For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಗೆ 15 ಸದಸ್ಯರ ತಂಡ ಪ್ರಕಟ, ಸ್ಟುವರ್ಟ್ ಬಿನ್ನಿಗೆ ಸ್ಥಾನ

By Mahesh

ಬೆಂಗಳೂರು, ಜ.6: ಐಸಿಸಿ ವಿಶ್ವಕಪ್ 2015ರಲ್ಲಿ ಆಡುವ 15 ಜನ ಆಟಗಾರರ ಹೆಸರನ್ನು ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ಮಂಗಳವಾರ ಮಧ್ಯಾಹ್ನ ಪ್ರಕಟಿಸಿದೆ.

ಮುಂಬೈನಲ್ಲಿ ಸಭೆ ಸೇರಿದ್ದ ಸಂದೀಪ್ ಪಾಟೀಲ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿ ವಿಶ್ವಕಪ್ ಗೆಲ್ಲಿಸಿಕೊಡಬಲ್ಲ 15 ಜನ ಕ್ರಿಕೆಟರ್ ಗಳನ್ನು ಹೆಸರಿಸಿದೆ. ನಿರೀಕ್ಷೆಯಂತೆ ಯುವರಾಜ್ ಸಿಂಗ್ ಅವರ ಬಗ್ಗೆ ಆಯ್ಕೆ ಸಮಿತಿ ಚರ್ಚೆ ನಡೆಸಿದರೂ ಆಯ್ಕೆಯಾಗಲು ಸಾಧ್ಯವಾಗಿಲ್ಲ. [ಸರ್ವಶ್ರೇಷ್ಠ ವಿಶ್ವಕಪ್ ತಂಡ ಆಯ್ಕೆ ಮಾಡಿ]

ವಿಡಿಯೋ ಕಾನ್ಫರೆನ್ಸ್ ಮೂಲಕ ಆಸ್ಟ್ರೇಲಿಯಾದಿಂದಲೇ ಧೋನಿ ಹಾಗೂ ಕೋಚ್ ಡಂಕನ್ ಫ್ಲೆಚ್ಚರ್ ಅವರ ಸಲಹೆಯನ್ನು ಪಡೆದುಕೊಂಡಿದ್ದು ವಿಶೇಷ.

Team India Final 15


ಕರ್ನಾಟಕದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಹಾಗೂ ಸ್ಟುವರ್ಟ್ ಬಿನ್ನಿ 30 ಮಂದಿ ಸಂಭಾವ್ಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಈ ಪೈಕಿ ಸ್ಟುವರ್ಟ್ ಬಿನ್ನಿ ಮಾತ್ರ ಆಯ್ಕೆಯಾಗಿದ್ದಾರೆ. [30 ಮಂದಿ ಟೀಂ ಇಂಡಿಯಾ ಪ್ರಕಟ]

ಹಾಲಿ ವಿಶ್ವ ಕಪ್ ವಿಜೇತ ತಂಡವಾದ ಟೀಂ ಇಂಡಿಯಾ ತನ್ನ ವಿಶ್ವಕಪ್ 2015 ಟೂರ್ನಿಯನ್ನು ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ವಿರುದ್ಧ ಅಡಿಲೇಡ್ ನಲ್ಲಿ ಫೆ.15ರಂದು ಎದುರಿಸಲಿದೆ. ಫೆ.14ರಿಂದ ಮಾರ್ಚ್ 29ರ ತನಕ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿವೆ. [ಅಭ್ಯಾಸ ಪಂದ್ಯ: ಭಾರತಕ್ಕೆ ಆಸ್ಟ್ರೇಲಿಯಾ ಮೊದಲ ಎದುರಾಳಿ]

ICC World Cup 2015 : Team India Final 15 Squad

ವಿಶ್ವಕಪ್ ತಂಡಕ್ಕೆ ಆಯ್ಕೆಯಾದ 15 ಜನ ಸದಸ್ಯರು:

ಆರಂಭಿಕ ಆಟಗಾರರು
1. ಅಜಿಂಕ್ಯ ರಹಾನೆ (ಮುಂಬೈ/ ರಾಜಸ್ಥಾನ ರಾಯಲ್ಸ್)
2. ಶಿಖರ್ ಧವನ್ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)

ಮಧ್ಯಮ ಕ್ರಮಾಂಕ
3. ವಿರಾಟ್ ಕೊಹ್ಲಿ, (ದೆಹಲಿ/ರಾಯಲ್ ಚಾಲೆಂಜರ್ಸ್ ಬೆಂಗಳೂರು), ಉಪ ನಾಯಕ
4. ಸುರೇಶ್ ರೈನಾ (ಉತ್ತರಪ್ರದೇಶ/ಸಿಎಸ್ ಕೆ)
5. ರೋಹಿತ್ ಶರ್ಮ (ಮುಂಬೈ/ ಮುಂಬೈ ಇಂಡಿಯನ್ಸ್)
6. ಎಂಎಸ್ ಧೋನಿ (ವಿಕೆಟ್ ಕೀಪರ್, ಜಾರ್ಖಂಡ್/ಚೆನ್ನೈ ಸೂಪರ್ ಕಿಂಗ್ಸ್) ನಾಯಕ
7. ಅಂಬಟಿ ರಾಯುಡು (ವಿಕೆಟ್ ಕೀಪರ್), (ಬರೋಡಾ/ಮುಂಬೈ ಇಂಡಿಯನ್ಸ್)

