For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ ಕ್ವಾಲಿಫೈಯರ್: ಫೈನಲ್‌ಗೆ ಪ್ರವೇಶಿಸಿದ ಶರತ್-ಮಣಿಕಾ

Sharath Kamal-Manika Batra enter final of Olympics qualifier event

ದೋಹಾ: ಕತಾರ್‌ನ ದೋಹಾದಲ್ಲಿ ಶುಕ್ರವಾರ (ಮಾರ್ಚ್ 19) ನಡೆದ ಒಲಿಂಪಿಕ್ಸ್ ಕ್ವಾಲಿಫೈಯರ್ ಟೇಬಲ್ ಟೆನಿಸ್ ಟೂರ್ನಿಯ ಮಿಕ್ಸ್ಡ್ ಡಬಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರರಾದ ಅಚಂತ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಮಣಿಕಾ ಬಾತ್ರ ಮತ್ತು ಶರತ್ ಕಮಲ್ ಜೋಡಿ ಸಿಂಗಾಪುರ್‌ನ ಜೋಡಿ ಕೊಯೆನ್ ಪಾಂಗ್ ಯೂ ಎನ್ ಮತ್ತು ಲಿನ್ ಯೆ ಅನ್ನು 4-2ರ ಅಂತರದಿಂದ ಸೋಲಿಸಿತು. ಈ ಗೆಲುವಲ್ಲದೆ ಮಣಿಕಾ ಮತ್ತು ಶರತ್ ಇಬ್ಬರೂ ಕೂಡ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಟೇಬಲ್ ಟೆನಿಸ್ ಮಿಕ್ಸ್ಡ್‌ ಡಬಲ್ಸ್‌ ವಿಶ್ವ ನಂ.19 ಜೋಡಿಯಾದ ಮಣಿಕಾ-ಶರತ್ ಫೈನಲ್ ಪಂದ್ಯದಲ್ಲಿ ವಿಶ್ವ ನಂ.8 ಕೊರಿಯನ್ ಜೋಡಿಯಾದ ಸಾಂಗ್-ಸು ಲೀ ಮತ್ತು ಜಿಹೀ ಜೀನ್ ವಿರುದ್ಧ ಶನಿವಾರ (ಮಾರ್ಚ್ 20) ಸ್ಪರ್ಧಿಸಲಿದೆ. 2018ರ ಏಷ್ಯನ್ ಗೇಮ್ಸ್‌ನಲ್ಲಿ ಮಣಿಕಾ-ಶರತ್ ಜೋಡಿ ಕಂಚಿನ ಪದಕ ಗೆದ್ದಿತ್ತು.

ಭಾರತೀಯ ಟೇಬಲ್ ಟೆನಿಸ್ ಆಟಗಾರರಾದ ಸತಿಯನ್ ಜ್ಞಾನಶೇಖರನ್ ಮತ್ತು ಸುತೀರ್ಥಾ ಮುಖರ್ಜೀ ಕೂಡ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಜುಲೈ 23ರಿಂದ ಆಗಸ್ಟ್ 8ರ ವರೆಗೆ ನಡೆಯಲಿದೆ.

Story first published: Saturday, March 20, 2021, 16:23 [IST]
Other articles published on Mar 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+