For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್ 2021: ಜುಲೈ 25ಕ್ಕೆ ಭಾರತೀಯರ ಸ್ಪರ್ಧೆಗಳ ಪಟ್ಟಿ

Tokyo Olympics 2020: Team Indias schedule on July 25

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಬೇಟೆ ಶುರುವಾಗಿದೆ. ಜುಲೈ 24ರ ಶನಿವಾರ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯ್ ಚಾನು ಭಾರತಕ್ಕೆ ಬೆಳ್ಳಿಯ ಪದಕ ಗೆದ್ದಿದ್ದರು. ಇದು ಭಾರತಕ್ಕೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಲಭಿಸಿದ ಮೊದಲ ಪದಕ ಮತ್ತು ಒಲಿಂಪಿಕ್ಸ್‌ನಲ್ಲಿ ವೇಟ್‌ ಲಿಫ್ಟಿಂಗ್‌ನಲ್ಲಿ ದೇಶಕ್ಕೆ ಸಿಗುತ್ತಿರುವ ಎರಡನೇ ಪದಕ.

ವೇಟ್ ಲಿಫ್ಟಿಂಗ್‌ ಅಲ್ಲದೆ ಮಹಿಳಾ ಹಾಕಿ, ಬಾಕ್ಸಿಂಗ್, ಟೆನಿಸ್, ಬ್ಯಾಡ್ಮಿಂಟನ್ ಸೇರಿ ಒಂದಷ್ಟು ಸ್ಪರ್ಧೆಗಳು ಶನಿವಾರ ನಡೆದಿದ್ದವು. ಆದರೆ ಅದ್ಯಾವುದರಲ್ಲೂ ಪದಕ ಸಿಕ್ಕಿಲ್ಲ. ಕೆಲವು ಸ್ಪರ್ಧೆಗಳಲ್ಲಿ ದೇಶಿ ಸ್ಪರ್ಧಿಗಳು ದ್ವಿತೀಯ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಜುಲೈ 25ರಂದು ಭಾರತೀಯರ ವೇಳಾಪಟ್ಟಿ ಕೆಳಗಿದೆ. ಸೋನಿ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಸ್ಪರ್ಧೆಯ ನೇರ ಪ್ರಸಾರ ಸಿಗಲಿದೆ.

ಜುಲೈ 25ರ ಭಾನುವಾರ ಭಾರತದ ವೇಳಾಪಟ್ಟಿ ಇಲ್ಲಿದೆ
* 5:30 AM - ಶೂಟಿಂಗ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್ ಕ್ವಾಲಿಫೈಯರ್ - ಮನು ಭಾಕರ್, ಯಶಸ್ವಿನಿ ದೇಸ್ವಾಲ್
* 6:30 AM - ಜಿಮ್ನಾಸ್ಟಿಕ್ಸ್ - ಮಹಿಳೆಯರ ಕ್ವಾಲಿಫೈಯರ್ - ಪ್ರಣತಿ ನಾಯಕ್
* 6:30 AM - ರೋಯಿಂಗ್ - ಪುರುಷರ ಲೈಟ್ವೇಟ್ ಡಬಲ್ ಸ್ಕಲ್ಸ್ ರಿಪೇಜ್ - ಅರ್ಜುನ್ ಲಾಲ್ ಮತ್ತು ಅರವಿಂದ್ ಸಿಂಗ್
* 6:30 AM - ಶೂಟಿಂಗ್ - ಪುರುಷರ ಸ್ಕೀಟ್ ಕ್ವಾಲಿಫೈಯರ್ - ಅಂಗದ್ ಬಜ್ವಾ, ಮೈರಾಜ್ ಅಹ್ಮದ್ ಖಾನ್
* 7:10 AM - ಬ್ಯಾಡ್ಮಿಂಟನ್ - ಮಹಿಳಾ ಸಿಂಗಲ್ಸ್ - ಪಿ. ವಿ. ಸಿಂಧು vs ಕ್ಸೆನಿಯಾ ಪೋಲಿಕಾರ್ಪೋವಾ (ಇಸ್ರೇಲ್)
* 7:45 AM - ಶೂಟಿಂಗ್ - ಮಹಿಳೆಯರ 10 ಮೀ ಏರ್ ಪಿಸ್ತೂಲ್ ಫೈನಲ್
* 8:35 AM - ನೌಕಾಯಾನ - ಮಹಿಳೆಯರ ಲೇಸರ್ ರೇಡಿಯಲ್ ಹೀಟ್ಸ್ - ನೇತ್ರಾ ಕುಮಾನನ್
* 9:30 AM - ಶೂಟಿಂಗ್ - ಪುರುಷರ 10 ಮೀ ಏರ್ ರೈಫಲ್ ಅರ್ಹತೆ - ದೀಪಕ್ ಕುಮಾರ್, ದಿವ್ಯಾನ್ಶ್ ಸಿಂಗ್ ಪನ್ವಾರ್
* 10:30 AM - ಟೇಬಲ್ ಟೆನಿಸ್ - ಪುರುಷರ ಸಿಂಗಲ್ಸ್ ಸುತ್ತಿನ 2 - ಜಿ. ಸತ್ಯನ್ ವಿರುದ್ಧ ಲ್ಯಾಮ್ ಸಿಯು ಹ್ಯಾಂಗ್ (ಹಾಂಗ್ ಕಾಂಗ್)
* 11:05 AM - ನೌಕಾಯಾನ - ಪುರುಷರ ಲೇಸರ್ ಹೀಟ್ಸ್ - ವಿಷ್ಣು ಸರವಣನ್
* 12:00 PM - ಶೂಟಿಂಗ್ - ಪುರುಷರ 10 ಮೀ ಏರ್ ರೈಫಲ್ ಫೈನಲ್
* 12:00 PM - ಟೇಬಲ್ ಟೆನಿಸ್ - ಮಹಿಳಾ ಸಿಂಗಲ್ಸ್ ಸುತ್ತಿನ 2 - ಮಾಣಿಕಾ ಬಾತ್ರಾ vs ಮಾರ್ಗರಿಟಾ ಪೆಸೊಟ್ಸ್ಕಾ (ಉಕ್ರೇನ್)
* 01:30 PM - ಬಾಕ್ಸಿಂಗ್ - ಮಹಿಳೆಯರ ಫ್ಲೈ ವೇಟ್ ಸುತ್ತಿನ 32 - ಎಂ. ಸಿ. ಮೇರಿ ಕೋಮ್ ಮತ್ತು ಮಿಗುಯೆಲಿನಾ ಹೆರ್ನಾಂಡೆಜ್ ಗಾರ್ಸಿಯಾ (ಡೊಮಿನಿಕನ್ ರಿಪಬ್ಲಿಕ್)
* 03.00 PM - ಹಾಕಿ - ಪುರುಷರ ವಿರುದ್ಧ ಆಸ್ಟ್ರೇಲಿಯಾ
* 03:06 PM - ಬಾಕ್ಸಿಂಗ್ - ಪುರುಷರ ಲೈಟ್‌ವೇಟ್ 32ರ ಸುತ್ತಿನಲ್ಲಿ - ಮನೀಶ್ ಕೌಶಿಕ್ ಮತ್ತು ಲ್ಯೂಕ್ ಮೆಕ್‌ಕಾರ್ಮಾಕ್ (ಗ್ರೇಟ್ ಬ್ರಿಟನ್)
* 03:32 PM - ಈಜು - ಮಹಿಳೆಯರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್ - ಮನಾ ಪಟೇಲ್
* 03:47 PM - ಈಜು - ಪುರುಷರ 200 ಮೀ ಫ್ರೀಸ್ಟೈಲ್ ಹೀಟ್ಸ್ - ಸಜನ್ ಪ್ರಕಾಶ್
* 04:21 PM - ಈಜು - ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್ಸ್ - ಶ್ರೀಹರಿ ನಟರಾಜ್.

Story first published: Sunday, July 25, 2021, 1:26 [IST]
Other articles published on Jul 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+