ಏಷಿಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್; ಚಿನ್ನ ಗೆದ್ದ ಕರಾವಳಿಗರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ

ಕಜಕಿಸ್ತಾನದಲ್ಲಿ ನಡೆದ ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತೀಯ ಪವರ್ ಲಿಫ್ಟರ್‌ಗಳು ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಭಾರತವನ್ನು ಪ್ರತಿನಿಧಿಸಿರುವ ಕುಂದಾಪುರದ ಪವರ್ ಲಿಫ್ಟರ್‌ಗಳು ಚಿನ್ನದ ಪದಕ ಗೆಲ್ಲುವ ಮೂಲಕ ಸಾಧನೆ ಮೆರೆದಿದ್ದಾರೆ.
ಸತೀಶ್ ಖಾರ್ವಿ ಮತ್ತು ನಾಗಶ್ರೀ ಶೇರಿಗಾರ್ ಉಪ್ಪಿನಕುದ್ರು ಏಷ್ಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ ಭಾಗವಹಿಸಿ ಭಾರತದ ಮುಡಿಗೆ ಚಿನ್ನದ ಗರಿಯ ಗೌರವ ನೀಡಿದ ಕ್ರೀಡಾಪಟುಗಳು. ಈ ಇಬ್ಬರೂ ಪವರ್‌ಲಿಫ್ಟರ್‌ಗಳು ಹುಟ್ಟೂರಿಗೆ ಆಗಮಿಸಿದ್ದು ನಾಗರೀಕರು ಅದ್ಧೂರಿ ಸ್ವಾಗತವನ್ನು ಕೋರಿದ್ದಾರೆ.
ಏಷ್ಯನ್ ಪವರ್ ಲಿಫ್ಟಿಂಗ್‌ನಲ್ಲಿ ಸತೀಶ್ ಖಾರ್ವಿ ಅವರು 3 ಚಿನ್ನ, 1 ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಉಪ್ಪಿನಕುದ್ರುವಿನ ನಾಗಶ್ರೀ ಶೇರಿಗಾರ್ ಅವರು 1 ಚಿನ್ನ ಹಾಗೂ 3 ಬೆಳ್ಳಿ ಪದಕ ಪಡೆದಿದ್ದರು. ಭಾರತ ಪರವಾಗಿ ಸ್ಪರ್ಧಿಸಿರುವ ಇವರುಗಳು ಈಗಾಗಲೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಅನೇಕ ಪದಕಗಳನ್ನು ಪಡೆದಿದ್ದಾರೆ.
ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡವನ್ನು ಈ ಇಬ್ಬರೂ ಪವರ್ ಲಿಫ್ಟರ್‌ಗಳು ಪ್ರತಿನಿಧಿಸಬೇಕಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ವೀಸಾ ಸಮಸ್ಯೆಯಿಂದಾಗಿ ಕಾಮನ್‌ವೆಲ್ತ್‌ನಲ್ಲಿ ಪ್ರತಿನಿಧಿಸುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ ಸದ್ಯ ಕಜಕಿಸ್ಥಾನದಲ್ಲಿ ಭಾರತದ ಪರವಾಗಿ ವಿಜಯ ಪತಾಕೆ ಹಾರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications