Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂತರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್‌ನಲ್ಲಿ ಸಾಧನೆ ಮೆರೆದ ಕನ್ನಡಿಗ SN ಲೋಕೇಶ್

SN Lokesh

ಸನೋಜ್ ವಿ.ಆರ್‌ , ಸೈಕ್ಲಿಂಗ್ ಮೂಲಕ ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರದಾದ್ಯಂತ ತನ್ನನ್ನು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಮೈಸೂರು ಮೂಲದ ಸೈಕ್ಲಿಂಗ್ ಸ್ಟಾರ್. ಮೈಸೂರಿನ ಕೆ.ಆರ್‌ ನಗರ ತಾಲೂಕಿನ ಲೋಕೇಶ್ ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗಿಯಾಗಿ ಸೈಕ್ಲಿಂಗ್‌ನಲ್ಲಿ ತಮ್ಮ ಕೌಶಲ್ಯವನ್ನ ಪ್ರದರ್ಶಿಸಿದ್ದಾರೆ.

ಮೈಖೇಲ್ ಕನ್ನಡದ ಎಕ್ಸ್‌ಕ್ಲೂಸಿವ್ ''ಕನ್ನಡ ರಾಜ್ಯೋತ್ಸವದ'' ಸರಣಿ ಲೇಖನದಲ್ಲಿ ಈ ಬಾರಿ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿರುವ ಕನ್ನಡಿಗ ಎಸ್ಎನ್ ಲೋಕೇಶ್ ಕುರಿತಾಗಿ ನಿಮಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ತಿಳಿಸಿಕೊಡುವ ಪ್ರಯತ್ನ ನಡೆಸಲಾಗಿದೆ. ಸನೋಜ್ ಕುರಿತು ಕೆಲವು ಪ್ರಮುಖ ಮಾಹಿತಿಗಳು ಈ ಕೆಳಗಿದೆ.

ಮೈಸೂರಿನ ಕೆ.ಆರ್‌ ನಗರ ಮೂಲದ ಸೈಕ್ಲಿಸ್ಟ್

ಮೈಸೂರಿನ ಕೆ.ಆರ್‌ ನಗರ ಮೂಲದ ಸೈಕ್ಲಿಸ್ಟ್

ಲೋಕೇಶ್ ನವೆಂಬರ್ 11, 1986ರಲ್ಲಿ ಮೈಸೂರಿನ ಕೆ.ಆರ್ ನಗರದ ಶ್ರೀ ನರಸಿಂಹಾಚಾರ್ ಮತ್ತು ಅಂಜಲಿ ದಂಪತಿಗಳ ಪುತ್ರನಾಗಿ ಜನಿಸಿದರು. 2001ರಲ್ಲಿ ಸ್ವಾತಂತ್ರ್ಯ ದಿನಾಚಾರಣೆ ಸಂದರ್ಭದಲ್ಲಿ ಮೊದಲ ಬಾರಿಗೆ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಲೋಕೇಶ್ ಪದಕ ಗೆಲ್ಲುವ ಮೂಲಕ ಸೈಕ್ಲಿಂಗ್ ಕ್ರೀಡಾ ಜಗತ್ತಿಗೆ ಕಾಲಿಟ್ಟರು.

ಮೊದಲಿಗೆ ಹವ್ಯಾಸಿ ಸೈಕ್ಲಿಸ್ಟ್ ಆಗಿದ್ದ ಲೋಕೇಶ್ ನಂತರದಲ್ಲಿ ವೃತ್ತಿಪರ ಸೈಕ್ಲಿಸ್ಟ್‌ ಆಗುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಮೂಲಕ ಭಾರತದ ಶ್ರೇಷ್ಟ ಸೈಕ್ಲಿಸ್ಟ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ವಿಶ್ವದ ನಾನಾ ದೇಶದಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ರಾಜ್ಯಕ್ಕೂ ಮತ್ತು ರಾಷ್ಟ್ರಕ್ಕೂ ಕೀರ್ತಿ ತಂದಿದ್ದಾರೆ.

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿದ ಆರ್‌ಸಿಬಿ ಆಟಗಾರರು; ವಿಡಿಯೋ

ಎಸ್‌.ಎನ್ ಲೋಕೇಶ್ ಸೈಕ್ಲಿಂಗ್ ಸಾಧನೆಗಳು

ಎಸ್‌.ಎನ್ ಲೋಕೇಶ್ ಸೈಕ್ಲಿಂಗ್ ಸಾಧನೆಗಳು

* 2005ರಿಂದ 2017 ರವರೆಗೆ ಥೈಲ್ಯಾಂಡ್ , ಸಿಂಗಾಪುರ, ಇಂಡೋನೇಷಿಯಾ, ಯುಎಇ, ಜಪಾನ್ ಮತ್ತು ಜರ್ಮನಿಯಲ್ಲಿ ನಡೆದ ಅಂತರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತಂದುಕೊಟ್ಟಿದ್ದಾರೆ.

* ದೇಶದ ನಾನಾ ಭಾಗಗಳಲ್ಲಿ ನಡೆದ ಸೈಕ್ಲಿಂಗ್‌ ಸ್ಪರ್ಧೆಗಳಲ್ಲಿ ಭಾಗವಹಿಸಿ 25ಕ್ಕೂ ಹೆಚ್ಚು ಪದಕಗಳನ್ನು ಗೆದ್ದು ಬೀಗಿದ್ದಾರೆ.

* ರಾಜ್ಯಮಟ್ಟದ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗಳಲ್ಲಿ 20ಕ್ಕೂ ಹೆಚ್ಚು ಪದಕಗಳಿಗೆ ಕೊರಳೊಡ್ಡಿದ್ದಾರೆ.

ಟಿ20 ವಿಶ್ವಕಪ್: ಕಿವೀಸ್ ವಿರುದ್ಧ ಇಂಗ್ಲೆಂಡ್ ಗೆದ್ದ ಬಳಿಕ ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್

ಸೈಕ್ಲಿಂಗ್ ಸ್ಟಾರ್ ಲೋಕೇಶ್‌ಗೆ ಸಂದಿರುವ ಪ್ರಮುಖ ಪ್ರಶಸ್ತಿಗಳು

ಸೈಕ್ಲಿಂಗ್ ಸ್ಟಾರ್ ಲೋಕೇಶ್‌ಗೆ ಸಂದಿರುವ ಪ್ರಮುಖ ಪ್ರಶಸ್ತಿಗಳು

* 2007ರಲ್ಲಿ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ KOA ಪ್ರಶಸ್ತಿ ನೀಡಿ ಗೌರವಿಸಿದೆ.

* 2014ರಲ್ಲಿ ಕರ್ನಾಟಕ ಸರ್ಕಾರ ಏಕಲವ್ಯ ಪ್ರಶಸ್ತಿ ನೀಡಿದೆ.

* 2017ರಲ್ಲಿ ಪ್ರೈಡ್ ಆಫ್ ಮೈಸೂರು ಪ್ರಶಸ್ತಿಯನ್ನು ಲೋಕೇಶ್ ತಮ್ಮದಾಗಿಸಿಕೊಂಡಿದ್ದಾರೆ.

ಸೈಕ್ಲಿಂಗ್‌ನಲ್ಲಿ ಹೀಗೆ ಅನೇಕ ಸಾಧನೆಯ ಜೊತೆಗೆ ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಲೋಕೇಶ್‌ ಅನೇಕ ಸಾಧನೆಗಳ ಜೊತೆಗೆ ತಾನು ಕಲಿತ ಕ್ರೀಡೆಯನ್ನು ಸಮಾಜಕ್ಕೆ ಹಿಂದಿರುಗಿಸುತ್ತಿದ್ದಾರೆ. ಯುವ ಸೈಕ್ಲಿಸ್ಟ್‌ಗಳಿಗೆ ತರಬೇತಿ ನೀಡುವ ಮೂಲಕ ರಾಷ್ಟ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ.

Story first published: Tuesday, November 1, 2022, 23:50 [IST]
Other articles published on Nov 1, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+