Neeraj Chopra: ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಜಾವೆಲಿನ್ ಟೂರ್ನಿ: ನೀರಜ್ ಮೇಲೆ ಎಲ್ಲರ ಕಣ್ಣು
ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ಕ್ರೀಡಾ ಪಟು ನೀರಜ್ ಚೋಪ್ರಾ. ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಸಾಧಕ. ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಬಂಗಾರದ ಸಾಧನೆಯನ್ನು ಮಾಡಿರುವ ಹೆಮ್ಮೆಯ ಭಾರತೀಯ. ಎರಡು ಒಲಿಪಿಂಕ್ಸ್ ಪದಕಗಳನ್ನು ಗೆದ್ದ ಕೆಲವೇ ಕೆಲವು ಭಾರತೀಯ ಅಥ್ಲೀಟ್‌ಗಳಲ್ಲಿ ನೀರಜ್‌ಗೆ ಅಗ್ರ ಸ್ಥಾನ. ಟೋಕೊಯೊ ಒಲಿಂಪಿಕ್ಸ್‌ನಲ್ಲಿ ಬಂಗಾರ, ಪ್ಯಾರಿಸ್‌ನಲ್ಲಿ ಬೆಳ್ಳಿ ಸಾಧನೆ ಮಾಡಿರುವ ನೀರಜ್ ಅವರಿಗೆ ಭಾರತದಲ್ಲಿ ಅಪಾರ ಅಭಿಮಾನಿಗಳ ಬಳಗವಿದೆ.
ನೀರಜ್ ಚೋಪ್ರಾ ಅವರ ಸ್ವಾಂತಂತ್ರ್ಯ ಭಾರತದ ಪರ ಡಬಲ್ ಒಲಿಂಪಿಕ್ಸ್ ಪದಕ ಗೆದ್ದ ನಾಲ್ಕನೇ ಅಥ್ಲೀಟ್. ಇವರಿಗೂ ಮೊದಲು ಸುಶೀಲ್ ಕುಮಾರ್, ಪಿವಿ ಸಿಂಧು, ಮನು ಭಾಕರ್ ಈ ಸಾಧನೆ ಮಾಡಿದ್ದರು. ನೀರಜ್ ಚೋಪ್ರಾ ಫಿಟ್ನೆಸ್ ಅಮೋಘ. ಜಾವೆಲಿನ ಕ್ರೀಡೆಯಲ್ಲಿ ದೇಶಕ್ಕೆ ಹೆಮ್ಮೆ ತಂದ ಅಥ್ಲೀಟ್ ನೀರಜ್. ಭಾರತದ ಹೆಮ್ಮೆಯ ಕುವರನ ಪ್ರದರ್ಶನವನ್ನು ಕಣ್ಣು ತುಂಬಿಕೊಳ್ಳಲು ಭಾರತೀಯ ಅಭಿಮಾನಿಗಳಿಗೆ ಈಗ ಸದಾವಕಾಶ. ಭಾರತ ಈ ವರ್ಷದ ಅಂತ್ಯದಲ್ಲಿ ಜಾವೇಲಿನ್ ಸ್ಪರ್ಧೆಯನ್ನು ಏರ್ಪಡಿಸಲಿದ್ದು, ಇದರಲ್ಲಿ ನೀರಜ್ ಭಾಗವಹಿಸಲಿದ್ದಾರೆ.

ಭಾರತದಲ್ಲಿ ಪ್ರದರ್ಶನ
ಇದೇ ವರ್ಷದ ಸೆಪ್ಟಂಬರ್‌ನಲ್ಲಿ ಭಾರತ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸುವ ಸಾಧ್ಯತೆ ಇರುವುದಾಗಿ ಭಾರತ ಅಥ್ಲೀಟಿಕ್ ಸಂಸ್ಥೆ ತಿಳಿಸಿದೆ. ಈ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಸಹ ಭಾಗವಹಿಸಲಿದ್ದಾರೆ. ಭಾರತ ಆತಿಥ್ಯ ವಹಿಸಲು ಇಷ್ಟ ಪಡುವ ಹಲವು ಕ್ರೀಡೆಗಳಲ್ಲಿ ಇದು ಒಂದಾಗಿದೆ. 2029 ರ ವಿಶ್ವ ಚಾಂಪಿಯನ್‌ಶಿಪ್ ಮತ್ತು 2027 ರಲ್ಲಿ ವಿಶ್ವ ರಿಲೇಸ್ ಪಂದ್ಯಾವಳಿಯನ್ನು ಆಯೋಜಿಸಲು ಭಾರತ ಆಸಕ್ತಿಯನ್ನು ಹೊಂದಿದೆ ಎಂದು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಮಾಜಿ ಅಧ್ಯಕ್ಷ ಆದಿಲ್ ಸುಮರಿವಾಲಾ ಖಚಿತಪಡಿಸಿದ್ದಾರೆ.
ಚಿನ್ನದ ಸಾಧಕ ನೀರಜ್
ಹಿಂದಿನ ವರ್ಷ ನವೆಂಬರ್‌ನಲ್ಲಿ ವಿಶ್ವ ಅಥ್ಲೆಟಿಕ್ಸ್ ಅಧ್ಯಕ್ಷ ಸೆಬಾಸ್ಟಿಯನ್ ಕೋ ಭಾರತ ಪ್ರವಾಸವನ್ನು ಕೈಗೊಂಡಿದ್ದರು. ಈ ವೇಳೆ 2028 ರ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಆಯೋಜನೆಗೆ ಸಹ ಎಎಫ್‌ಐ ಬೇಡಿಕೆಯನ್ನು ಇಟ್ಟಿದೆ.

ಸೆಪ್ಟಂಬರ್‌ನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಸೇರಿದಂತೆ ವಿಶ್ವದ ಸ್ಟಾರ್ ಅಥ್ಲಿಟ್‌ಗಳು ಭಾಗವಿಸುವ ಸಾಧ್ಯತೆ ಇದೆ. ಇದರಲ್ಲಿ ವಿಶ್ವದ ಅಗ್ರ 10 ಆಟಗಾರರು ಭಾಗವಹಿಸಲಿದ್ದಾರೆ. ಜೆಎಸ್‌ಡಬ್ಲ್ಯೂ, ವಿದೇಶಿ ಸಂಸ್ಥೆ ಮತ್ತು ಎಎಫ್‌ಐ ಜಂಟಿಯಾಗಿ ಈ ಪಂದ್ಯಾವಳಿಗೆ ತಯಾರಿ ನಡೆಸುತ್ತಿವೆ.
ಭಾರತದಲ್ಲಿ ಅಥ್ಲೀಟ್ ಕ್ರಿಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳನ್ನು ನಡೆಸುವಂತೆ ನೀರಜ್ ಚೋಪ್ರಾ ಬೇಡಿಕೆ ಇಟ್ಟಿದ್ದರು. ಬೇರೆ ದೇಶಗಳು ಸಹ ಅಥ್ಲೀಟ್ಸ್‌ಗಳಿಗೆ ಪ್ರೋತ್ಸಾಹ ನೀಡಲು ಇಂತಹ ದೊಡ್ಡ ಟೂರ್ನಿಗಳನ್ನು ಆಯೋಜಿಸುತ್ತವೆ. ನೀರಜ್ ಚೋಪ್ರಾ ಹಲವು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾಗವಹಿಸಿದ್ದರೂ ಸಹ ಅವರಿಗೆ ದೇಶದ ಅಭಿಮಾನಿಗಳ ಮುಂದೆ ಪ್ರದರ್ಶನ ನೀಡಲು ಆಗಿರಲಿಲ್ಲ. ಈಗ ಅಭಿಮಾನಿಗಳಿಗೂ ಸದಾವಕಾಶ ಕೂಡಿ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications