FIDE Chess World Cup: ಈವರೆಗೆ ಫಿಡೆ ಚೆಸ್ ವಿಶ್ವಕಪ್ ವಿಜೇತ ಮತ್ತು ರನ್ನರ್-ಅಪ್ ಆಟಗಾರರ ಪಟ್ಟಿ
ಗುರುವಾರ, ಆಗಸ್ಟ್ 24ರಂದು ಅಜರ್‌ಬೈಜಾನ್‌ನ ಬಾಕುದಲ್ಲಿ ಮುಕ್ತಾಯಗೊಂಡ ಫೆಡರೇಶನ್ ಇಂಟರ್‌ನ್ಯಾಷನಲ್ ಡೆಸ್ ಎಚೆಕ್ಸ್ (FIDE) ಚೆಸ್ ವಿಶ್ವಕಪ್ ಪಂದ್ಯಾವಳಿಯ ಫೈನಲ್‌ನ ಮೂರನೇ ದಿನದ ಟೈ ಬ್ರೇಕರ್ ಗೇಮ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ವಿರುದ್ಧ ವಿಶ್ವ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ರೋಚಕವಾಗಿ ಗೆದ್ದರು.
FIDE ವಿಶ್ವಕಪ್ ಫೈನಲ್ ಟೈಬ್ರೇಕರ್‌ನಲ್ಲಿ ಭಾರತದ ಪ್ರಜ್ಞಾನಂದ ವಿಶ್ವದ ನಂಬರ್ 1 ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ವಿರುದ್ಧ ಸೋಲು ಕಂಡಿದ್ದಾರೆ. ಈ ಮೂಲಕ ನಾರ್ವೆಯ ದಿಗ್ಗಜ ಆಟಗಾರ ಮತ್ತೊಮ್ಮೆ ಚಾಂಪಿಯನ್ ಎನಿಸಿಕೊಂಡಿದ್ದಾರೆ.

2023ರ ಫಿಡೆ ಚೆಸ್ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವವರು ಯಾರು ಎಂದು ನಿರ್ಧರಿಸುವ ಈ ಟೈ ಬ್ರೇಕರ್ ತೀವ್ರ ಪೈಪೊಟಿಯಿಂದ ಕೂಡಿತ್ತು.
ಈ ನಿರ್ಣಾಯಕ ಹಣಾಹಣಿಯಲ್ಲಿ ಚೆಸ್‌ನ ಸಾರ್ವಕಾಲಿಕ ಶ್ರೇಷ್ಠ ಎನಿಸಿಕೊಳ್ಳುವ ನಾರ್ವೆಯ ದಿಗ್ಗಜ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ತನ್ನ ಅನುಭವದ ಆಟವನ್ನು ಆಡುವ ಮೂಲಕ ಭಾರತದ 18 ವರ್ಷದ ಯುವ ಆಟಗಾರನ ವಿರುದ್ಧ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು.
ಚೆಸ್ ಬುದ್ಧಿವಂತರ ಆಟವೆಂದೇ ಪರಿಗಣಿಸುವ ಒಳಾಂಗಣ ಆಟವಾಗಿದೆ. FIDE ಚೆಸ್ ವಿಶ್ವಕಪ್ ಪಂದ್ಯಾವಳಿಯು 2000ರಲ್ಲಿ ಆರಂಭವಾಗಿದ್ದು, ಸುಮಾರು 23 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ.

FIDE ವಿಶ್ವಕಪ್ ವಿಜೇತರ ಪಟ್ಟಿ (2000 - 2023)
2000ರಲ್ಲಿ ಉದ್ಘಾಟನಾ ಫಿಡೆ ಚೆಸ್ ವಿಶ್ವಕಪ್ ಆರಂಭಗೊಂಡಿತು. ನಂತರ, 2002ರಲ್ಲಿ ಎರಡನೇ ಚೆಸ್ ವಿಶ್ವಕಪ್ ಆಡಲಾಯಿತು.
ಈ ಐತಿಹಾಸಿಕ ಸ್ಪರ್ಧೆಗಳು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ಗೆ ಆಂತರಿಕವಾಗಿ ಸಂಬಂಧ ಹೊಂದಿಲ್ಲದಿದ್ದರೂ, ಇತಿಹಾಸದಲ್ಲಿ ಪ್ರಮುಖ ಘಟನೆಗಳಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿವೆ.
ಚೆಸ್‌ನ ರೋಚಕ ಹಣಾಹಣಿಯ ನಡುವೆ, ಭಾರತದ ಪ್ರಖ್ಯಾತ ವಿಶ್ವನಾಥನ್ ಆನಂದ್ ಅವರು ಆರಂಭಿಕ ಎರಡು ಚೆಸ್ ವಿಶ್ವಕಪ್‌ಗಳನ್ನು ಗೆದ್ದುಕೊಂಡರು. ಈವರೆಗೆ ಫಿಡೆ ಚೆಸ್ ವಿಶ್ವಕಪ್ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ.
FIDE ಚೆಸ್ ವಿಶ್ವಕಪ್ ವಿಜೇತರು ಮತ್ತು ರನ್ನರ್-ಅಪ್ ಆಟಗಾರರು (2000-2023)
2023
ವಿಜೇತರು: ಮ್ಯಾಗ್ನಸ್ ಕಾರ್ಲ್‌ಸನ್
ರನ್ನರ್-ಅಪ್: ರಮೇಶಬಾಬು ಪ್ರಗ್ನಾನಂದ (ಭಾರತ)
2021
ವಿಜೇತರು: ಜಾನ್-ಕ್ರಿಸ್ಜ್ಟೋಫ್ ದುಡಾ
ರನ್ನರ್-ಅಪ್: ಸೆರ್ಗೆ ಕರ್ಜಾಕಿನ್
2019
ವಿಜೇತರು: ಟೀಮೋರ್ ರಾಡ್ಜಾಬೊವ್
ರನ್ನರ್-ಅಪ್: ಡಿಂಗ್ ಲಿರೆನ್
2017
ವಿಜೇತರು: ಲೆವೊನ್ ಅರೋನಿಯನ್
ರನ್ನರ್-ಅಪ್: ಡಿಂಗ್ ಲಿರೆನ್
2015
ವಿಜೇತರು: ಸೆರ್ಗೆ ಕರ್ಜಾಕಿನ್
ರನ್ನರ್ ಅಪ್: ಪೀಟರ್ ಸ್ವಿಡ್ಲರ್
2013
ವಿಜೇತರು: ವ್ಲಾಡಿಮಿರ್ ಕ್ರಾಮ್ನಿಕ್
ರನ್ನರ್-ಅಪ್: ಡಿಮಿಟ್ರಿ ಆಂಡ್ರೇಕಿನ್
2011
ವಿಜೇತರು: ಪೀಟರ್ ಸ್ವಿಡ್ಲರ್
ರನ್ನರ್-ಅಪ್: ಅಲೆಕ್ಸಾಂಡರ್ ಗ್ರಿಸ್ಚುಕ್
2009
ವಿಜೇತರು: ಬೋರಿಸ್ ಗೆಲ್ಫಾಂಡ್
ರನ್ನರ್-ಅಪ್: ರುಸ್ಲಾನ್ ಪೊನೊಮರಿವ್
2007
ವಿಜೇತರು: ಗಾಟಾ ಕಾಮ್ಸ್ಕಿ
ರನ್ನರ್-ಅಪ್: ಅಲೆಕ್ಸಿ ಶಿರೋವ್
2005
ವಿಜೇತ: ಲೆವೊನ್ ಅರೋನಿಯನ್
ರನ್ನರ್-ಅಪ್: ರುಸ್ಲಾನ್ ಪೊನೊಮರಿವ್
2002
ವಿಜೇತ: ವಿಶ್ವನಾಥನ್ ಆನಂದ್ (ಭಾರತ)
ರನ್ನರ್-ಅಪ್: ರುಸ್ತಮ್ ಕಾಸಿಮ್ಜಾನೋವ್
2000
ವಿಜೇತ: ವಿಶ್ವನಾಥನ್ ಆನಂದ್ (ಭಾರತ)
ರನ್ನರ್-ಅಪ್: ಎವ್ಗೆನಿ ಬರೀವ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications