
ಅರ್ಜುನ್ ಮೈನಿ ಹಿನ್ನೆಲೆ ಏನು?
ಅರ್ಜುನ್ ಮೈನಿ ರೇಸಿಂಗ್ ಕುಟುಂಬದಿಂದಲೇ ಬಂದವರಾಗಿದ್ದು, ಆತನ ಕಿರಿಯ ಸಹೋದರ ಕುಶ್ ಮೈನಿ ಕೂಡ ರೇಸರ್ ಆಗಿರುವುದು ವಿಶೇಷ. ಈತ ಎಂ.ಪಿ ಮೋಟಾರ್‌ಸ್ಪೋರ್ಟ್‌ನೊಂದಿಗೆ FIA ಫಾರ್ಮುಲಾ 3 ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುವ ರೇಸರ್ ಆಗಿದ್ದಾರೆ.
ಅರ್ಜುನ್ ಮೈನಿ ತಂದೆ ಗೌತಮ್ 1990 ರ ದಶಕದ ಕೊನೆಯಲ್ಲಿ ಫಾರ್ಮುಲಾ ಇಂಡಿಯಾ ಸಿಂಗಲ್ ಸೀಟರ್ ಮಾರುತಿ ಎಂಜಿನ್‌ನಲ್ಲಿ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದರು. ಹೀಗಾಗಿ ರೇಸಿಂಗ್ ಅನ್ನುವುದು ಇವರ ಇಬ್ಬರು ಮಕ್ಕಳಿಗೆ ರಕ್ತದಿಂದಲೇ ಬಂದು ಬಿಟ್ಟಿದೆ. ಮೈನಿ ತನ್ನ ಐದನೇ ವಯಸ್ಸಿನಲ್ಲೇ ಗೋ-ಕಾರ್ಟ್, 80cc ಕಮರ್ ಕಾರ್ಟ್ ಅನ್ನು ಪಡೆಯುವ ಮೂಲಕ ರೇಸಿಂಗ್ ಆಸಕ್ತಿಯನ್ನ ತೋರಿದ್ದರು.
ಇನ್ನು ಮೈನಿಯ ಚಿಕ್ಕಪ್ಪ ಚೇತನ್ ಮೈನಿ ಕೂಡ ಚೇತನ್ ಮೈನಿ ಅವರು ಭಾರತದ ಮೊದಲ ಎಲೆಕ್ಟ್ರಿಕ್ ಕಾರ್, REVA ನಿರ್ಮಾಣಕ್ಕೆ ಹೆಸರುವಾಸಿಯಾದ ಭಾರತೀಯ ಉದ್ಯಮಿಯಾಗಿದ್ದಾರೆ. ಪ್ರಸ್ತುತ ಇವರು ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಸಂಸ್ಥಾಪಕರಾಗಿದ್ದಾರೆ.

8ನೇ ವಯಸ್ಸಿನಲ್ಲೇ ಎರಡು ಚಾಂಪಿಯನ್‌ಶಿಪ್ ಗೆದ್ದ ಅರ್ಜುನ್
ಮೈನಿ 5 ನೇ ವಯಸ್ಸಿನಲ್ಲಿ ತನ್ನ ಮೊದಲ ಗೋ-ಕಾರ್ಟ್, 80cc ಕಮರ್ ಕಾರ್ಟ್ ಅನ್ನು ಪಡೆದರು. ಇದಾದ ಬಳಿಕ 8 ನೇ ವಯಸ್ಸಿನಲ್ಲಿ, ಮೈನಿ ತನ್ನ ಮೊದಲ ಎರಡು ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿರುವುದು ಇವರ ರೇಸಿಂಗ್ ಪ್ರತಿಭೆ ಮತ್ತು ದೃಢ ಪರಿಶ್ರಮವನ್ನ ಬಿತ್ತರಿಸುತ್ತಿದೆ.
ರೇಸಿಂಗ್‌ನ ಮೊದಲ ವರ್ಷದಲ್ಲಿ ಮೊದಲ ಪ್ರಶಸ್ತಿಗಳ ನಂತರ, ಮೈನಿ ಏಷ್ಯಾ ಮ್ಯಾಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ರೇಸಿಂಗ್‌ಗೆ ಇಳಿದರು. ಇದು ಇವರ ಯಶಸ್ಸಿಗೆ ಪ್ರಮುಖ ಕಾರಣವಾಯಿತು. 2008ರಲ್ಲಿ ಮಲೇಷಿಯಾದಲ್ಲಿ ನಡೆದ ರಾಯಲ್ ಕೆಲಟನ್ ಕಾರ್ಟ್ ಪ್ರಿಕ್ಸ್ ಅನ್ನು ಗೆಲ್ಲುವ ಮೂಲಕ ವಿದೇಶದಲ್ಲಿ ಕಾರ್ಟ್ ರೇಸ್ ಗೆದ್ದ ಅತ್ಯಂತ ಕಿರಿಯ ಭಾರತೀಯರಾದರು
ನಮ್ಮೂರ ಪ್ರತಿಭೆ: ಭಾರತದ ಉದಯೋನ್ಮುಖ ಟೇಬಲ್ ಟೆನಿಸ್ ತಾರೆ ಅರ್ಚನಾ ಕಾಮತ್

ಅತ್ಯಂತ ಕಿರಿಯ ರೇಸಿಂಗ್ ಡ್ರೈವರ್ ಎಂಬ ಕೀರ್ತಿ
ಮೈನಿ ಅವರು 11ನೇ ವಯಸ್ಸಿನಲ್ಲಿ ಜೆ.ಕೆ. ಟೈರ್ಸ್ ಟೈರ್ ರೋಟಾಕ್ಸ್ ಮ್ಯಾಕ್ಸ್ ಜೂನಿಯರ್ ಮ್ಯಾಕ್ಸ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಅತ್ಯಂತ ಕಿರಿಯ ಡ್ರೈವರ್ ಎಂಬ ಕೀರ್ತಿಗೆ ಪಾತ್ರರಾದರು. ಇದಾದ ಬಳಿಕ ಅವರು 2009 ರಲ್ಲಿ ರೆಡ್ ರೂಸ್ಟರ್ ರೇಸಿಂಗ್ ತಂಡದಿಂದ ಆಯ್ಕೆಯಾದರು. ನಂತರ ಅವರು 2010 ರಲ್ಲಿ ರೋಟಾಕ್ಸ್ ಮ್ಯಾಕ್ಸ್ ಚಾಲೆಂಜ್ ಇಂಡಿಯಾ ಜೂನಿಯರ್‌ನಲ್ಲಿ ಭಾಗವಹಿಸಿದರು ಮತ್ತು ಅತಿ ಹೆಚ್ಚು ವೇಗದ ಲ್ಯಾಪ್‌ಗಳೊಂದಿಗೆ 2 ನೇ ಸ್ಥಾನ ಪಡೆದರು.
ನಮ್ಮೂರ ಪ್ರತಿಭೆ: ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತೆ ಕರ್ನಾಟಕದ ಎಂ.ಆರ್ ಪೂವಮ್ಮ

2011ರಿಂದ ಶುರುವಾಯ್ತು ಅರ್ಜುನ್‌ನ ರೇಸಿಂಗ್ ಅಬ್ಬರ
ಮೈನಿಯ ಪ್ರಮುಖ ರೇಸಿಂಗ್ ಸಾಧನೆಗಳು 2011 ರಲ್ಲಿ ಹೊರಬಂದಿತು. ಜೆ.ಕೆ ಟೈಯರ್ಸ್ ಜೂನಿಯರ್ ಮ್ಯಾಕ್ಸ್ ವಿಭಾಗದಲ್ಲಿ Rotax Max ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದರು ಮತ್ತು ಸಹಾರಾ ಫೋರ್ಸ್ ಇಂಡಿಯಾ ತಂಡದ ಒಂದು ಬಿಲಿಯನ್ ವಿಜೇತರಾಗುವ ಮೂಲಕ ತನ್ನ ಬೃಹತ್ ಹೆಜ್ಜೆಯಿಟ್ಟರು.
ಇದಾದ ಬಳಿಕ ಮಕಾವುನಲ್ಲಿನ AKOC ರೇಸ್‌ನಲ್ಲಿ ವಿಜೇತರಾಗಿದ್ದರು ಮತ್ತು ಮಲೇಷ್ಯಾದ ಎಲೈಟ್‌ನಲ್ಲಿನ Ask KF3 ರೇಸ್‌ನಲ್ಲಿ ವಿಜೇತರಾಗಿದ್ದರು. ಅವರು 2011 ರಲ್ಲಿ AKS ಮಲೇಷಿಯನ್ ಚಾಂಪಿಯನ್‌ಶಿಪ್ ಒಟ್ಟಾರೆಯಾಗಿ ಎರಡನೇ ಸ್ಥಾನ ಪಡೆದರು.
ಇನ್ನು ಕೌಲಾಲಂಪುರ್‌ನಲ್ಲಿ ನಡೆದ ರೋಟಾಕ್ಸ್ ಇನ್ವಿಟೇಷನಲ್ ಕಾರ್ಟಿಂಗ್ ರೇಸ್‌ನಲ್ಲಿ ಜೂನಿಯರ್ ಮ್ಯಾಕ್ಸ್ ವಿಭಾಗದಲ್ಲಿ ಮೊದಲ ಸ್ಥಾನದೊಂದಿಗೆ ಇಂಡೋನೇಷ್ಯಾ ಕಾರ್ಟ್ ಪ್ರಿಕ್ಸ್ 2012 ರಲ್ಲಿ ಜೂನಿಯರ್ ವಿಭಾಗದಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು.

GP3 ಫಾರ್ಮುಲಾ ರೇಸ್
ಮೈನಿ 2013 ರಲ್ಲಿ ಕಾರುಗಳ ಮೂಲಕ ರೇಸಿಂಗ್ ಶುರು ಮಾಡಿದರು. ಮೊದಲಿಗೆ ಅವರು ಜೆ.ಕೆ.ಟೈರ್ ರೇಸಿಂಗ್ ಸರಣಿ ಚಾಂಪಿಯನ್‌ಶಿಪ್‌ನಲ್ಲಿ ರನ್ನರ್ ಅಪ್ ಮುಗಿಸಿದ್ರು. ಬುದ್ಧ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಎರಡು ರೇಸ್‌ಗಳನ್ನು ಗೆದ್ದರು ಮತ್ತು ಮಲೇಷಿಯಾದ ಸೂಪರ್ 6 ಸರಣಿಯನ್ನು ಗೆದ್ದರು. ಅವರು KF ವಿಭಾಗದಲ್ಲಿ WSK ಯುರೋ ಮತ್ತು ಮಾಸ್ಟರ್ ಕಾರ್ಟಿಂಗ್‌ನಲ್ಲಿ ಸ್ಪರ್ಧಿಸಿದರು.
2014ರಲ್ಲಿ BRDC ಫಾರ್ಮುಲಾ 4 ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನಿಯಾಗಿ ಜಯ ಸಾಧಿಸಿದ್ರೆ, 2015ರಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಟೊಯೊಟಾ ರೇಸಿಂಗ್ ಸೀರೀಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಇದೇ ಸೀಸನ್‌ನಲ್ಲಿ ಮಾಕಾಯು ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ 10ನೇ ಸ್ಥಾನ ಪಡೆದು ಯಶಸ್ವಿಯಾಗಿ ಸೀಸನ್ ಮುಕ್ತಾಯಗೊಳಿಸಿದ್ರು.
2016 ರಲ್ಲಿ, ಮೈನಿ GP3 ಸರಣಿಯಲ್ಲಿ ಜೆಂಜರ್ ಮೋಟಾರ್‌ಸ್ಪೋರ್ಟ್‌ಗೆ ಸ್ಪರ್ಧಿಸಿದರು, ಅವರು ಮೊದಲ 4 ರೇಸ್‌ಗಳನ್ನು ಕಳೆದುಕೊಂಡಿದ್ದರೂ ಚಾಂಪಿಯನ್‌ಶಿಪ್‌ನಲ್ಲಿ 10 ನೇ ಸ್ಥಾನದಲ್ಲಿ ಋತುವನ್ನು ಪೂರ್ಣಗೊಳಿಸಿದರು

ಫಾರ್ಮುಲಾ 2 ರೇಸ್‌ನಲ್ಲೂ ಸ್ಪರ್ಧಿಸಿರುವ ಅರ್ಜುನ್ ಮೈನಿ
2017 ರ ಕೊನೆಯಲ್ಲಿ ಅವರು ಅಬುಧಾಬಿಯಲ್ಲಿ ಟ್ರಿಡೆಂಟ್ ಮತ್ತು ಫಾರ್ಮುಲಾ 2 ತಂಡಗಳೊಂದಿಗೆ ನಂತರದ ಋತುವಿನ ಪರೀಕ್ಷೆಯಲ್ಲಿ ಭಾಗವಹಿಸಿದರು.
2018 ರ ಎಫ್‌ಐಎ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಟ್ರೈಡೆಂಟ್ ರೇಸಿಂಗ್‌ಗೆ ಮೈನಿ ಸಹಿ ಹಾಕಿದರು, ಸಹವರ್ತಿ ಹಾಸ್ ಎಫ್1 ಟೀಮ್ ಡೆವಲಪ್‌ಮೆಂಟ್ ಡ್ರೈವರ್ ಸ್ಯಾಂಟಿನೋ ಫೆರುಸಿಯ ಪಾಲುದಾರರಾಗಿದ್ದಾರೆ. ಇದಾದ ಬಳಿಕ ಮೇ 2017 ರಲ್ಲಿ, ಹಾಸ್ F1 ತಂಡವು ಮೈನಿಯನ್ನು ಡೆವಲಪ್‌ಮೆಂಟ್ ಡ್ರೈವರ್ ಆಗಿ ಸಹಿ ಮಾಡಿದೆ ಎಂದು ಘೋಷಿಸಲಾಯಿತು. 2018 ರ ಉದ್ದಕ್ಕೂ ಇದೇ ರೇಸಿಂಗ್ ಡೆವಲಪ್‌ಮೆಂಟ್ ರೇಸರ್ ಆಗಿ ಕಾರ್ಯ ನಿರ್ವಹಿಸಿದ್ರು.

2021ರಲ್ಲಿ DTM ರೇಸರ್ ಆಗಿ ಅರ್ಜುನ್ ಎಂಟ್ರಿ, ಯಶಸ್ಸು
2021 ರಲ್ಲಿ ಮೈನಿ ಮರ್ಸಿಡಿಸ್-ಎಎಮ್‌ಜಿ ಟೀಮ್ ಗೆಟ್‌ಸ್ಪೀಡ್‌ಗಾಗಿ ಡ್ರೈವಿಂಗ್ ಡಾಯ್ಚ ಟೌರೆನ್‌ವ್ಯಾಗನ್ ಮಾಸ್ಟರ್ಸ್‌ಗೆ ಸೇರಿದರು. ಅವರು ನೊರಿಸ್ರಿಂಗ್‌ನಲ್ಲಿ ಸರಣಿಯಲ್ಲಿ ತಮ್ಮ ಮೊದಲ ಪೋಡಿಯಂ ಫಿನಿಶ್ ಪಡೆದರು. ಇದು ಸರಣಿಯ ಇತಿಹಾಸದಲ್ಲಿ ಭಾರತೀಯರ ಮೊದಲ ಪೋಡಿಯಂ ಫಿನಿಶ್ ಆಗಿದೆ. ಈ ಮೂಲಕ 2021ರ ಋತುವಿನಲ್ಲಿ ಡಿಟಿಎಂ ರೇಸ್‌ನಲ್ಲಿ ಪ್ರತಿನಿಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹೀಗೆ ಡಿಟಿಎಂ ರೇಸ್‌ಗೆ ಕಾಲಿಟ್ಟ ಮೇಲೆ ಹತ್ತಾರು ರೇಸ್‌ಗಳಲ್ಲಿ ಭಾಗವಹಿಸಿರುವ ಅರ್ಜುನ್ ಮೈನಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದು, ಒಂದಲ್ಲಾ ಒಂದು ದಿನ ಚಾಂಪಿಯನ್‌ಶಿಪ್ ಗೆಲ್ಲಬೇಕೆಂಬ ಮಹಾದಾಸೆ ಹೊಂದಿದ್ದಾರೆ. ಇವರು ಮತ್ತಷ್ಟು ರೇಸ್ ಗೆದ್ದು, ಚಾಂಪಿಯನ್ ಪಟ್ಟಕ್ಕೇರಲಿ ಎಂಬುದು 'ಮೈಖೇಲ್ ಕನ್ನಡ'ದ ಆಶಯ


Click it and Unblock the Notifications
