
ಟೋಕಿಯೋ: ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್ ಆಯೋಜನೆಗೆ ಕೋವಿಡ್-19 ಸಂಕಷ್ಟ ಎದುರಾಗಿದೆ. ಜಗತ್ತನ್ನು ಕೊರೊನಾ ವೈರಸ್ ದ್ವಿತೀಯ ಅಲೆ ಕಾಡುತ್ತಿರುವುದರಿಂದ ಈ ಬಾರಿಯೂ ಒಲಿಂಪಿಕ್ಸ್ ನಡೆಯುತ್ತಾ ಇಲ್ವಾ ಅನ್ನೋ ಅನುಮಾನ ಮೂಡಿದೆ.
2020ರಿಂದ ಮುಂದೂಡಲ್ಪಟ್ಟಿದ್ದ ಟೋಕಿಯೋ ಒಲಿಂಪಿಕ್ಸ್ ಈ ಬಾರಿ ನಡೆಯಿತ್ತಾ ಅಂತ ನೀವು ಕೇಳಿದರೆ ಇದಕ್ಕೆ ಉತ್ತರ ಭಾಗಶಃ ಹೌದು. ಮುಂದಿನ ತಿಂಗಳು ವಿಶ್ವಖ್ಯಾತಿಯ ಒಲಿಂಪಿಕ್ಸ್ ಟೋಕಿಯೋದಲ್ಲಿ ಆರಂಭವಾಗುವ ಎಲ್ಲಾ ನಿರೀಕ್ಷೆಗಳಿವೆ.
ವಿಶ್ವವನ್ನು ಮಾರಕ ಸೋಂಕು ಕಾಡುತ್ತಿದ್ದರೂ ಜಾಗತಿಕ ಕ್ರೀಡಾಕೂಟ ನಡೆಯಲಿದೆ ಎಂದು ಹೇಳುತ್ತಿರೋದು ಯಾಕಂದ್ರೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಉಪಾಧ್ಯಕ್ಷ ಜಾನ್ ಕೋಟ್ಸ್ ಒಂದು ವೇಳೆ ತುರ್ತು ಪರಿಸ್ಥಿಯ ಸಂದರ್ಭ ಇರಲಿ ಅಥವಾ ಇಲ್ಲದಿರಲಿ, ಟೂರ್ನಿ ನಡೆಸಿಯೇ ತೀರುತ್ತೇವೆ ಎಂದಿದ್ದಾರೆ.
ಜುಲೈ 23 ರಿಂದ ಆಗಸ್ಟ್ 8ರ ವರೆಗೆ ಜಪಾನ್‌ನ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯಲಿದೆ. ಈಗಾಗಲೇ ಆಸ್ಟ್ರೇಲಿಯಾದ ಸಾಫ್ಟ್ ಬಾಲ್ ತಂಡ ಜಪಾನ್ ತಲುಪಿದ್ದು, ಇದು ಜಾಗತಿಕ ಕ್ರೀಡಾಕೂಟಕ್ಕೆ ಆಗಮಿಸಿದ ಪ್ರಮುಖ ಮೊದಲ ವಿದೇಶಿ ತಂಡವಾಗಿ ಗುರುತಿಸಿಕೊಂಡಿದೆ.