ಚಿತ್ರಗಳಲ್ಲಿ ಕಾಮನ್ ವೆಲ್ತ್ ಪದಕ ವಿಜೇತರು
ಗ್ಲಾಸ್ಗೋ, ಜು.26: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕ ಬೇಟೆ ಮುಂದುವರೆಸಿದೆ.ಶುಕ್ರವಾರ ಭಾರತದ ಕ್ರೀಡಾಪಟುಗಳು ಮೂರು ಪದಕ ಗೆದ್ದಿದ್ದಾರೆ. ಈ ಮೂಲಕ ಮೂರು ಚಿನ್ನ, ನಾಲ್ಕು ಬೆಳ್ಳಿ, ಮೂರು ಕಂಚಿನ ಪದಕದೊಂದಿಗೆ ಭಾರತ ಕೂಟದಲ್ಲಿ ಐದನೇ ಸ್ಥಾನದಲ್ಲಿದೆ.
ಬೀಜಿಂಗ್ ಒಲಿಂಪಿಕ್‌ನ ಚಾಂಪಿಯನ್ ಶೂಟರ್ ಭಾರತದ ಅಭಿನವ್ ಬಿಂದ್ರಾ ಶುಕ್ರವಾರ ಬಂಗಾರದ ಪದಕಕ್ಕೆ ಗುರಿಯಿರಿಸಿ ದೇಶದ ಕ್ರೀಡಾಪ್ರಿಯರನ್ನು ಸಂತಸದಲ್ಲಿ ತೇಲಾಡಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ 2002 (ಮ್ಯಾಂಚೆಸ್ಟರ್), 2006 (ಮೆಲ್ಬೊರ್ನ್) ಹಾಗೂ ಕಳೆದ ಬಾರಿ 2010 (ದಿಲ್ಲಿ) ಆವೃತ್ತಿಗಳಲ್ಲಿ ಸತತವಾಗಿ ಜೋಡಿ ವಿಭಾಗದಲ್ಲಿ ಚಿನ್ನದ ಜಯಿಸಿದ್ದ ಬಿಂದ್ರಾ ಅವರಿಗೆ 2014ರಲ್ಲಿ ಮೊಟ್ಟ ಮೊದಲ ಸಿಂಗಲ್ಸ್ ವಿಭಾಗದ ಸ್ವರ್ಣ ಪದಕ ಲಭ್ಯವಾಗಿದೆ.
ಅಷ್ಟೇ ಅಲ್ಲದೇ 16 ಹರೆಯದ ಶೂಟರ್ ಮಲೈಕಾ ಗೋಯೆಲ್ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದಿದ್ದಾರೆ. ಮುಂದಿನ ಪುಟದಲ್ಲಿ ಕಾಮನ್ ವೆಲ್ತ್ ಗೇಮ್ಸ್‌ನ ಮೂರನೇ ದಿನದ ಹೈಲೈಟ್ಸ್ ಚಿತ್ರಗಳಲ್ಲಿ ನೀಡಲಾಗಿದೆ

ಕೊನೆಯದರಲ್ಲೂ ಚಿನ್ನ:
ತನ್ನ ಕೊನೆಯ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ಸ್ಟಾರ್ ಶೂಟರ್ ಅಭಿನವ್ ಬಿಂದ್ರಾ ಬಂಗಾರದ ಪದಕ ಗೆದ್ದರು.

ಚಿನ್ನದ ಗುರಿಯತ್ತ ಕಣ್ಣು
10 ಮೀ. ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ 205.3 ಅಂಕಗಳೊಂದಿಗೆ ಚಿನ್ನದ ಸಾಧನೆಗೈದರು

ಪೋಡಿಯಂನಲ್ಲಿ ಬಿಂದ್ರಾ
ಚಿನ್ನಗೆದ್ದ ಅಭಿನವ್ ಬಿಂದ್ರಾ(ಮಧ್ಯ), ಬೆಳ್ಳಿ ಪದಕ ಗೆದ್ದ ಬಾಂಗ್ಲದೇಶದ ಅಬ್ದುಲ್ ಬಕಿ(ಎಡ) ಕಂಚಿನ ಪದಕ ಗೆದ್ದ ಇಂಗ್ಲೆಂಡ್‌ನ ಡ್ಯಾನಿಯಲ್ ರಿವರ್ಸ್(ಬಲ) ಪದಕಗಳೊಂದಿಗೆ ಸಂಭ್ರಮಿಸುತ್ತಿರುವುದು.

ರವಿ ಮತ್ತು ಅಭಿನವ್:
10 ಮೀ. ಏರ್ ರೈಫಲ್ ವಿಭಾಗದದಲ್ಲಿ ಸ್ಪರ್ಧಿಸಿದ್ದ ರವಿಕುಮಾರ್ ಮತ್ತು ಅಭಿನವ್ ಬಿಂದ್ರಾ ಸ್ಪರ್ಧೆ ನಡೆಯುವ ಮುನ್ನಾ ಮಾತುಕತೆ ನಡೆಸುತ್ತಿರುವುದು. ಮೊದಲ ಎರಡು ಸುತ್ತಿನ ಅಂತ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ರವಿ ಕುಮಾರ್ ಅನುಭವಿ ಶೂಟರ್ ಬಿಂದ್ರಾ ಅವರನ್ನೂ ಹಿಂದಿಕ್ಕಿ ಮೊದಲ ಸ್ಥಾನದಲ್ಲಿದ್ದರು. ಆದರೆ, ಅಂತಿಮ ಸುತ್ತಿನ ಅವಕಾಶಗಳಲ್ಲಿ ರವಿ ಗುರಿ ತಪ್ಪಿದರು.

ಕೈಜಾರಿತು ಪದಕ
10 ಮೀ. ಏರ್ ರೈಫಲ್ ವಿಭಾಗದ ಫೈನಲ್‌ಗೆ ಆರ್ಹತೆ ಪಡೆದರೂ ಪದಕ ಪಡೆಯಲು ವಿಫಲರಾದ ಸಿಂಧು.

ಅಚ್ಚರಿಯ ಸಾಧನೆ:
16 ಹರೆಯದ ಶೂಟರ್ ಮಲೈಕಾ ಗೋಯೆಲ್ 10 ಮೀ. ಏರ್ ರೈಫಲ್ ವಿಭಗದ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

ಪದಕದೊಂದಿಗೆ ಗೆಲುವಿನ ನಗೆ:
ಮಲೈಕಾ ಗೋಯೆಲ್ ಬೆಳ್ಳಿ ಪದಕ ಗೆದ್ದ ಮೇಲೆ ಗೆಲುವಿನ ನಗೆ ಬೀರುತ್ತಿರುವುದು.

ರವಿಕುಮಾರ್ ಪ್ರಯತ್ನದಲ್ಲಿ
10 ಮೀ. ಏರ್ ರೈಫಲ್ ವಿಭಾಗದಲ್ಲಿ ರವಿ ಕುಮಾರ್ ಶೂಟಿಂಗ್ ಪ್ರಯತ್ನದಲ್ಲಿ.

ಕಂಚು ಗೆದ್ದ ಸಂತೋಷಿ
ವೇಟ್‌ಲಿಫ್ಟಿಂಗ್ 53 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸಂತೋಷಿ ಮಸ್ತ

ಶೂಟಿಂಗ್‌ನಲ್ಲಿ ಗಗನ್ ನಾರಂಗ್ ಶೂಟಿಂಗ್!
ಶೂಟರ್ ಗಗನ್ ನಾರಂಗ್ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಮಲೈಕಾ ಗೋಯೆಲ್ ಅವರ ಫೋಟೋವನ್ನು ಕ್ಲಿಕ್ಕಿಸುತ್ತಿರುವುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications