Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್ ಹಜಾರೆ ಟ್ರೋಫಿಗೆ ಬಲಿಷ್ಠ ಕರ್ನಾಟಕ ತಂಡ

ಬೆಂಗಳೂರು, ನ. 4: ವಿಜಯ್ ಹಜಾರೆ ಟ್ರೊಫಿಗೆ ಆರ್. ವಿನಯ್ ಕುಮಾರ್ ಅವರನ್ನೇ ಕರ್ನಾಟಕ ತಂಡದ ನಾಯಕರನ್ನಾಗಿ ಉಳಿಸಿಕೊಳ್ಳಲಾಗಿದೆ. ಹಿಂದಿನ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ತಂಡದಲ್ಲಿದ್ದ ಬಹುತೇಕ ಆಟಗಾರರು ಕರ್ನಾಟಕ ಟೀಮ್ ನಲ್ಲಿದ್ದಾರೆ.

ಹಿಂದಿನ ತಂಡದಲ್ಲಿದ್ದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಕೆ.ಎಲ್.ರಾಹುಲ್, ಕರಣ್ ಮನಾಯರ್, ಅಭಿಮನ್ಯು ಮಿಥುನ್ 15 ಜನರ ತಂಡದಲ್ಲಿದ್ದು ಪ್ರಶಸ್ತಿಗೆ ಸೆಣೆಸಲಿದ್ದಾರೆ.[ಗ್ರೆಗ್ ಚಾಪೆಲ್ ಒಬ್ಬ 'ರಿಂಗ್ ಮಾಸ್ಟರ್]

cricket

ಮೊದಲು ಸೌತ್ ಝೋನ್ ಲೀಗ್ (ಸುಬ್ಬಯ್ಯ ಪಿಳ್ಳೆ ಟ್ರೋಫಿ) ಪಂದ್ಯಗಳು ನವೆಂಬರ್ 7 ರಿಂದ ಆರಂಭವಾಗಿ 13ರ ವರೆಗೆ ನಡೆಯಲಿದೆ. ಸೌತ್ ಲೀಗ್ ನಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳು ವಿಜಯ್ ಹಜಾರೆ ಟ್ರೋಫಿಯ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿವೆ. ನವೆಂಬರ್ 7 ರಂದು ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಆಂಧ್ರದ ವಿರುದ್ಧ ಆಡಲಿದೆ.

ರಣಜಿ ಟ್ರೋಫಿಗೂ ಮುನ್ನವೇ ಬಿಸಿಸಿಐ ಏಕದಿನ ಪಂದ್ಯಗಳ ಸರಣಿ ಆಯೋಜಿಸಿದೆ. 2015ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲು ಆಟಗಾರರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದೇ ಹೇಳಲಾಗಿದೆ.[ದ್ರಾವಿಡ್ ಜೊತೆ ಹೋಲಿಕೆ ಉತ್ಸಾಹ ಹೆಚ್ಚಿಸುತ್ತದೆ]

ಕರ್ನಾಟಕ ತಂಡ ರಣಜಿ ಟ್ರೊಫಿ, ಇರಾನಿ ಮತ್ತು ವಿಜಯ್ ಹಜಾರೆ ಚಾಂಪಿಯನ್ ಪಟ್ಟ ತನ್ನಲ್ಲೇ ಇರಿಸಿಕೊಂಡಿದ್ದು ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದೆ.

ಕರ್ನಾಟಕ ತಂಡ
ಆರ್. ವಿನಯ್ ಕುಮಾರ್(ನಾಯಕ), ರಾಬಿನ್ ಉತ್ತಪ್ಪ, (ವಿಕೆಟ್ ಕೀಪರ್), ಕೆ.ಎಲ್.ರಾಹುಲ್, ಮನೀಶ್ ಪಾಂಡೆ, ಸ್ಟುವರ್ಟ್ ಬಿನ್ನಿ, ಮಯಾಂಕ್ ಅಗರ್ ವಾಲ್, ಕರಣ್ ನಾಯರ್, ಅಬ್ರಾರ್ ಖಾಜಿ, ಅಭಿಮನ್ಯು ಮಿಥುನ್, ಎಚ್.ಎಸ್.ಶ್ರೀನಾಥ್, ಶ್ರೇಯಸ್ ಗೋಪಾಲ್, ಉದಿತ್ ಪಟೇಲ್, ಶಿಶಿರ್ ಭವಾನೆ, ಕೆಸಿ ಅವಿನಾಶ್, ಕುನಾಲ್ ಕಪೂರ್

ಕೋಚ್ ಗಳು
ಬ್ಯಾಟಿಂಗ್: ಜೆ.ಅರುಣ್ ಕುಮಾರ್
ಬೌಲಿಂಗ್: ಮನ್ಸೂರ್ ಅಲಿ ಖಾನ್

ಕರ್ನಾಟಕದ ಪಂದ್ಯಗಳು(ಎಲ್ಲಾ ಪಂದ್ಯಗಳು ಸಿಕಂದರಾಬಾದ್ ನಲ್ಲೇ ನಡೆಯಲಿವೆ)
ನವೆಂಬರ್ 7 Vs ಆಂಧ್ರ ಪ್ರದೇಶ
ನವೆಂಬರ್ 8 Vs ಗೋವಾ
ನವೆಂಬರ್ 10 Vs ತಮಿಳುನಾಡು
ನವೆಂಬರ್ 11 Vs ಹೈದ್ರಾಬಾದ್
ನವೆಂಬರ್ 13 Vs ಕೇರಳ

Story first published: Wednesday, January 3, 2018, 10:16 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+