IPL 2023 Auction : ಮಿನಿ ಹರಾಜು ನಡೆಯುವ ಸ್ಥಳ, ದಿನಾಂಕ, ಸಮಯ; ಟಿವಿ ವೀಕ್ಷಣೆ, ಲೈವ್ ಸ್ಟ್ರೀಮಿಂಗ್ ವಿವರ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಮಿನಿ ಹರಾಜು ಪ್ರಕ್ರಿಯೆ ಕೊಚ್ಚಿಯ ಗ್ರ್ಯಾಂಡ್ ಹಯಾಟ್ ಹೋಟೆಲ್‌ನಲ್ಲಿ ಡಿಸೆಂಬರ್ 23ರಂದು ನಡೆಯಲಿದೆ.
ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳಲ್ಲಿ ಉಳಿದಿರುವ 87 ಸ್ಲಾಟ್‌ಗಳನ್ನು ಭರ್ತಿ ಮಾಡಲು ಒಟ್ಟು 405 ಆಟಗಾರರು ಹರಾಜು ಸುತ್ತಿಗೆಯ ಅಡಿಯಲ್ಲಿ ಹೋಗಲು ಅಂತಿಮಗೊಂಡಿದ್ದಾರೆ.
10 ತಂಡಗಳು ನವೆಂಬರ್‌ನಲ್ಲಿ ತಮ್ಮ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರನ್ನು ಘೋಷಿಸಿದ ನಂತರ, 991 ಆಟಗಾರರು ಐಪಿಎಲ್ 2023 ಹರಾಜಿಗೆ ಸಹಿ ಹಾಕಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿತ್ತು. ಅನಂತರ, 369 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು ಮತ್ತು ತಂಡಗಳು ತಮ್ಮ ವಿನಂತಿಗಳನ್ನು ಸಲ್ಲಿಸಿದ ನಂತರ ಇನ್ನೂ 36 ಆಟಗಾರರನ್ನು ಪಟ್ಟಿಗೆ ಸೇರಿಸಲಾಗಿದೆ.

2 ಕೋಟಿ, 1.5 ಕೋಟಿ ಮತ್ತು 1 ಕೋಟಿ ವಿಭಾಗ
ಐಪಿಎಲ್ 2023ರ ಟೂರ್ನಿಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಮಿನಿ ಹರಾಜಿನಲ್ಲಿ ಒಟ್ಟು 87 ಸ್ಲಾಟ್‌ಗಳು ಲಭ್ಯವಿರುತ್ತವೆ. 42.25 ಕೋಟಿ ರೂಪಾಯಿಗಳ ಹೆಚ್ಚಿನ ಮೊತ್ತದೊಂದಿಗೆ ಸನ್‌ರೈಸರ್ಸ್ ಹೈದರಾಬಾದ್ ಹರಾಜಿಗೆ ಹೋಗಲಿದೆ.
ಶಾರ್ಟ್‌ಲಿಸ್ಟ್ ಆಟಗಾರರನ್ನು ಅವರ ಮೂಲ ಬೆಲೆಯ ಆಧಾರದ ಮೇಲೆ ವರ್ಗೀಕರಿಸಲಾಗಿದೆ. 2 ಕೋಟಿ ರೂ., 1.5 ಕೋಟಿ ರೂ. 1 ಕೋಟಿ ರೂ. ಎಂಬ ವಿಭಾಗಗಳನ್ನಾಗಿ ಮಾಡಲಾಗಿದೆ. ಅನ್‌ಕ್ಯಾಪ್ಡ್ ಆಟಗಾರರು 20 ಲಕ್ಷಕ್ಕಿಂತ ಹೆಚ್ಚಿನ ಮೂಲ ಬೆಲೆಯಲ್ಲಿ ತಮ್ಮನ್ನು ಪಟ್ಟಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಭಾರತೀಯ ಆಟಗಾರರು 2 ಕೋಟಿ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ
19 ಆಟಗಾರರು 2 ಕೋಟಿ ರೂ., 11 ಆಟಗಾರರು 1.5 ಕೋಟಿ ರೂ. ಮತ್ತು 20 ಆಟಗಾರರು 1 ಕೋಟಿ ರೂ.ಗಳ ಅತ್ಯಧಿಕ ಮೂಲ ಬೆಲೆಯ ಪಟ್ಟಿಯಲ್ಲಿದ್ದಾರೆ. ವಿಪರ್ಯಾಸವೆಂದರೆ, ಯಾವುದೇ ಭಾರತೀಯ ಆಟಗಾರರು 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಹೆಸರು ಪಡೆದಿಲ್ಲ. ಈ ಪಟ್ಟಿಯಲ್ಲಿ ಒಟ್ಟು 19 ಆಟಗಾರರಿದ್ದಾರೆ.
ಇಂಗ್ಲೆಂಡ್‌ನ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಉದಯೋನ್ಮುಖ ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ 2 ಕೋಟಿ ರೂ.ಗಳ ಅತ್ಯಧಿಕ ಮೂಲ ಬೆಲೆಯ ವಿಭಾಗಲ್ಲಿದ್ದರೆ, ಇಂಗ್ಲೆಂಡ್‌ನ ಮಾಜಿ ಟೆಸ್ಟ್ ನಾಯಕ ಜೋ ರೂಟ್ ಸಹ ತಮ್ಮ ಹೆಸರನ್ನು 1 ಕೋಟಿ ರೂ. ಮೂಲ ಬೆಲೆ ವಿಭಾಗದಲ್ಲಿ ನೋಂದಾಯಿಸಿದ್ದಾರೆ.

