Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯೂತ್ ಒಲಿಂಪಿಕ್ಸ್: ತ್ರಿವಿಧ ಜಿಗಿತದಲ್ಲಿ ಭಾರತಕ್ಕೆ ಕಂಚು ಗೆದ್ದ ಪ್ರವೀಣ್

Triple jumper Praveen Chitravel clinches bronze in Youth Olympics

ಬ್ಯೂನಸ್ ಏರ್ಸ್, ಅಕ್ಟೋಬರ್ 17: ಅರ್ಜೆಂಟೀನಾದ ಬ್ಯೂನಸ್ ಏರ್ಸ್ ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ ಗೇಮ್ಸ್ ನ ತ್ರಿವಿಧ ಜಿಗಿತದಲ್ಲಿ ಭಾರತದ ಪ್ರವೀಣ್ ಚಿತ್ರಾವೆಲ್ ಕಂಚಿನ ಪದಕ ಜಯಿಸಿದ್ದಾರೆ. ಟೂರ್ನಿಯಲ್ಲಿ ಅಥ್ಲೆಟಿಕ್ಸ್ ನಲ್ಲಿ ಭಾರತಕ್ಕೆ ಲಭಿಸುತ್ತಿರುವ ಎರಡನೇ ಪದಕವಿದು.

ಮಂಗಳವಾರ (ಅಕ್ಟೋಬರ್ 16) ರಾತ್ರಿ ನಡೆದ ಟ್ರಿಪಲ್ ಜಂಪ್ ಸ್ಟೇಜ್ 1ರ ಸ್ಪರ್ಧೆಯಲ್ಲಿ ಪ್ರವೀಣ್ 15.68 ಮೀ. ದೂರ ಸಾಧನೆಯೊಂದಿಗೆ 5ನೇ ಸ್ಥಾನದಲ್ಲಿದ್ದರು. ಬುಧವಾರ (ಅಕ್ಟೋಬರ್ 17) ನಡೆದ ಸ್ಟೇಜ್ 2ರಲ್ಲಿ 15.84 ಮೀ. ಸಾಧನೆ ತೋರಿದ ಪ್ರವೀಣ್ (15.68+15.84) ಕಂಚು ಜಯಿಸಿದರು.

ಇದೇ ವಿಭಾಗದಲ್ಲಿ 34.18 ಮೀ. (17.14+17.04) ಸಾಧನೆ ತೋರಿದ ಕ್ಯೂಬಾದ ಅಲೆಜಾಂಡ್ರೊ ಡಯಾಜ್ ಬಂಗಾರದ ಪದಕ ಗೆದ್ದುಕೊಂಡರೆ, ನೈಜೀರಿಯಾದ ಎಮೆನ್ಯುಯೆಲ್ ಒರಿಟ್ಸೆಮೆಯಿವಾ (16.34 + 15.51) ಬೆಳ್ಳಿಗೆ ಕೊರಳೊಡ್ಡಿದರು. ಪ್ರವೀಣ್, ತಮಿಳುನಾಡಿನ ಚೆನ್ನೈಯವರು.

Story first published: Wednesday, October 17, 2018, 17:36 [IST]
Other articles published on Oct 17, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+