ಚಿನ್ನದ ಸಾಧಕ ಅರ್ಷದ್ ನದೀಮ್‌ಗೆ ಮಾವ ಎಮ್ಮೆ ನೀಡಿದ್ದು ಏಕೆ? ಉಳಿದವರು ನೀಡಿದ್ದೇನು?
ಪಾಕಿಸ್ತಾನಕ್ಕೆ ದಶಕಗಳ ಬಳಿಕ ಬಂಗಾರದ ಪದಕವನ್ನು ತೊಡಿಸಿದ ಜಾವೆಲಿನ್ ಅಥ್ಲೀಟ್ ಅರ್ಷದ್ ನದೀಮ್ ಅವರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ ನೀಡಲಾಗಿದೆ. ದೇಶಕ್ಕೆ ಕೀರ್ತಿ ತಂದ ಯುಗ ಪುರುಷನಿಗೆ ಭರ್ಜರಿ ಗಿಫ್ಟ್‌ಗಳನ್ನು ನೀಡಲಾಗುತ್ತಿದೆ. ಈ ವೇಳೆ ಬಂಗಾರ ಗೆದ್ದ ಅರ್ಷದ್‌ಗೆ ಮಾವ ವಿಶೇಷ ಉಡುಗೊರೆ ನೀಡಿದ್ದಾರೆ.
ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅರ್ಷದ್ ನದೀಮ್ ಇತಿಹಾಸ ನಿರ್ಮಿಸಿದ್ದಾರೆ. ಪುರುಷರ ಜಾವೆಲಿನ್ ವಿಭಾಗದಲ್ಲಿ ಅರ್ಷದ್ ನದೀಮ್ ಫೈನಲ್ ಸುತ್ತಿನಲ್ಲಿ 92.97 ಮೀಟರ್ ದೂರ ಎಸೆದು, ಒಲಿಂಪಿಕ್ಸ್ ಕೂಟ ದಾಖಲೆ ನಿರ್ಮಿಸಿದರು. ಇವರ ಸಾಧನೆಯ ಫಲವಾಗಿಯೇ ಈ ಒಲಿಂಪಿಕ್ಸ್‌ನಲ್ಲಿ ಪಾಕ್ ಪದಕ ಬೇಟೆ ಆರಂಭಿಸಿತು. ಒಲಿಂಪಿಕ್ಸ್ ಪದಕ ವಿಜೇತ ಕ್ರೀಡಾ ಪಟುವಿಗೆ ಭರ್ಜರಿ ಗಿಫ್ಟ್ ನೀಡಲಾಗುತ್ತಿದೆ.

ಚಿನ್ನದ ಸಾಧನೆಗೆ ಗೌರವ
ಅಪರೂಪದ ಸಾಧನೆ ಮಾಡಿದ ಅರ್ಷದ್ ನದೀಮ್ ತವರಿಗೆ ಮರಳುತ್ತಿದ್ದಂತೆ ಹೃದಯ ಸ್ಪರ್ಷಿ ಸ್ವಾಗತ ನೀಡಲಾಯಿತು. ಅಭಿಮಾನಿಗಳನ್ನು ಕಂಡು ಅರ್ಷದ್ ಸಹ ಪುಳುಕಿತರಾದರು. ಅರ್ಷದ್, ಕುಟುಂಬಸ್ಥರನ್ನು ಕಂಡು ಭಾವುಕರಾದರು. ಇದೇ ವೇಳೆ ಇವರ ಸಾಧನೆಗೆ ಪಾಕಿಸ್ತಾನದ ಅತ್ಯುನತ ನಾಗರಿಕ ಪ್ರಶಸ್ತಿಯಾದ ಹಿಲಾಲ್-ಇ-ಇಮ್ತಿಯಾಜ್ ಅನ್ನು ನೀಡಲಾಲು ತೀರ್ಮಾನಿಸಲಾಗಿದೆ.
ಭಾರೀ ಉಡುಗೊರೆ
ದಶಕಗಳ ಬಳಿಕ ಪಾಕಿಸ್ತಾನಕ್ಕೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ತೊಡಿಸಿದ ಸಾಧಕನಿಗೆ ಬಹುಮಾನಗಳು ಹರಿದು ಬರುತ್ತಿವೆ. ಇದಕ್ಕೂ ಮೊದಲು ವಿಶ್ವ ಅಥ್ಲೇಟಿಕ್ಸ್ ಸಂಸ್ಥೆಯಿಂದ ಅರ್ಷದ್‌ಗೆ 50 ಸಾವಿರ ಡಾಲರ್ ಹಣವನ್ನು ನೀಡಲಾಗಿದೆ. ಇನ್ನು ಪಾಕ್‌ನ ಪಂಜಾಬ್ ಪ್ರಾಂತ್ಯದ ಸರ್ಕಾರವು ನದೀಮ್‌ಗೆ 10 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಘೋಷಿಸಿದೆ.
ಪಂಜಾಬ್ ಗವರ್ನರ್ ಸರ್ದಾರ್ ಸಲೀಂ ಹೈದರ್ ಖಾನ್ ಅವರಿಗೆ ಪ್ರತ್ಯೇಕವಾಗಿ 20 ಲಕ್ಷ ಪಾಕಿಸ್ತಾನಿ ರೂಪಾಯಿ ನೀಡಲು ಮುಂದಾಗಿದ್ದಾರೆ. ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಮತ್ತು ಕರಾಚಿಯ ಮೇಯರ್ ಒಟ್ಟಾಗಿ ಅವರಿಗೆ 5 ಕೋಟಿ ಪಾಕಿಸ್ತಾನಿ ರೂಪಾಯಿಗಳನ್ನು ಘೋಷಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಸಂಗೀತಗಾರ ಅಲಿ ಜಾಫರ್ ಕೂಡ ನದೀಮ್‌ಗೆ 10 ಲಕ್ಷ ರೂ. ನೀಡುವುದಾಗಿ ತಿಳಿಸಿದ್ದಾರೆ.

ಮಾವನಿಂದ ಎಮ್ಮೆ ಉಡುಗೊರೆ
ಅರ್ಷದ್ ಅವರ ಮಾವ ಮೊಹಮ್ಮದ್ ನವಾಜ್ ಅವರಿಗೆ ಎಮ್ಮೆ ಉಡುಗೊರೆಯಾಗಿ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಎಮ್ಮೆಯನ್ನು ಅಮೂಲ್ಯ ಎಂದು ಭಾವಿಸಲಾಗುತ್ತದೆ. ಹಳಿಗಳಲ್ಲಿ ಎಮ್ಮೆ ನೀಡುವ ಮೂಲಕ ಗೌರವ ಸೂಚಿಸುವುದಾಗಿದೆ. ಅರ್ಷದ್ ಅವರಿಗೆ ಆಯೇಷಾ ಎಂಬ ಎನ್ನುವ ಪತ್ನಿಇದ್ದು, ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ.
ಪಾಕ್ ಕೊನೆಯ ಪದಕ ಗೆದ್ದಿದ್ದು ಯಾವಾಗ?
ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪಾಕಿಸ್ತಾನದ ಸಾಧನೆ ಸಾಧಾರಣವಾಗಿದೆ. ಒಟ್ಟಾರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಅರ್ಷದ್ ನದೀಮ್ ಪಾಕ್ ಪರ 11ನೇ ಪದಕವನ್ನು ಗೆದ್ದಿದ್ದಾರೆ. ಇದಕ್ಕೂ ಮೊದಲು 1988, 1992ರ ಒಲಿಂಪಿಕ್ಸ್‌ನಲ್ಲಿ ಪಾಕ್ ಅಥ್ಲೀಟ್‌ಗಳು ಕಂಚಿನ ಸಾಧನೆ ಮಾಡಿದ್ದರು. ಇದಕ್ಕೂ ಮೊದಲು ಪಾಕ್ ಪರ ಹಾಕಿಯಲ್ಲಿ ಬಂಗಾರ ಲಭಿಸಿತ್ತು. ಟ್ರ್ಯಾಕ್ ಆಂಡ್ ಫೀಲ್ಡ್ ಸೇರಿದಂತೆ ವೈಯಕ್ತಿಕವ ಕ್ರೀಡಾ ಕೂಟದಲ್ಲಿ ಯಾರು ಬಂಗಾರದ ಸಾಧನೆ ಮಾಡಿರಲಿಲ್ಲ. ಈ ಪದಕದ ಬರವನ್ನು ಅರ್ಷದ್ ನದೀಮ್ ಕೊನೆ ಗೊಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನ ಒಂದೇ ಪದಕವನ್ನು ಗೆದ್ದಿದೆ. ಅರ್ಷದ್ ನದೀಮ್ ಬಂಗಾರದ ಸಾಧನೆ ಮಾಡಿದ್ದರಿಂದ ಪಾಕ್ ಪದಕ ಪಟ್ಟಿಯಲ್ಲಿ 62ನೇ ಸ್ಥಾನದಲ್ಲಿದೆ. ಭಾರತ ಈ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಬಂಗಾರದ ಪದಕ ಗೆಲ್ಲದೇ ಇರುವುದರಿಂದ 6 ಪದಕಗಳನ್ನು ಪಡೆದರೂ ಪದಕ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications