ಇಂಚಿಯಾನ್ ಗೇಮ್ಸ್ ಬೆಳ್ಳಿ ವಿಜೇತೆ ಟಿಂಟು ಏಷ್ಯನ್ ಗೇಮ್ಸ್ ನಿಂದ ಔಟ್!

ನವದೆಹಲಿ, ಆಗಸ್ಟ್ 14: ಭಾರತದ ಅಥ್ಲೆಟಿಕ್ಸ್ ಬಳಗಕ್ಕೆ ಇದು ದೊಡ್ಡ ಹಿನ್ನಡೆ. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್ ನ 800 ಮೀ. ಓಟದಲ್ಲಿ ಬೆಳ್ಳಿ ಗೆದ್ದಿದ್ದ ಅಥ್ಲೀಟ್ ಟಿಂಟು ಲುಕಾ 2018ರ ಜಕಾರ್ತಾದ ಪಾಲೆಂಬಾಂಗ್ ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ನಿಂದ ಹೊರಬಿದ್ದಿದ್ದಾರೆ.
ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಟಿಂಟು ಸೋಮವಾರ ತಿರುವನಂತಪುರದಲ್ಲಿ ಟ್ರಯಲ್ಸ್ ಒಂದನ್ನು ನೀಡಬೇಕಿತ್ತು. ಟ್ರಯಲ್ಸ್ ನಲ್ಲಿ ಉತ್ತಮ ಕಾಲಾವಧಿಯಲ್ಲಿ ಓಟ ಮುಗಿಸಿ ಆ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸುವಿಕೆಯನ್ನು ಟಿಂಟು ಖಾತರಿ ಪಡಿಸಬೇಕಿತ್ತು. ಆದರೆ ಟಿಂಟು ಟ್ರಯಲ್ಸ್ ನಿಂದ ಹಿಂದೆ ಸರಿದಿದ್ದಾರೆ. ಅವರು ಟ್ರಯಲ್ಸ್ ನಿಂದ ಹಿಂಸರಿದಿರುವುದನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ತಿಳಿಸಿದೆ.
ಪಾದದ ನೋವಿನಿಂದ ಇನ್ನೂ ಚೇತರಿಸಿಕೊಳ್ಳದಿರುವುದರಿಂದ ಟಿಂಟು ಟ್ರಯಲ್ಸ್ ನಿಂದ ಹಿಂದೆ ಸರಿದಿದ್ದಾರೆ ಎಂದು ಟಿಂಟು ಕೋಚ್ ಆಗಿರುವ ಚಿನ್ನದ ಓಟಗಾರ್ತಿ ಖ್ಯಾತಿಯ ಪಿಟಿ ಉಷಾ ಅವರು ಪತ್ರದ ಮೂಲಕ ಎಎಫ್ಐಗೆ ಹೇಳಿದ್ದಾರೆ.
'ಲುಕಾ ಸಾಮಾನ್ಯ ಶೂನಲ್ಲಿ ಓಟ ಓಡಬಲ್ಲಳು. ಆದರೆ ಅವಳ ಗಾಯ ಅವಳನ್ನು ಸ್ಪೈಕ್ಸ್ ಧರಿಸಲು ಬಿಡುತ್ತಿಲ್ಲ. ಹೀಗಾಗಿ ಅವಳು ಪ್ರಯಲ್ಸ್ ನಲ್ಲಿ ಪಾಲ್ಗೊಳ್ಳದಿರಲಿ ನಿರ್ಧರಿಸಿದ್ದಾಳೆ. ಇದರೊಂದಿಗೆ ಟಿಂಟೂಗೆ ಜಕಾರ್ತಾ ಗೇಮ್ಸ್ ನಲ್ಲೂ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಉಷಾ ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications