ವಿಶ್ವ ಅಂಗವಿಕಲರ ಅಥ್ಲೆಟಿಕ್ಸ್: ಭಾರತದ ಕರಮ್ ಜ್ಯೋತಿಗೆ ಕಂಚು
ನವದೆಹಲಿ, ಜುಲೈ 22: ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಡಿಸ್ಕಸ್ ತ್ರೋ ಕ್ರೀಡಾಳು ಕರಮ್ ಜ್ಯೋತಿ ದಲಾಲ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳೆಯರ ಎಫ್55 ವಿಭಾಗದ ಡಿಸ್ಕಸ್ ತ್ರೋನಲ್ಲಿ ಭಾಗವಹಿಸಿದ್ದ ಅವರು, 19.02 ಮೀಟರ್ ವರೆಗೆ ಡಿಸ್ಕ್ ಎಸೆದರಲ್ಲದೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಹರೇನ್ ನ ಅಲೊಮಾರಿ ರೊಬಾ (19.01 ಮೀ.) ಅವರನ್ನು ಹಿಂದಿಕ್ಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ದಲಾಲ್ ಅವರ ಈ ಎಸೆತ, ಈ ಬಾರಿ ವಿಶ್ವ ಅಥ್ಲೆಟಿಕ್ಸ್ ನಲ್ಲಿಯೇ ಅತಿ ದೂರದ ಎಸೆತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದಹಾಗೆ, ದಲಾಲ್ ಅವರ ಈ ಚಿನ್ನದ ಪದಕವು ಈ ಬಾರಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ.
ಇದೇ ಕ್ರೀಡಾಕೂಟದಲ್ಲಿ, ಸುಂದರ್ ಸಿಂಗ್ ಗುರ್ಜಾರ್ ಅವರು ಪುರುಷರ ಜ್ಯಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿದ್ದಾರೆ. ಇನ್ನು, ಅಮಿತ್ ಸರೋಹಾ ಅವರು ಎಫ್-51 ವಿಭಾಗದ ಕ್ಲಬ್ ಥ್ರೋ ನಲ್ಲಿ ಬೆಳ್ಳಿಯ ಪದಕ ತಂದಿದ್ದಾರೆ.
Story first published: Wednesday, January 3, 2018, 10:16 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications