Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೈವೋರ್ಸ್ ಬಳಿಕ ಮೊಹಮ್ಮದ್ ಶಮಿ ಮದುವೆಯಾದ್ರಾ ಸಾನಿಯಾ ಮಿರ್ಜಾ?

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಇತ್ತೀಚಿಗೆ ತಮ್ಮ ಮಾಜಿ ಪತಿ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರಿಂದ ವಿಚ್ಛೇದನದ ಬಗ್ಗೆ ಘೋಷಿಸಿದ್ದರು.

ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು ಪಾಕಿಸ್ತಾನ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹದ ಬಳಿಕ, ಭಾರತೀಯ ಟೆನ್ನಿಸ್ ತಾರೆಯೊಂದಿಗಿನ 14 ವರ್ಷಗಳ ದಾಂಪತ್ಯವು ಕೊನೆಗೊಂಡಿತು.

ಸಾನಿಯಾ ಮಿರ್ಜಾ ವಿಚ್ಛೇದನವು ರಾಷ್ಟ್ರೀಯ ಮುಖ್ಯ ಸುದ್ದಿಯಾಗುತ್ತಿದ್ದಂತೆ, ಇದೀಗ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ವಿಹಾಹವಾಗಿದ್ದಾರೆ ಎಂಬ ಊಹಾಪೋಹಗಳು ಪ್ರಾರಂಭವಾಗಿವೆ. ಇತ್ತೀಚೆಗಿನ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋದೊಂದಿಗೆ ವದಂತಿ ಹರಿದಾಡುತ್ತಿದ್ದು, ಸಾನಿಯಾ ಮಿರ್ಜಾ ಕ್ರಿಕೆಟಿಗನನ್ನು ಮದುವೆಯಾಗಿದ್ದಾಳೆ ಎಂದು ವೈರಲ್ ಆಗುತ್ತಿದೆ.

Sania Mirzas Marriage with Mohammed Shami Fake Photos Goes Viral after Divorce to Shoaib Malik


ಹೌದು. ಸಾಮಾಜಿಕ ಮಾಧ್ಯಮದಲ್ಲಿ ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿ ಮದುವೆಯ ಪೋಟೋ ಒಂದು ವೈರಲ್ ಆಗಿದ್ದು, ಇಬ್ಬರ ಅಭಿಮಾನಿಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

ಮೊಹಮದ್ ಶಮಿ ಕೈ ಹಿಡಿದ್ರಾ ಸಾನಿಯಾ ಮಿರ್ಜಾ?

ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಾಹದ ವದಂತಿ ಹಬ್ಬಿತು. "ಸಾನಿಯಾ ಮಿರ್ಜಾ ಅವರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರೊಂದಿಗಿನ ವಿವಾಹ ಘೋಷಿಸಿದ್ದಾರೆ. ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್‌ಗೆ ಮುನ್ನ ಮದುವೆಯಾಗಲಿದ್ದಾರೆ. ಮೊಹಮ್ಮದ್ ಶಮಿ ಅವರ ಕೂದಲು ಕಸಿ ಮಾಡಿಸಿದ ನಂತರ, ಲಿಯೊನಾರ್ಡೊ ಡಿಕಾಪ್ರಿಯೊ ಅವರಂತೆ ಕಾಣುತ್ತಾರೆ ಎಂದು ಸಾನಿಯಾ ಹೇಳಿದ್ದಾರೆ,'' ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಕೆಲವರು ಈಗಾಗಲೇ ಈ ಜೋಡಿ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಇಬ್ಬರು ತಮ್ಮ ಹಿಂದಿನ ಸಂಬಂಧದಲ್ಲಿ ಸಂತೋಷವಾಗಿರಲಿಲ್ಲ. ಹೀಗಾಗಿ ಇದು ಉತ್ತಮ ಜೋಡಿಯಾಗಲಿದೆ ಎಂದು ಹಲವು ನೆಟ್ಟಿಗರು ತಿಳಿಸಿದ್ದಾರೆ.

"ಸಾನಿಯಾ ಮಿರ್ಜಾ ಒಪ್ಪಿದರೆ, ಅವರು ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿಯನ್ನು ಎರಡನೇ ಮದುವೆಯಾಗುವ ಮೂಲಕ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್‌ಗೆ ತಕ್ಕ ಪ್ರತ್ಯುತ್ತರ ನೀಡಬಹುದು. ಇದರ ಬಗ್ಗೆ ನೀವು ಏನು ಹೇಳುತ್ತೀರಿ? ಕಾಮೆಂಟ್ ಮಾಡುವ ಮೂಲಕ ಹೇಳಿ," ಎಂದು ಒಬ್ಬ ಸಾಮಾಜಿಕ ಜಾಲತಾಣ ಬಳಕೆದಾರರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.

"ಸಾನಿಯಾ ಮಿರ್ಜಾ ಭಾರತೀಯ ಟೆನ್ನಿಸ್ ಆಟಗಾರ್ತಿ ಮತ್ತು ನಮ್ಮದೇ ಭಾರತೀಯ ಕ್ರಿಕೆಟ್ ಆಟಗಾರ ಮೊಹಮ್ಮದ್ ಶಮಿಯೊಂದಿಗೆ ಖಂಡಿತವಾಗಿಯೂ ಮದುವೆಯಾಗಬೇಕು ಎಂದು ನಾನು ಆಶಿಸುತ್ತೇನೆ. ಆಕೆಗೆ ಮೊಹಮ್ಮದ್ ಶಮಿಗಿಂತ ಉತ್ತಮ ಜೀವನ ಸಂಗಾತಿ ಸಿಗುವುದಿಲ್ಲ. ಮೊಹಮ್ಮದ್ ಶಮಿ ತುಂಬಾ ಉದಾತ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಮತ್ತು ಪರಿಶುದ್ಧ ಹೃದಯವನ್ನು ಹೊಂದಿದ್ದಾರೆ. ನಾವೆಲ್ಲರೂ ಭಾರತೀಯರು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ," ಎಂದು ಮತ್ತೊಬ್ಬರು ಹೇಳಿದ್ದಾರೆ.

ಇನ್ನು ಸಾನಿಯಾ ಮಿರ್ಜಾ ಆಗಲಿ, ಮೊಹಮ್ಮದ್ ಶಮಿಯಾಗಲಿ ಈ ವದಂತಿಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ, ವೈರಲ್ ಫೋಟೋಗೆ ಸಂಬಂಧಿಸಿದಂತೆ, ಈ ಚಿತ್ರವನ್ನು ದುಷ್ಕರ್ಮಿಗಳು ತಪ್ಪು ಮಾಹಿತಿ ಹರಡಲು ಫೇಕ್ ಮಾಡಿದ್ದಾರೆ.

ನಿಜ ಹೇಳಬೇಕೆಂದರೆ, ಸಾನಿಯಾ ಮಿರ್ಜಾ ಅವರು ಶೋಯೆಬ್ ಮಲಿಕ್ ಅವರೊಂದಿಗಿನ ಮದುವೆಯ ಫೋಟೋ ಆಗಿದೆ. ಮತ್ತೊಂದು ಫೋಟೋ ಹಸೀನ್ ಜಹಾನ್ ಜೊತೆಗಿನ ಮಹಮದ್ ಶಮಿ ಅವರ ಮೊದಲ ಮದುವೆಯ ಫೋಟೋವನ್ನು ಕೂಡಿಸಿ ಫೇಕ್ ಫೋಟೋ ಮಾಡಿದ್ದಾರೆ.

ಎರಡು ಫೋಟೋಗಳನ್ನು ಕೋಲಾಜ್ ಮಾಡಿ ಇಬ್ಬರು ಮದುವೆಯಾಗಿದ್ದಾರೆ ಮತ್ತು ಇಬ್ಬರು ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಸಾನಿಯಾ ಮಿರ್ಜಾ ತಮ್ಮ ಮಾಜಿ ಪತಿ ಶೋಯೆಬ್ ಮಲಿಕ್ ಮದುವೆ ಬಳಿಕ ತಾವು ಬೇರೆಯಾಗಿ ಈಗಾಗಲೇ ಕೆಲವು ತಿಂಗಳುಗಳು ಕಳೆದಿವೆ ಎಂದು ಸ್ಪಷ್ಟನೆ ನೀಡಿದ್ದರು.

Story first published: Thursday, February 1, 2024, 11:15 [IST]
Other articles published on Feb 1, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+