ಸ್ಪಿನ್ನರ್
8. ಆರ್ ಅಶ್ವಿನ್ (ತಮಿಳುನಾಡು/ ಚೆನ್ನೈ ಸೂಪರ್ ಕಿಂಗ್ಸ್)
9. ಅಕ್ಷರ್ ಪಟೇಲ್ (ಗುಜರಾತ್/ ಕಿಂಗ್ಸ್ XI ಪಂಜಾಬ್)

ಆಲ್ ರೌಂಡರ್
10. ರವೀಂದ್ರ ಜಡೇಜ (ಸೌರಾಷ್ಟ್ರ/ ಸಿಎಸ್ ಕೆ)
11. ಸ್ಟುವರ್ಟ್ ಬಿನ್ನಿ ಸ್ಟುವರ್ಟ್ ಬಿನ್ನಿ (ಕರ್ನಾಟಕ/ ರಾಜಸ್ಥಾನ ರಾಯಲ್ಸ್)

ವೇಗಿಗಳು
12. ಭುವನೇಶ್ವರ್ ಕುಮಾರ್ (ಉತ್ತರಪ್ರದೇಶ/ಸೈನ್ ರೈಸರ್ಸ್ ಹೈದರಾಬಾದ್)
13. ಮಹಮ್ಮದ್ ಶಮಿ (ಬೆಂಗಾಳ/ ಡೆಲ್ಲಿ ಡೇರ್ ಡೆವಿಲ್ಸ್)
14. ಉಮೇಶ್ ಯಾದವ್ (ವಿದರ್ಭ/ ಕೋಲ್ಕತ್ತಾ ನೈಟ್ ರೈಡರ್ಸ್)
15. ಇಶಾಂತ್ ಶರ್ಮ (ದೆಹಲಿ/ ಸನ್ ರೈಸರ್ಸ್ ಹೈದರಾಬಾದ್)

ICC World Cup 2015 : Team India Final 15 Squad


ವಿಶ್ವಕಪ್ ಬಿ ಗುಂಪಿನಲ್ಲಿ ಭಾರತದ ವೇಳಾಪಟ್ಟಿ (ಎಲ್ಲಾ ಹಗಲು/ರಾತ್ರಿ ಪಂದ್ಯಗಳು)

* ಫೆ.15 (ಭಾನುವಾರ) vs ಪಾಕಿಸ್ತಾನ (ಅಡಿಲೇಡ್) 9 AM IST
* ಫೆ.22(ಭಾನುವಾರ) vs ದಕ್ಷಿಣ ಆಫ್ರಿಕಾ (ಮೆಲ್ಬೋರ್ನ್) 9 AM IST
* ಫೆ. 28 (ಶನಿವಾರ) vs ಯುನೈಟೆಡ್ ಅರಬ್ ಎಮಿರೈಟ್ಸ್ (ಪರ್ತ್) 12 PM IST
* ಮಾ.6 (ಶುಕ್ರವಾರ) vs ವೆಸ್ಟ್ ಇಂಡೀಸ್ (ಪರ್ತ್) 12PM IST
* ಮಾ.10 (ಮಂಗಳವಾರ) vs ಐರ್ಲೆಂಡ್ (ಹ್ಯಾಮಿಲ್ಟನ್) 6.30 AM IST
* ಮಾ.14 (ಶನಿವಾರ) vs ಜಿಂಬಾಬ್ವೆ (ಅಕ್ಲೆಂಡ್) 6.30 AM IST

2011 ವಿಶ್ವಕಪ್ ಗೆದ್ದ ತಂಡದಲ್ಲಿದ್ದು ಈ ಬಾರಿ ಆಯ್ಕೆಯಾಗದ ಆಟಗಾರರು:
ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ, ಯುಸೂಫ್ ಪಠಾಣ್, ಅಶೀಶ್ ನೆಹ್ರಾ, ಸಚಿನ್ ತೆಂಡೂಲ್ಕರ್(ನಿವೃತ್ತ), ಎಸ್ ಶ್ರೀಶಾಂತ್(ನಿಷೇಧಿತ)

2011 ವಿಶ್ವಕಪ್ ಗೆದ್ದ ತಂಡದ 15 ಆಟಗಾರರು:
ಎಂಎಸ್ ಧೋನಿ(ನಾಯಕ), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಗೌತಮ್ ಗಂಭೀರ್, ಯುಸೂಫ್ ಪಠಾಣ್, ಗೌತಮ್ ಗಂಭೀರ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಎಸ್ ಶ್ರೀಶಾಂತ್, ಅಶೀಶ್ ನೆಹ್ರಾ, ಆರ್ ಅಶ್ವಿನ್, ಮುನಾಫ್ ಪಟೇಲ್, ಪಿಯೂಷ್ ಚಾವ್ಲಾ

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:12 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+