Tokyo Olympics 2020: ಭಾರತೀಯ ಥೀಮ್ ಸಾಂಗ್ ಬಿಡುಗಡೆ

ನವದೆಹಲಿ: ಜುಲೈ 23ರಿಂದ ಆಗಸ್ಟ್ 8ರ ವರೆಗೆ ಟೋಕಿಯೋ ಒಲಿಂಪಿಕ್ಸ್ 2020ರ ಕ್ರೀಡಾಕೂಟ ನಡೆಯಲಿದೆ. ಜಪಾನ್ ಟೋಕಿಯೋದಲ್ಲಿ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಭಾರತೀಯ ಅಧಿಕೃತ ಥೀಮ್ ಸಾಂಗ್ ಬಿಡುಗಡೆಯಾಗಿದೆ. ಜೂನ್ 24ರ ಗುರುವಾರ ಥೀಮ್ ಸಾಂಗ್ ಬಿಡುಗಡೆಯಾಗಿದ್ದು, ಬಾಲಿವುಡ್ ಹಿನ್ನೆಲೆ ಗಾಯಕ ಮೋಹಿತ್ ವೌಹಾಣ್ ಈ ಗೀತೆ ರಚಿಸಿ ಹಾಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಒಂದು ತಿಂಗಳು ಬಾಕಿಯಿದ್ದು, ಭಾರತೀಯ ತಂಡ ಕ್ರೀಡಾಕೂಟಕ್ಕೆ ತೆರಳಲು ಸಜ್ಜಾಗಿದೆ. ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್ (ಐಒಎ) ಅಧಿಕೃತ ಗೀತೆ ಬಿಡುಗಡೆ ಮಾಡಿದೆ. 'ತೂ ತಾನ್ ಲೆ' ಹೆಸರಿನ ಈ ಥೀಮ್ ಸಾಂಗ್ ಸೊಗಸಾಗಿದೆ.
ನವದೆಹಲಿಯ ಜವಾಹರ ಲಾಲ್ ನೆಹರೂ ಸ್ಟೇಡಿಯಂನಲ್ಲಿ ಈ ಥೀಮ್ ಸಾಂಗ್ ಕಾರ್ಯಕ್ರಮದ ಮೂಲಕ ಬಿಡುಗಡೆಯಾಗಿದೆ. ಭಾರತೀಯ ಒಲಿಂಪಿಕ್ಸ್ ಗೀತೆ ಬಿಡುಗಡೆಯಾಗಿದೆ ಎಂದು 'ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ' ಟ್ವೀಟ್ ಮೂಲಕ ತಿಳಿಸಿದೆ.
ಅಥ್ಲೀಟ್ ನೀರಜ್ ಚೋಪ್ರಾ, ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ, ಬಾಕ್ಸರ್ ಮೋರಿ ಕೋಮ್, ರಸ್ಲರ್ ಭಜರಂಗ್ ಪೂನಿಯಾ, ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಮೊದಲಾದವರು ಕಾಣಿಸಿಕೊಂಡಿರುವ ಥೀಮ್ ಸಾಂಗ್ ಸ್ಫೂರ್ತಿದಾಯಕವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications