Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಥ್ಲೆಟಿಕ್ಸ್: ಜಾವೆಲಿನ್ ಥ್ರೋನಲ್ಲಿ ನೀರಜ್ ಗೆ ಅಂತಾರಾಷ್ಟ್ರೀಯ ಚಿನ್ನ

Neeraj Chopra wins javelin Gold at Sotteville Athletics Meet

ನವದೆಹಲಿ, ಜುಲೈ 18: ಫ್ರಾನ್ಸ್ ನಲ್ಲಿ ಮಂಗಳವಾರ ರಾತ್ರಿ ನಡೆದ ಮೀಟಿಂಗ್ ಇಂಟರ್ ನ್ಯಾಷನಲ್ ಡೆ ಸಾಟೆವಿಲ್ಲೆ-ಲೆಸ್-ರೂಯೆನ್ ಅಥ್ಲೆಟಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋನಲ್ಲಿ ಭಾರತದ ನೀರಜ್ ಚೋಪ್ರ ಚಿನ್ನ ಗೆದ್ದಿದಾರೆ. ಈ ಬಾರಿಯ ಕಾಮನ್ವೆಲ್ತ್‌ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಚೋಪ್ರಾ ಫ್ರಾನ್ಸ್ ಕ್ರೀಡಾಕೂಟದಲ್ಲೂ 85.17 ಮೀಟರ್ ಈಟಿ ಎಸೆದು ಚಿನ್ನ ಕೊರಳಿಗೇರಿಸಿಕೊಂಡರು.

ವಿಶ್ವ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತಪರ ಗಮನ ಸೆಳೆಯುತ್ತಿರುವ ದೇಶದ ಟಾಪ್ ಜಾವೆಲಿನ್ ಥ್ರೋವರ್ ನೀರಜ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ ಗೆದ್ದು ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

85.17 ಮೀಟರ್ ದೂರ ಜಾವೆಲಿನ್ ಎಸೆದು ಚೋಪ್ರ ಬಂಗಾರ ಗೆದ್ದರೆ, ಮೊಲ್ಡೊವಾದ ಅಡ್ರಿಯನ್ ಮಾರ್ಡೆರೆ 81.48 ಮೀಟರ್ ಸಾಧನೆಯೊಂದಿಗೆ ಬೆಳ್ಳಿ ಜಯಿಸಿದರು. 79.31 ಮೀಟರ್ ದೂರ ಈಟಿ ಎಸೆದ ಲಿಥುವೇನಿಯಾದ ಎಡಿಸ್ ಮ್ಯಾಟುಸೆವಿಶಿಯಸ್ ಪಾಲಿಗೆ ಕಂಚು ಒಲಿಯಿತು.

ಫ್ರೆಂಚ್ ಕ್ರೀಡಾಕೂಟದಲ್ಲಿ ನೀರಜ್ ತೋರಿದ ಸಾಧನೆ ಒಂದೇ ಎಸೆತದಲ್ಲಿ ಲಭಿಸಿದ್ದಲ್ಲ, ಬದಲಿಗೆ ಒಟ್ಟು ಆರು ಏರಿಳಿತಗಳ ಪ್ರಯತ್ನಗಳಲ್ಲಿ ಐದನೇ ಯತ್ನ ಚಿನ್ನ ತಂದಿತು. ಮೂರನೇ ಪ್ರಯತ್ನದಲ್ಲೇ ನೀರಜ್ 85.12 ಮೀಟರ್ ಸಾಧನೆಯೊಂದಿಗೆ ಚಿನ್ನ ಜಯಿಸಿದ್ದರು. ಆದರೆ ಐದನೇ ಪ್ರಯತ್ನದಲ್ಲಿ 5ಮಿಲಿ ಮೀಟರ್ ಸುಧಾರಣೆ ತೋರಿ ಪಾರಮ್ಯ ಮೆರೆದರು.

ಈ ಕೂಟದಲ್ಲಿ ಚೋಪ್ರ ಮೊದಲ ಯತ್ನದಲ್ಲಿ 75.55 ಮೀ., ಎರಡನೇ ಯತ್ನದಲ್ಲಿ 79.46 ಮೀ., ಮೂರನೇ ಬಾರಿಗೆ 85.12 ಮೀ., ನಾಲ್ಕನೇ ಯತ್ನದಲ್ಲಿ 81.27 ಮೀ., ಐದನೇ ಸಾರಿ 85.17, ಆರನೇ ಯತ್ನಕ್ಕೆ 82.11 ಮೀ. ಸಾಧನೆ ತೋರಿದ್ದರು.

Story first published: Wednesday, July 18, 2018, 12:46 [IST]
Other articles published on Jul 18, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+