Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊರೊನಾ ವೈರಸ್ ಭೀತಿ, ಟೋಕಿಯೋ ಒಲಿಂಪಿಕ್ಸ್‌ 2020 ರದ್ದು ಸಾಧ್ಯತೆ

Tokyo Olympics 2020 could be cancelled if coronavirus not contained by late May
Olympics 2020 might be cancelled ,no thanks to Corona virus | Olympics 2020 tokyo

ಟೋಕಿಯೋ, ಫೆಬ್ರವರಿ 26: ಮಾರಕ ಸೋಂಕು ಕೊರೊನಾ ವೈರಸ್ ಹತೋಟಿಗೆ ಬಾರದೆ ಹೋದರೆ 2020ರ ಟೋಕಿಯೋ ಒಲಿಂಪಿಕ್ಸ್ ರದ್ದಾಗುವ ಸಾಧ್ಯತೆಯಿದೆ ಎಂದು ಇಂಟರ್ ನ್ಯಾಷನಲ್ ಒಲಿಂಪಿಕ್ಸ್ ಕಮಿಟಿಯ (ಐಒಸಿ) ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಕ್ರೀಡಾಕೂಟವನ್ನು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಮುಂದೂಡುವುದಕ್ಕಿಂತ ರದ್ದುಪಡಿಸುವ ಸಾಧ್ಯತೆಯೇ ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ.

1978ರಿಂದಲೂ ಐಒಸಿಯಲ್ಲಿರುವ, ಸ್ವಿಮ್ಮಿಂಗ್ ಚಾಂಪಿಯನ್ ಕೂಡ ಆಗಿರುವ ಕೆನಡಾದ ಡಿಕ್ ಪೌಂಡ್ ಈ ಬಗ್ಗೆ ಮಾತನಾಡಿ, ಟೋಕಿಯೋ ಒಲಿಂಪಿಕ್ಸ್ ನಡೆಯುತ್ತೋ ಇಲ್ಲವೋ ಅನ್ನೋದು 3 ತಿಂಗಳಲ್ಲಿ ನಿರ್ಧಾರವಾಗಲಿದೆ. ಅಂದರೆ ಮೇ ತಿಂಗಳವರೆಗೂ ಕಾದು ನೋಡಬೇಕಾಗುತ್ತದೆ ಎಂದಿದ್ದಾರೆ.

'ಕ್ರೀಡಾಕೂಟದ ದಿನಾಂಕ ಹತ್ತಿರವಾಗುತ್ತಿರುವುದರಿಂದ ಅನೇಕ ಕೆಲಸಗಳು ಆರಂಭವಾಗಬೇಕಿದೆ. ಭದ್ರತೆ, ಆಹಾರ, ಒಲಿಂಪಿಕ್ ವಿಲ್ಲೇಜ್, ಹೋಟೆಲ್‌ ವ್ಯವಸ್ಥೆಗಳಿಗೆಲ್ಲ ಸಿದ್ಧತೆ ನಡೆಯಬೇಕಿದೆ. ಆದರೆ ಕ್ರೀಡಾ ಕೂಟ ನಡೆಯುವ ಬಗ್ಗೆ ಅಂತಿಮ ನಿರ್ಧಾರಕ್ಕೆ ಇನ್ನೂ ಕೊಂಚ ಕಾಲ ಕಾಯಬೇಕಿದೆ,' ಎಂದು ಡಿಕ್ ಮಾಹಿತಿ ನೀಡಿದ್ದಾರೆ.

ಚೀನಾದಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಈಗಾಗಲೇ ಸುಮಾರು 80,000 ಜನ ಒಳಗಾಗಿದ್ದಾರೆ. ಸುಮಾರು 2,700 ಸಾವಿಗೀಡಾಗಿದ್ದಾರೆ. ಒಲಿಂಪಿಕ್ಸ್ ನಡೆಯಲಿರುವ ಜಪಾನ್‌ನಲ್ಲೂ 4 ಮಂದಿ ಸಾವನ್ನಪ್ಪಿದ್ದಾರೆ. ಟೋಕಿಯೋ ಒಲಿಂಪಿಕ್ಸ್ 2020ರ ಜುಲೈ 24ರಿಂದ ಆಗಸ್ಟ್ 9ರ ವರೆಗೆ ನಡೆಸಲು ನಿರ್ಧಾರವಾಗಿತ್ತು.

Story first published: Wednesday, February 26, 2020, 12:33 [IST]
Other articles published on Feb 26, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+