ಗರಿಷ್ಠ 87 ಸ್ಲಾಟ್‌ಗಳು ಲಭ್ಯವಿದೆ
"405 ಆಟಗಾರರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು, ಇದರಲ್ಲಿ 4 ಆಟಗಾರರು ಸಹವರ್ತಿ ರಾಷ್ಟ್ರಗಳಿಂದ ನೋಂದಾಯಿಸಿದ್ದಾರೆ. ಒಟ್ಟು ಕ್ಯಾಪ್ಡ್ ಆಟಗಾರರು 119, ಅನ್ ಕ್ಯಾಪ್ಡ್ ಆಟಗಾರರು 282 ಮತ್ತು 4 ಅಸೋಸಿಯೇಟ್ ರಾಷ್ಟ್ರಗಳ ಆಟಗಾರರಿದ್ದಾರೆ. ಈಗ ಗರಿಷ್ಠ 87 ಸ್ಲಾಟ್‌ಗಳು ಲಭ್ಯವಿದ್ದು, ವಿದೇಶಿ ಆಟಗಾರರಿಗೆ 30 ಸ್ಲಾಟ್‌ಗಳನ್ನು ನೀಡಲಾಗಿದೆ," ಎಂದು ಬಿಸಿಸಿಐ ಮಾಧ್ಯಮ ಪ್ರಕಟಣೆ ತಿಳಿಸಿದೆ.

ಐಪಿಎಲ್ 2023ರ ಮಿನಿ ಹರಾಜಿಗೆ ಸಂಬಂಧಿಸಿದ ಎಲ್ಲಾ ವಿವರಗಳು
ಸ್ಥಳ ಮತ್ತು ದಿನಾಂಕ: ಐಪಿಎಲ್ 2023ರ ಮಿನಿ ಹರಾಜು ಪ್ರಕ್ರಿಯೆ ಶುಕ್ರವಾರ, ಡಿಸೆಂಬರ್ 23ರಂದು ಕೊಚ್ಚಿಯ ಗ್ರ್ಯಾಂಡ್ ಹಯಾಟ್ ಹೋಟೆಲ್‌ನಲ್ಲಿ ನಡೆಯಲಿದೆ.
ಸಮಯ: ಐಪಿಎಲ್ 2023ರ ಮಿನಿ ಹರಾಜು ಪ್ರಕ್ರಿಯೆ ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ.
ಟಿವಿ ವೀಕ್ಷಣೆ: ಐಪಿಎಲ್ 2023 ಮಿನಿ ಹರಾಜು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರವಾಗಲಿದೆ.
ಲೈವ್ ಸ್ಟ್ರೀಮಿಂಗ್: ಐಪಿಎಲ್ 2023ರ ಮಿನಿ ಹರಾಜ ಪ್ರಕ್ರಿಯೆಯನ್ನು ಜಿಯೋ ಸಿನಿಮಾಸ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications