೆ. ಪದಕ ವಿಜೇತರ ಪೈಕಿ ಎಂಟು ಜನ ಕನ್ನಡಿಗರು ಸೇರಿರುವುದು ಹೆಮ್ಮೆಯ ವಿಚಾರ. ಭಾರತದ ಒಟ್ಟು 15 ಚಿನ್ನದ ಪದಕ ವಿಜೇತರ ಸಚಿತ್ರ ವಿವರ ನಿಮ್ಮ ಮುಂದಿಡಲಾಗಿದೆ.
ಭಾರತ 15 ಚಿನ್ನ, 30 ಬೆಳ್ಳಿ ಹಾಗೂ 19 ಕಂಚಿನ ಪದಕಗಳೊಂದಿಗೆ ಒಟ್ಟು 64 ಪದಕಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2010 ರಲ್ಲಿ ದೆಹಲಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತ 38 ಚಿನ್ನ, 27 ಬೆಳ್ಳಿ ಹಾಗೂ 36 ಕಂಚಿನ ಪದಕ(101) ಗೆದ್ದುಕೊಂಡು ಪದಕ ಪಟ್ಟಿಯಲ್ಲಿ 2 ಸ್ಥಾನ ಪಡೆದುಕೊಂಡಿತ್ತು.
58 ಚಿನ್ನ,59 ಬೆಳ್ಳಿ ಹಾಗೂ 57 ಕಂಚಿನ ಪದಕಗಳೊಂದಿಗೆ ಒಟ್ಟು 174 ಪದಕಗಳ ಬೇಟೆಯಾಡಿದ ಇಂಗ್ಲೆಂಡ್ ಅಗ್ರಸ್ಥಾನ ಪಡೆದುಕೊಂಡರೆ, ಹಾಕಿಯಲ್ಲಿ ಸ್ವರ್ಣ ಪದಕ ಗಳಿಸಿದ ಆಸ್ಟ್ರೇಲಿಯಾ 49 ಚಿನ್ನ, 42 ಬೆಳ್ಳಿ ಹಾಗೂ 46 ಕಂಚಿನ ಪದಕಗಳೊಂದಿಗೆ ಒಟ್ಟು 137 ಪದಕಗಳನ್ನು ಗಳಿಸುವ ಮೂಲಕ ಎರಡನೆ ಸ್ಥಾನ ಅಲಂಕರಿಸಿತು. ಉಳಿದಂತೆ ಕೆನಡಾ 82 ಪದಕ, ಅತಿಥೇಯ ಸ್ಕಾಟ್‌ಲೆಂಡ್ ತಂಡ 53 ಪದಕಗಳೊಂದಿಗೆ ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಪಡೆದುಕೊಂಡಿವೆ.

ಕೆ ಸಂಜಿತಾ ಚಾನು
ಮೊದಲ 1: ಜುಲೈ 24
ಎರಡು ಚಿನ್ನ
* ಕೆ ಸಂಜಿತಾ ಚಾನು ; ಮಹಿಳೆಯರ ವೇಟ್ ಲಿಫ್ಟಿಂಗ್ 48 ಕೆಜಿ ವಿಭಾಗ

ಸುಖೆನ್ ಡೇ
ಮೊದಲ ದಿನ: ಜುಲೈ 24
* ಸುಖೆನ್ ಡೇ : ಪುರುಷರ ವೇಟ್ ಲಿಫ್ಟಿಂಗ್ 56 ಕೆಜಿ ವಿಭಾಗ

ಅಭಿನವ್ ಬಿಂದ್ರಾ
ಅಭಿನವ್ ಬಿಂದ್ರಾ: ಪುರುಷರ 10 ಮೀ ಏರ್ ರೈಫಲ್ ಶೂಟಿಂಗ್

ಅಪೂರ್ವಿ ಚಾಂಡೆಲ
ಮೂರನೇ ದಿನ : ಜುಲೈ 26
ಎರಡು ಚಿನ್ನ
ಅಪೂರ್ವಿ ಚಾಂಡೆಲ ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್

ರಾಹಿ ಸರ್ನೊಬಾತ್
ಜುಲೈ 26 : ರಾಹಿ ಸರ್ನೊಬಾತ್ ಮಹಿಳೆಯರ 25 ಮೀ ಏರ್ ರೈಫಲ್ ಶೂಟಿಂಗ್. ಇನ್ನಷ್ಟು ನಿರೀಕ್ಷಿಸಿ

6. ಸತೀಶ್ ಶಿವಲಿಂಗಮ್
ಪುರುಷರ ವೇಟ್ ಲಿಫ್ಟಿಮ್ಘ್ 77ಕೆಜಿ ವಿಭಾಗ

7. ಜಿತು ರೈ
ಐದನೇ ದಿನ ಜುಲೈ 28
ಪುರುಷರ ಶೂಟಿಂಗ್ 50 ಮೀ ಪಿಸ್ತೂಲ್

8. ಸುಶೀಲ್ ಕುಮಾರ್
ಆರನೇ ದಿನ-ಜುಲೈ 29 ಮೂರು ಚಿನ್ನ
ಸುಶೀಲ್ ಕುಮಾರ್ ಪುರುಷರ ಕುಸ್ತಿ 75 ಕೆಜಿ

9. ಅಮಿತ್ ಕುಮಾರ್
ಆರನೇ ದಿನ-ಜುಲೈ 29 ಮೂರು ಚಿನ್ನ
ಅಮಿತ್ ಕುಮಾರ್ ಪುರುಷರ ಕುಸ್ತಿ 57 ಕೆಜಿ

10. ವಿನೇಶ್ ಫೊಗಾತ್
ಆರನೇ ದಿನ-ಜುಲೈ 29 ಮೂರು ಚಿನ್ನ
ವಿನೇಶ್ ಫೊಗಾತ್ ಮಹಿಳೆಯರ ಕುಸ್ತಿ 48 ಕೆಜಿ

11. ಯೋಗೇಶ್ವರ್ ದತ್
ಎಂಟನೇ ದಿನ ಜುಲೈ 31
ಯೋಗೇಶ್ವರ್ ದತ್ ಪುರುಷರ ಕುಸ್ತಿ 65 ಕೆಜಿ ಫ್ರೀ ಸ್ಟೈಲ್

12. ಬಬಿತಾ ಕುಮಾರಿ
ಎಂಟನೇ ದಿನ ಜುಲೈ 31
ಮಹಿಳೆಯರ ಕುಸ್ತಿ 55 ಕೆಜಿ ವಿಭಾಗ ಫ್ರೀ ಸ್ಟೈಲ್

13. ವಿಕಾಸ್ ಗೌಡ
ಎಂಟನೇ ದಿನ ಜುಲೈ 31
ವಿಕಾಸ್ ಗೌಡ- ಪುರುಷರ ಡಿಸ್ಕಸ್ ಥ್ರೋ

11ನೇ ದಿನ -ಆಗಸ್ಟ್ 2
ದೀಪಿಕಾ ಪಳ್ಳಿಕಲ್ ಹಾಗೂ ಜೋಶ್ನಾ ಚಿನ್ನಪ್ಪ ಮಹಿಳೆಯರ ಸ್ಕ್ವಾಶ್ ಡಬಲ್ಸ್
Photo: CWG Squash official account

15. ಪಿ ಕಶ್ಯಪ್
12ನೇ ದಿನ: ಆಗಸ್ಟ್ 3
ಪುರುಷರ ಬಾಡ್ಮಿಂಟನ್ ಸಿಂಗಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications