For Quick Alerts
ALLOW NOTIFICATIONS  
For Daily Alerts

ಇರಿನಾ ನೀ ಮಾಡಿದ್ದು ಸರೀನಾ?: ಫುಟ್ಬಾಲರ್ ರೊನಾಲ್ಡೊ

By Mahesh

ಮ್ಯಾಡ್ರೀಡ್, ಜ. 19: ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ, ವಿಶ್ವದ ದುಬಾರಿ ಆಟಗಾರ ಪ್ಲೇ ಬಾಯ್ ಎಂದೇ ಖ್ಯಾತರಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತೆ ಬೇಡದ ವಿಷಯಕ್ಕೆ ಸುದ್ದಿಯಲ್ಲಿದ್ದಾನೆ. ನೆಚ್ಚಿನ ಗೆಳತಿ ರಷ್ಯಾದ ಒಳ ಉಡುಪಿನ ಜಾಹೀರಾತು ರೂಪದರ್ಶಿ ಇರಿನಾ ಶಾಯ್ಕ್ ಕೈ ಕೊಟ್ಟು ಹೋಗಿದ್ದಾಳೆ.

ಪೋರ್ಚುಗೀಸ್ ಕ್ರಿಶ್ಚಿಯನ್ ರೊನಾಲ್ಡೋ ಅವರ ಪುತ್ರನಿಗೆ ಜ್ಯೂನಿಯರ್ ಎಂದೆ ಹೆಸರಿಟ್ಟಿದ್ದಾರೆ. ರೊನಾಲ್ಡೋ ಪುತ್ರನಿಗೆ ತನ್ನ ತಾಯಿ ಯಾರು ಎಂಬುದು ಇನ್ನೂ ತಿಳಿದಿಲ್ಲ. ಅಪ್ಪನ ತದ್ರೂಪಿನಂತೆ ಕಾಣುವ ಜ್ಯೂನಿಯರ್ ನನ್ನು ರೊನಾಲ್ಡೋ ತಪ್ಪದೇ ಅತ್ಯುನ್ನತ ಗೌರವ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಕರೆದುಕೊಂಡು ಬರುವುದು ವಾಡಿಕೆ. [ಫಾದರ್ಸ್ ಡೇ: ಫುಟ್ಬಾಲ್ 'ಸ್ಟಾರ್' ಅಪ್ಪಂದಿರು]

ಪೋರ್ಚುಗಲ್ ನ ಫುಟ್ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋಗೆ 2014ನೇ ಸಾಲಿನ ಅತ್ಯುತ್ತಮ ಫುಟ್ಬಾಲ್ ಆಟಗಾರ ಪ್ರಶಸ್ತಿ ಲಭಿಸಿತ್ತು. ಪ್ರಶಸ್ತಿ ಸ್ವೀಕರಿಸಿದಾಗ ರೊನಾಲ್ಡೋ ಫ್ಯಾಮಿಲಿ ಜೊತೆಗೆ ಇಲ್ಲದಿರುವುದು ಎದ್ದು ಕಾಣುತ್ತಿತ್ತು.

It's Over! Irina Shayk & Cristiano Ronaldo Breakup After 5 Years of Romanc

ಈ ಹಿಂದೆ ತಾನು ಅಪ್ಪನಾಗಿರುವುದಾಗಿ ತಮ್ಮ ಅಧಿಕೃತ ವೆಬ್‌ಸೈಟ್‌ ಸೇರಿದಂತೆ ಟ್ವಿಟರ್ , ಫೇಸ್ ಬುಕ್ ನಲ್ಲಿ ಹೇಳಿಕೊಂಡಿದ್ದ ರೊನಾಲ್ಡೋ ಈಗ ಗೆಳತಿ ತೊರೆದಿರುವುದನ್ನು ಹೇಳಿಲ್ಲ. [ರೊನಾಲ್ಡೋಗೆ 2014ರ ಅತ್ಯುತ್ತಮ ಆಟಗಾರ ಪಟ್ಟ]

ಹರ್ಕುಲೀಸ್ ಚಿತ್ರದಲ್ಲಿ ಡ್ವಾಯ್ನೆ ಜಾನ್ಸನ್ ಜೊತೆ ನಟಿಸಿರುವ 29 ವರ್ಷ ವಯಸ್ಸಿನ ಇರಿನಾ ತಾವು 5 ವರ್ಷಗಳ ಜೊತೆ ರೊನಾಲ್ಡೋ ಜೊತೆಗಿನ ಸಾಂಗತ್ಯವನ್ನು ಬಿಟ್ಟಿರುವುದಾಗಿ ಹೇಳಿಕೊಂಡಿದ್ದಾಳೆ. ಕೌಟುಂಬಿಕ ಕಲಹದ ಬಗ್ಗೆ ತುಟಿ ಪಿಟಿಕ್ ಎಂದಿಲ್ಲ.

ಆದರೆ, ಮಿರರ್ ಯುಕೆ ಪ್ರಕಾರ ರೊನಾಲ್ಡೊ ತನ್ನ ತಾಯಿಯ ಷಷ್ಠಿಪೂರ್ತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಅಚ್ಚರಿಯಾಗಿ ಆಚರಿಸಲು ನಿರ್ಧರಿಸಿದ್ದ. ಇದಕ್ಕಾಗಿ ಇರಿನಾ ಹಾಗೂ ಪುತ್ರನನ್ನು ಕರೆದೊಯ್ಯಲು ನಿರ್ಧರಿಸಿದ್ದ. ಅದರೆ, ಸ್ಪೇನಿಗೆ ಬರಲು ಆಕೆ ಒಪ್ಪಿರಲಿಲ್ಲ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಬಿರುಕು ಹೆಚ್ಚಾಗಿದೆ ಎಂಬ ಸುದ್ದಿಯಿದೆ. [ರೊನೊಲ್ಡೊಗೆ ಮಗುವಾಯ್ತಂತೆ, ಆದ್ರೆ ಅಮ್ಮಯಾರು?]

ರೋನಾಲ್ಡೋ ಗೆಳತಿಯರು: ನಟಿಯರಾದ ಪ್ಯಾರಿಸ್ ಹಿಲ್ಟನ್, ಜೆಮ್ಮಾ ಅಟ್ಕಿನ್ಸನ್, ಇಟಲಿಯ ರೂಪದರ್ಶಿ ಲೆಟಿಜಿಯಾ ಫಿಲಿಪ್ಪಿ, ವೆಲ್ಷ್ ನ ನಟಿ ಇಮೊಗೆನ್ ಥಾಮಸ್ , ಬ್ರೆಜಿಲ್ ನ ಫಿಟ್ ನೆಸ್ ಟ್ರೈನರ್ ಗ್ಯಾಬ್ರಿಲಾ ಏಂಟಿನ್ಜರ್, ಕೊಲಂಬಿಯಾದ ಮಿರೆಲ್ಲ ಗ್ರಿಸಲೆಸ್, ಬ್ರೆಜಿಲಿನ ಬೆಡಗಿ ರೈಕಾ ಒಲಿವೈರಾ.. ಊಫ್ .. ಪಟ್ಟಿ ಮುಂದುವರೆಯುತ್ತಲೇ ಇರುತ್ತದೆ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+