For Quick Alerts
ALLOW NOTIFICATIONS  
For Daily Alerts

ವಿಂಡೀಸ್ ವಿರುದ್ಧದ ತಂಡದಲ್ಲಿ ವಿನಯ್, ಬಿನ್ನಿ ಇಲ್ಲ

By Mahesh

ಮುಂಬೈ, ಅ.5: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಿಂದ ರೋಹಿತ್ ಶರ್ಮಾ ಮತ್ತು ಅಶ್ವಿನ್ ಅವರನ್ನು ಕೈಬಿಡಲಾಗಿದೆ. ಜೊತೆ ಕರ್ನಾಟಕದ ವೇಗಿ ವಿನಯ್ ಕುಮಾರ್ ಅವರನ್ನು ಕಡೆಗಣಿಸಲಾಗಿದೆ.ಇದರಿಂದ ಮುಂಬರುವ ವಿಶ್ವಕಪ್ ಆಡುವ ಅವರ ಕನಸು ಮಸುಕಾಗುವ ಸಾಧ್ಯತೆಯಿದೆ.

ವೆಸ್ಟ್‌ಇಂಡೀಸ್ ವಿರುದ್ಧ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಮಾತ್ರ 14 ಮಂದಿ ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಸಿಎಲ್ಟಿ20 ಫೈನಲ್ ತಲುಪಿ ಸೋಲು ಅನುಭವಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಸ್ಪಿನ್ನರ್ ಕುಲದೀಪ್ ಯಾದವ್ ಆಯ್ಕೆಯಾಗಿದ್ದರೆ, ವಿನಯ್ ಕುಮಾರ್ ಅವರು ತಂಡ ಸೇರುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಕರ್ನಾಟಕದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಅವರಿಗೂ ಸ್ಥಾನ ನೀಡಿಲ್ಲ.

ಉಳಿದಂತೆ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ರೋಹಿತ್ ಶರ್ಮಾ ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡದ ಪ್ರಮುಖ ಬೌಲರ್ ಆರ್.ಅಶ್ವಿನ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ವೇಗಿ ಧವಲ್ ಕುಲಕರ್ಣಿ ಅವರನ್ನು ಪರಿಗಣಿಸಲಾಗಿಲ್ಲ. ಚಾಂಪಿಯನ್ಸ್ ಲೀಗ್‌ ಟಿ20 ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದಿರುವ ಕುಲದೀಪ್ ಯಾದವ್ ಮತು ಅಮಿತ್ ಮಿಶ್ರಾ ಅವರು ತಂಡದಲ್ಲಿ ಸ್ಪಿನ್ನರ್ ಗಳಾಗಿರುತ್ತಾರೆ.

Vinay Kumar not selected

ಉಳದಂತೆ ಮೋಹಿತ್ ಶರ್ಮಾ, ಅಂಬಾಟಿ ರಾಯುಡು, ಮುರಳಿ ವಿಜಯ್ ಅವರು 14ರ ಬಳಗವನ್ನು ಸೇರಿಕೊಂಡಿದ್ದಾರೆ. ಇದೇ ಅಕ್ಟೋಬರ್ 8ರಿಂದ ವೆಸ್ಟ್‌ಇಂಡಿಸ್ ವಿರುದ್ಧದ ಸರಣಿ ಆರಂಭವಾಗಲಿದ್ದು, ಕೊಚ್ಚಿನ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.

ಅಯ್ಕೆಯಾದ ತಂಡ: ಮಹೇಂದ್ರ ಸಿಂಗ್ ಧೋನಿ (ನಾಯಕ),,ಶಿಖರ್ ಧವನ್,ವಿರಾಟ್ ಕೊಹ್ಲಿ,ಅಜಿಂಕ್ಯಾ ರಹಾನೆ,ಅಂಬಾಟಿ ರಾಯುಡು,ಮುರಳಿ ವಿಜಯ್,ಮೋಹಿತ್ ಶರ್ಮಾ, ಸುರೇಶ್ ರೈನಾ,ರವೀಂದ್ರ ಜಡೇಜಾ,ಭುವನೇಶ್ವರ ಕುಮಾರ್,ಮಹಮದ್ ಶಮಿ, ಉಮೇಶ್ ಯಾದವ್,ಕುಲದೀಪ್ ಯಾದವ್,ಅಮಿತ್ ಮಿಶ್ರಾ,

ಸ್ಥಾನ ಕಳೆದುಕೊಂಡವರು: ವಿನಯ್ ಕುಮಾರ್, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಕರಣ್ ಶರ್ಮ, ಧವಳ್ ಕುಲಕರ್ಣಿ, ಆರ್ ಅಶ್ವಿನ್(ವಿಶ್ರಾಂತಿ ನೀಡಲಾಗಿದೆ)

ವೇಳಾಪಟ್ಟಿ: (ಎಲ್ಲಾ ಪಂದ್ಯಗಳು 2.30 PM ಗೆ ಆರಂಭವಾಗಲಿದೆ)
*ಅಕ್ಟೋಬರ್ 8(ಬುಧವಾರ) ಮೊದಲ ಪಂದ್ಯ: ಕೊಚ್ಚಿ.
* ಅಕ್ಟೋಬರ್ 11 (ಬುಧವಾರ) ಎರಡನೇ ಪಂದ್ಯ: ದೆಹಲಿ.
* ಅಕ್ಟೋಬರ್ 14 (ಮಂಗಳವಾರ) ಮೂರನೇ ಪಂದ್ಯ: ವಿಶಾಖಪಟ್ಟಣಂ.
* ಅಕ್ಟೋಬರ್ 17 (ಶುಕ್ರವಾರ) ನಾಲ್ಕನೇ ಪಂದ್ಯ: ಧರ್ಮಶಾಲಾ.
* ಅಕ್ಟೋಬರ್ 20 (ಸೋಮವಾರ) ಐದನೇ ಪಂದ್ಯ: ಕೋಲ್ಕತ್ತಾ.

Story first published: Wednesday, January 3, 2018, 10:16 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+