Asian Games: ಜಾವೆಲಿನ್‌ನಲ್ಲಿ ಭಾರತಕ್ಕೆ ಡಬಲ್ ಢಮಾಕ: ನೀರಜ್ ಚೋಪ್ರಗೆ ಚಿನ್ನ, ಬೆಳ್ಳಿ ಗೆದ್ದ ಕಿಶೋರ್ ಜೇನಾ
ಏಷ್ಯನ್ ಗೇಮ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತ ಮೊದಲ ಎರಡು ಪದಕಗಳನ್ನು ಕೂಡ ತನ್ನದಾಗಿಸಿಕೊಂಡಿದೆ. ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದ್ದರೆ ಈ ಸ್ಪರ್ಧೆಯಲ್ಲಿ ಕಿಶೋರ್ ಜೇನಾ ತಾನೇನೂ ಕಡಿಮೆ ಇಲ್ಲ ಎನ್ನುವಂಥಾ ಹೋರಾಟ ನೀಡಿದ್ದಾರೆ. ನಿರೀಕ್ಷೆಯಂತೆಯೇ ನೀರಜ್ ಚೋಪ್ರ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ ಕಿಶೋರ್ ಜೇನಾ ಎರಡನೇ ಸ್ಥಾನವನ್ನು ಪಡೆದು ಬೆಳ್ಳಿ ಪದಕ್ಕಕೆ ಮುತ್ತಿಕ್ಕಿದ್ದಾರೆ.
ಸಾಕಷ್ಟು ಕುತೂಹ ಮೂಡಿಸಿದ್ದ ಈ ಸ್ಪರ್ಧೆಯಲ್ಲಿ ಭಾರತದ ಇಬ್ಬರು ಸ್ಪರ್ಧಿಗಳ ಮಧ್ಯೆಯೇ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು ಗಮನಾರ್ಹ ಅಂಶ. ಮೊದಲ ಎರಡು ಸ್ಥಾನಗಳನ್ನು ಗೆದ್ದುಕೊಂಡ ನೀರಜ್ ಚೋಪ್ರ ಹಾಗೂ ಕಿಶೋರ್ ಜೇನಾ ಅವರಿಗಿಂತ ಉಳಿದ ಸ್ಪರ್ಧಿಗಳು ಸಾಕಷ್ಟು ಹಿಂದಿದ್ದರು. ಹೀಗಾಗಿ ಜಾವೆಲಿನ್‌ನಲ್ಲಿ ಭಾರತ ಸಂಪೂರ್ಣ ಏಕಪಕ್ಷೀಯವಾಗಿ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಮಂಗಳವಾರವಷ್ಟೇ ಮಹಿಳಾ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ಅನ್ನು ರಾಣಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು. ಅದಾದ ಮರುದಿನವೇ ಭಾರತ ಪುರುಷರ ಜಾವೆಲಿನ್‌ನಲ್ಲಿ ಎರಡು ಪದಕಗಳನ್ನು ಗೆದ್ದುಕೊಂಡಿದೆ.
ಭಾರತದ ಜಾವೆಲಿನ್ ಎಸೆತಗಾರರಾದ ನೀರಜ್ ಚೋಪ್ರ ಹಾಗೂ ಕಿಶೋರ್ ಜೇನಾ ಆರಂಭದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಒತ್ತಡಕ್ಕೊಳಗಾಗುವ ಸನ್ನಿವೇಶ ಉಂಟಾಗಿತ್ತು. ತಾಂತ್ರಿಕ ಕಾರಣದಿಂದಾಗಿ ನೀರಜ್ ಚೋಪ್ರ ಅವರ ಮೊದಲ ಎಸೆತ ವ್ಯರ್ಥವಾಗುವ ಮೂಲಕ ಆಘಾತ ಉಂಟಾಯಿತು. ಹೀಗಾಗಿ ಈ ಸ್ಪರ್ಧೆ ಸಾಕಷ್ಟು ತಡವಾಯಿತು. ಇನ್ನು ಕಿಶೋರ್ ಜೇನಾ ಅವರ ಎರಡನೇ ಎಸೆತವನ್ನು ತಪ್ಪಾಗಿ ಫೌಲ್ ಎಂದು ಘೋಷಿಸಲಾಗಿತ್ತು. ಆದರೆ ನಂತರ ಅದನ್ನು ಸರಿಪಡಿಸಿಕೊಳ್ಳಲಾಯಿತು. ಈ ಹಿನ್ನಡೆಯಿಂದ ನಂತರ ಇಬ್ಬರು ಸ್ಪರ್ಧಿಗಳು ಕೂಡ ಹೊರಬಂದಿದ್ದು ಚಿನ್ನ ಹಾಗು ಬೆಳ್ಳಿ ಪದಕವನ್ನು ಕೊರಳೀಗೇರಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications