For Quick Alerts
ALLOW NOTIFICATIONS  
For Daily Alerts

ಹಾಸನದ ಹಳ್ಳಿಯಿಂದ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಪದಕದವರೆಗೆ ಕನ್ನಡಿಗನ ಐಎಎಸ್ ಅಧಿಕಾರಿಯ ಸಾಧನೆಯ ಹಾದಿ

Kannadiga Suhas Yathiraj an IAS Officer And Silver Medalist In Tokyo Paralympics, His Achievements

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಲಾಳನಕೆರೆ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದ ಸುಹಾಸ್ ಯತಿರಾಜ್ ಸಾಧನೆಯ ಶಿಖರವನ್ನೇರಿ ಮಿಂಚಿದ್ದಾರೆ. ಅವರ ಜೀವನ, ಸಾಧನೆ ಅನೇಕರಿಗೆ ಸ್ಫೂರ್ತಿ, ಎಲ್ಲಾ ಇದ್ದೂ ಏನೂ ಇಲ್ಲ ಎಂದು ಕೊರಗುವವರ ಮಧ್ಯೆ, ಕೆಲಸ ಮಾಡಲಾಗದೆ ನೆಪ ಹುಡುಕುವರ ಮಧ್ಯೆ ಸುಹಾಸ್ ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂದು ತೋರಿಸಿದ್ದಾರೆ.

ಆತ ಛಲಗಾರ, ತನ್ನ ಕಾಲಿನಲ್ಲಿ ಊನ ಇದ್ದರೂ ಅದು ಅವರ ಸಾಧನೆಯ ಹಾದಿಗೆ ಎಂದಿಗೂ ತೊಡಕಾಗಲಿಲ್ಲ. ಐಎಎಸ್ ಅಧಿಕಾರಿಯಾಗಿ, ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವವರೆಗೆ ಅವರು ಯಶಸ್ಸಿನ ಪಯಣ ಸಾಗಿದೆ.

ಹಾಸನದ ಅರಸೀಕೆರೆಯ ಲಾಳನಕೆರೆ ಗ್ರಾಮದಲ್ಲಿ 1983, ಜುಲೈ 2ರಂದು ಜನಸಿದ ಸುಹಾಸ್ ಯತಿರಾಜ್ ಜನಿಸಿದರು. ಇವರ ತಂದೆ ಯತಿರಾಜ್, ತಾಯಿ ಜಯಶ್ರೀ. ತಂದೆ ಸರ್ಕಾರಿ ಉದ್ಯೋಗಿಯಾಗಿದ್ದ ಕಾರಣ ಅವರು ವಿವಿಧ ಊರುಗಳಿಗೆ ವರ್ಗಾವಣೆಯಾಗುತ್ತಿದ್ದರು. ಹಾಸನದ ದುದ್ದ ಎನ್ನುವಲ್ಲಿ ಸುಹಾಸ್ ಪ್ರಾಥಮಿಕ ಶಿಕ್ಷಣ ಪೂರೈಸಿದರೆ, ಶಿವಮೊಗ್ಗ ಡಿವಿಎಸ್ ಕಾಲೇಜಿನಲ್ಲಿ ಹೈಸ್ಕೂಲು, ಪಿಯುಸಿ ಮುಗಿಸಿದರು. ನಂತರ ಮಂಗಳೂರಿನ ಸುರತ್ಕಲ್‌ನ ಎನ್‌ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಮುಗಿಸಿದರು.

 ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ

ಉತ್ತರಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ

ಎಂಜಿನಿಯರಿಂಗ್ ಮುಗಿದ ನಂತರ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು, ನಂತರ ಐಎಎಸ್ ಪರೀಕ್ಷೆ ಬರೆದು ಆಯ್ಕೆಯಾದರು. 2007ರ ಉತ್ತರ ಪ್ರದೇಶ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದಾರೆ. ಐಎಎಸ್ ಅಧಿಕಾರಿಯಾದ ಮೊದಲ ವಿಶೇಷ ಚೇತನ ವ್ಯಕ್ತಿ ಅವರು. ಸುಹಾಸ್ ಅವರ ಪತ್ನಿ ರಿತು ಅವರೂ ಕೂಡ ಸಿವಿಲ್ ಸೇವೆಯಲ್ಲಿದ್ಧಾರೆ. ಸುಹಾಸ್ ಯತಿರಾಜ್ ಸದ್ಯ ಉತ್ತರ ಪ್ರದೇಶದ ಗೌತಮ ಬುದ್ಧ ನಗರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐಎಎಸ್ ಅಧಿಕಾರಿಯಾಗಿ ಉತ್ತಮವಾಗಿ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದ ಸುಹಾಸ್‌ ಯತಿರಾಜ್‌ಗೆ ಕ್ರೀಡೆಯಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು. 2016 ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ ಸುಹಾಸ್ ಯತಿರಾಜ್ ಇಡೀ ದೇಶವೇ ತಿರುಗಿ ನೋಡುವ ಸಾಧನೆ ಮಾಡಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್‌ನಲ್ಲಿ ಸಾಧನೆ ಮೆರೆದ ಕನ್ನಡಿಗ SN ಲೋಕೇಶ್

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹೆಮ್ಮೆಯ ಕನ್ನಡಿಗ

ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಹೆಮ್ಮೆಯ ಕನ್ನಡಿಗ

2016ರಲ್ಲಿ ಚೀನಾದಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ ಷಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಮ್ಮ ಸಾಧನೆಯ ಮತ್ತೊಂದು ಅಧ್ಯಾಯವನ್ನು ಆರಂಭಿಸಿದರು. ಮಾರ್ಚ್ 2018 ರಲ್ಲಿ ವಾರಣಾಸಿಯಲ್ಲಿ ನಡೆದ ಎರಡನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ರಾಷ್ಟ್ರೀಯ ಚಾಂಪಿಯನ್ ಆದರು.

ನಂತರ 2020ರಲ್ಲಿ ಜಪಾನ್‌ ಟೋಕಿಯೋದಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಯಶಸ್ಸಿನ ಶಿಖರವನ್ನು ತಲುಪಿದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಜಿಲ್ಲಾಧಿಕಾರಿ ಎನಿಸಿಕೊಂಡರು. ಟೂರ್ನಿಯಲ್ಲಿ ಯಶಸ್ವಿಯಾಗಿ ಫೈನಲ್ ತಲುಪಿದ ಸುಹಾಸ್, ಫ್ರಾನ್ಸ್​ನ ಲೂಕಸ್ ಮಜೂರ್ ವಿರುದ್ಧ 1-2 ಸೆಟ್​ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ ಪದಕ ಗೆದ್ದರು. ಬೆಳ್ಳಿ ಪದಕ ಗೆದ್ದ ನಂತರ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಸುಹಾಸ್ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೊರೊನಾ ಸಂದರ್ಭದಲ್ಲಿ ಕೆಲಸದ ಒತ್ತಡದ ನಡುವೆಯೂ ತಮ್ಮ ಬ್ಯಾಡ್ಮಿಂಟನ್ ಆಟವನ್ನು ಕಡೆಗಣಿಸದ ಸುಹಾಸ್ ಹಗಲು ಸರ್ಕಾರದ ಕೆಲಸ ನಿರ್ವಹಿಸಿದ ಬಳಿಕ ರಾತ್ರಿ ಹೊತ್ತು ಅಭ್ಯಾಸ ಮಾಡುತ್ತಿದ್ದರು. ಸದ್ಯ ಇವರು ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ 2ನೇ ಶ್ರೇಯಾಂಕಿತ ಆಟಗಾರನಾಗಿದ್ದಾರೆ.

ಸುಹಾಸ್ ಯತಿರಾಜ್ ಸಾಧನೆ, ಸಂದ ಪ್ರಶಸ್ತಿಗಳು

ಸುಹಾಸ್ ಯತಿರಾಜ್ ಸಾಧನೆ, ಸಂದ ಪ್ರಶಸ್ತಿಗಳು

2017ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆದರು. 2018ರಲ್ಲಿ ವಾರಾಣಸಿಯಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದರು. 2019ರಲ್ಲಿ ಬಿಎಂಡಬ್ಲ್ಯೂ ಟರ್ಕಿಶ್ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದರು. 2021ರಲ್ಲಿ ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದರು.

ಕ್ರೀಡೆಯಲ್ಲಿನ ಸಾಧನೆಗಾಗಿ ಅವರಿಗೆ 2021ರಲ್ಲಿ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಅರ್ಜುನ ಪ್ರಶಸ್ತಿ ದೊರೆತಿದೆ. 2016ರಲ್ಲಿ ಉತ್ತರ ಪ್ರದೇಶ ರಾಜ್ಯದ ಅತ್ಯುಚ್ಚ ನಾಗರಿಕ ಪ್ರಶಸ್ತಿ ಯಶ್ ಭಾರತಿ ಅವರಿಗೆ ದೊರಕಿದೆ. ಅತ್ಯುತ್ತಮ ಪ್ಯಾರಾ ಕ್ರೀಡಾಪಟು ಪ್ರಶಸ್ತಿಯನ್ನು ನೀಡಿ ಉತ್ತರ ಪ್ರದೇಶ ಸರ್ಕಾರ ಗೌರವಿಸಿದೆ. 2017ರಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಕ್ರೀಡೆಯಲ್ಲಿನ ಸಾಧನೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ವಿಶೇಷ ಪದಕ ನೀಡಿ ಗೌರವಿಸಿದರು.

ಇಷ್ಟೆಲ್ಲಾ ಸಾಧನೆ ಮಾಡಿರುವ ಗಿರೀಶ್ ಯತಿರಾಜ್ ಸಾಧನೆ ಮಾಡಬಯಸುವವರಿಗೆ ನಿಮ್ಮ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿಕೊಳ್ಳಿ, ಜೀವನದಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಆದರೆ, ಎಂದಿಗೂ ಛಲ ಬಿಡಬೇಡಿ. ಗುರಿ ಮುಟ್ಟುವ ಹಂಬಲ ಇದ್ದರೆ ಸಮಯವನ್ನು ಸರಿಯಾಗಿ ನಿರ್ವಹಣೆ ಮಾಡಿ ಎಂದು ಹೇಳುತ್ತಾರೆ.

Story first published: Wednesday, November 2, 2022, 12:56 [IST]
Other articles published on Nov 2, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+