For Quick Alerts
ALLOW NOTIFICATIONS  
For Daily Alerts

ಶ್ರೇಷ್ಠ ಸಾಧನೆಯೊಂದಿಗೆ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸಜನ್ ಪ್ರಕಾಶ್

Indian swimmer Sajan Prakash becomes first indian to make Olympic A cut

ಭಾರತದ ಸ್ವಿಮ್ಮರ್ ಸಜನ್ ಪ್ರಕಾಶ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ ಎ ಸ್ಟ್ಯಾಂಡರ್ಡ್‌ನೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದ ಮೊದಲ ಭಾರತೀಯ ಈಜುಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸಜನ್ ಪ್ರಕಾಶ್.

ಒಲಿಂಪಿಕ್ಸ್ ಗೇಮ್ಸ್‌ಗೆ 1:56:48 ಸೆಕೆಂಡ್‌ಗಳನ್ನು 'ಎ' ಸ್ಟ್ಯಾಂಡರ್ಡ್ ಎಂದು ನಿಗದಿಪಡಿಸಲಾಗಿದೆ. 27ರ ಹರೆಯದ ಸಜನ್ ಪ್ರಕಾಶ್ 0.10 ಸೆಕೆಂಡ್‌ಗಳಲ್ಲಿ ಈ ಸಾಧನೆ ಫಿನಾ-ಮಾನ್ಯತೆ ಪಡೆದ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಮಾಡಿದ್ದಾರೆ. ಇಟೆಲಿಯ ರೋಮ್‌ನಲ್ಲಿ ನಡೆದ ಕ್ರೀಡಾಕೂಡದ 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಸಜನ್ ಪ್ರಕಾಶ್ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಸಂಪಾದಿಸಿದ್ದಾರೆ.

ಇನ್ನು ಈ ವಿಶೇಷ ಸಾಧನೆಯ ಬಗ್ಗೆ ಭಾರತೀಯ ಸ್ಮಿಮ್ಮಿಂಗ್ ಫೆಡರೇಷನ್ ಹರ್ಷವನ್ನು ವ್ಯಕ್ತಪಡಿಸಿದೆ. "ಭಾರತೀಯ ಸ್ಮಿಮ್ಮಿಂಗ್‌ನಲ್ಲಿ ಐತಿಹಾಸಿಕ ಕ್ಷಣ!!! ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆಯಲು ಬೇಕಾಗಿದ್ದ ಸಮಯವನ್ನು ಬೇಧಿಸಿದ್ದಾರೆ. ಅಭಿನಂದನೆಗಳು" ಎಂದು ಟ್ವೀಟ್ ಮಾಡಿದೆ.

ಇನ್ನು ಈ ಸಂದರ್ಭದಲ್ಲಿ ಸಜನ್ ಪ್ರಕಾಶ್ ತಮ್ಮ ದೇಶೀಯ ದಾಖಲೆಯನ್ನು ಕೂಡ ಹಿಂದಿಕ್ಕಿದ್ದಾರೆ. ಕಳೆದ ವಾರ ಬೆಲ್‌ಗ್ರೇಡ್ ಟ್ರೋಫಿ ಸ್ವಿಮ್ಮಿಂಗ್ ಸ್ಪರ್ಧೆಯಲ್ಲಿ 1:56.96 ಸೆಕೆಂಡ್‌ಗಳಲ್ಲಿ ದಾಖಲೆ ಬರೆದಿದ್ದರು. ಈಗ ಆ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.

ಈ ಮೂಲಕ ಸಜನ್ ಪ್ರಕಾಶ್ ಅವರು ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಲಿದ್ದಾರೆ. 2016ರಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿಯೂ ಸಜನ್ ಅರ್ಹತೆಯನ್ನು ಪಡೆದುಕೊಂಡಿದ್ದರು. ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಸಜನ್ ಪ್ರಕಾಶ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

ರೋಹಿಣಿ ಹೇಳೋ ತೋಳ ಬಂತು ತೋಳ ಕಥೆ ಕೇಳೋಕೆ ನಾನು ಸಿದ್ಧವಾಗಿಲ್ಲ !! | Oneindia Kannada

Story first published: Sunday, June 27, 2021, 11:52 [IST]
Other articles published on Jun 27, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+