ರೊನಾಲ್ಡೊ ಹೊಸ ಕೇಶ ವಿನ್ಯಾಸದ ಗುಟ್ಟು ರಟ್ಟು
ಮನೌಸ್ (ಬ್ರೆಜಿಲ್), ಜೂ.23: ಫೀಫಾ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೋ ಕಣಕ್ಕಿಳಿದಿದ್ದು ಕಂಡು ಅಭಿಮಾನಿಗಳು ಸಕತ್ ಥ್ರಿಲ್ ಆಗಿದ್ದರು. ಆದರೆ, ರೊನಾಲ್ಡೊ ಹೇರ್ ಸ್ಟೈಲ್ ಬಗ್ಗೆ ಯಾಕೋ ಅನೇಕ ಅಭಿಮಾನಿಗಳು ಟ್ವೀಟ್ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ರೊನಾಲ್ಡೊ ಕೇಶ ವಿನ್ಯಾಸದ ಕಥೆ ಇಲ್ಲಿದೆ ಓದಿ...
ಇಂಗ್ಲೆಂಡಿನ ಡೇವಿಡ್ ಬೆಕಮ್ ನಂತರ ಫುಟ್ಬಾಲ್ ಜಗತ್ತಿನ ಫ್ಯಾಷನ್ ಐಕಾನ್ ಆಗಿ ಬೆಳೆದಿರುವ ಕ್ರಿಶ್ಚಿಯಾನೋ ರೊನಾಲ್ಡೊ ಈ ರೀತಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದೇಕೆ? ಎಂದು ಅಭಿಮಾನಿಗಳಿಗೂ ತಕ್ಷಣಕ್ಕೆ ತಿಳಿಯಲಿಲ್ಲ. ಹಲವರಂತೂ ಥೂ ಇದೇನು ಹೇರ್ ಸ್ಟೈಲ್ ಎಂದು ಗೊಣಗಾಡಿದರು. ಆದರೆ, ರೊನಾಲ್ಡೊ ಈ ರೀತಿ ಕೇಶ ವಿನ್ಯಾಸ ಮಾಡಿಕೊಂಡಿದ್ದರ ಹಿಂದೆ ಸದುದ್ದೇಶವಿದೆ. ಒಂದು ಜೀವದ ಮಿಡಿತವಿದೆ. ಅಭಿಮಾನಿಯ ತುಡಿತವಿದೆ.[ಸೋಲಿನ ದವಡೆಯಿಂದ ಪಾರಾದ ರೊನಾಲ್ಡೊ ಪಡೆ]
ಪ್ರಖ್ಯಾತ ಫ್ಯಾಶನ್ ಡಿಸೈನರ್ ಗಳು ರೊನಾಲ್ಡೊ ಹೇರ್ ಸ್ಟೈಲ್ ನೋಡಿ ತಲೆಕೆಡಿಸಿಕೊಂಡಿದ್ದರು ಎನ್ನಲಾಗಿದೆ. ಅದರೆ, ರೊನಾಲ್ಡೊ ಈ ರೀತಿ ಕೇಶ ವಿನ್ಯಾಸ ಮಾಡಿಸಿಕೊಳ್ಳಲು ಕಾರಣ ಬಾಲಕನೊಬ್ಬನ ಮೆದುಳಿನ ಸರ್ಜರಿ ಎಂದು ತಿಳಿದು ಬಂದಿದೆ. ಯಾರು ಆ ಬಾಲಕ. ರೊನಾಲ್ಡೊ ವಿರುದ್ಧ ಅಭಿಮಾನಿಗಳು ಏನೆಂದು ಟ್ವೀಟಿಸಿದರು ಮುಂದೆ ಓದಿ....[ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

ಮೆದುಳಿನ ಸರ್ಜರಿಗೊಳದ ಅಭಿಮಾನಿಗಾಗಿ
ಸ್ಪೇನಿನ ಎರಿಕ್ ಒರ್ಟಿಜ್ ಕ್ರೂಜ್ ಎಂಬ ಪುಟ್ಟ ಅಭಿಮಾನಿ ಮೆದುಳಿನ ಸರ್ಜರಿಗೊಳಗಾಗಿದ್ದು ಆತನಿಗಾಗಿ ರಿಯಲ್ ಮ್ಯಾಡ್ರಿಡ್ ಪರ ಆಡುವ ಕ್ರಿಶ್ಚಿಯಾನೋ ರೊನಾಲ್ಡೋ ಈ ರೀತಿ ಕೇಶ ವಿನ್ಯಾಸ ಮಾಡಿಕೊಂಡಿದ್ದಾರೆ ಎಂದು ಟ್ವಿಟ್ಟರ್ ನಿಂದಲೇ ತಿಳಿದು ಬಂದಿದೆ.
ರೊನಾಲ್ಡೊಗೆ ರೆಡ್ ಕಾರ್ಡ್ ಕೊಡಿ
ಕೆಟ್ಟ ಹೇರ್ ಸ್ಟೈಲ್ ಹೊಂದಿರುವ ರೊನಾಲ್ಡೊಗೆ ರೆಡ್ ಕಾರ್ಡ್ ಕೊಡಿ ಎಂದು ಟೀಕಿಸಿದರು.

ಧನ ಸಹಾಯ ಮಾಡಿದ್ದ ರೊನಾಲ್ಡೊ
ಮೆದಳಿನ ಸರ್ಜರಿಗೆ ಒಳಪಟ್ಟ ಬಾಲಕನಿಗೆ ಸುಮಾರು 50,000 ಯುರೋಗಳನ್ನು ರೊನಾಲ್ಡೊ ನೀಡಿದ್ದರು. ಅದರೆ, ಈ ಹೇರ್ ಸ್ಟೈಲ್ ಅದೇ ಬಾಲಕನಿಗಾಗಿಯೇ ಎಂಬುದು ಖಚಿತವಾಗಿಲ್ಲ. ಯುರೋ ಸ್ಪೋರ್ಟ್ಸ್ ಪ್ರಕಾರ ಬಾಲಕನಿಗೆ ಇತ್ತೀಚೆಗೆ ಸರ್ಜರಿಯಾಗಿದೆ.
ಕೇಶ ವಿನ್ಯಾಸದ ಬಗ್ಗೆ ಅಭಿಮಾನಿಗಳಿಂದ ಟ್ವೀಟ್
ಕೇಶ ವಿನ್ಯಾಸದ ಬಗ್ಗೆ ಅಭಿಮಾನಿಗಳಿಂದ ಟ್ವೀಟ್
ಹೊಸ ಕೇಶ ವಿನ್ಯಾಸ ಚೆನ್ನಾಗಿಲ್ಲ
ರೊನಾಲ್ಡೊ ಹೊಸ ಕೇಶ ವಿನ್ಯಾಸ ಚೆನ್ನಾಗಿಲ್ಲ, ಇದು ಕೆಟ್ಟ ಶಕುನ
ನಿನ್ನೆ ರಾತ್ರಿ ಏನ್ಮಾಡ್ತಿದ್ದ ರೊನಾಲ್ಡೊ
ನಿನ್ನೆ ರಾತ್ರಿ ಏನ್ಮಾಡ್ತಿದ್ದ ರೊನಾಲ್ಡೊ ಎಂದು ಟ್ವೀಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications