For Quick Alerts
ALLOW NOTIFICATIONS  
For Daily Alerts

ವಿಂಟರ್ ಒಲಿಂಪಿಕ್ಸ್ 2022: ಪದಕ ಪಟ್ಟಿಯಲ್ಲಿ ನಾರ್ವೆಗೆ ಅಗ್ರಸ್ಥಾನ: ಮೇಲುಗೈ ಸಾಧಿಸಿದ ಅಮೆರಿಕಾ ಕ್ರೀಡಾಪಟುಗಳು

Winter Olympics 2022 Beijing: Details of all medals won on 10 February 2022

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್ 6ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಹಲವು ಸ್ಪರ್ಧೆಗಳು ನಡೆದಿದ್ದು ಅನೇಕ ಕ್ರೀಡಾಪಟುಗಳು ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಮುಖ್ಯವಾಗಿ ಇಂದಿನ ಕ್ರೀಡಾಕೂಟದಲ್ಲಿ ಅಅಮೆರಿಕಾದ ಕ್ರೀಡಾಪಟುಗಳು ಗಮನಾರ್ಹ ಪ್ರದರ್ಶನ ನೀಡಿದ್ದಾರೆ.

ಅಲ್ಫೈನ್ ಸ್ಕೀಯಿಂಗ್‌ನ ಪುರುಷರ ಸ್ಪರ್ಧೆಯಲ್ಲಿ ಪುರುಷರ ಅಲ್ಫೈನ್ ಕಂಬೈನ್ಡ್ ಸ್ಲೇಲಮ್ ವಿಭಾಗದಲ್ಲಿ ಆಸ್ಟ್ರಿಯಾದ ಜೋಹಾನ್ಸ್ ಸ್ಟ್ರೋಲ್ಜ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ನಾರ್ವೆಯ ಅಲೆಕ್ಸಾಂಡರ್ ಆಮೋಡ್ತ್ ಬೆಳ್ಳಿ ಹಾಗೂ ಕೆನಡಾದ ಜೇಮ್ಸ್ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಕ್ರಾಸ್ ಕಂಟ್ರಿ ಸ್ಕೀಯಿಂಗ್‌ನ ಮಹಿಳೆಯರ 10 ಕಿ.ಮೀ ಕ್ಲಾಸಿಕ್ ವಿಭಾಗದಲ್ಲಿ ನಾರ್ವೆ ಚಿನ್ನದ ಪದಕ ಗೆದ್ದರೆ ಫಿನ್ಲಾಂಡ್‌ನ ಆಟಗಾರರು ವೆಳ್ಳಿ ಹಾಗೂ ಕಂಚಿನ ಪದಕವನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪುರುಷರ ಸ್ಕೇಟಿಂಗ್‌ನಲ್ಲಿ ಅಮೆರಿಕಾ ಚಿನ್ನದ ಪದಕ ಗೆದ್ದರೆ ಜಪಾನ್ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಇನ್ನು ಮಿಕ್ಸ್‌ಡ್ ಟೀಮ್ ಎರಿಯಲ್ಸ್ ಫೈನಲ್‌ನಲ್ಲಿ ಕೂಡ ಅಮೆರಿಕಾ ಗೆಲುವು ಸಾಧಿಸಿದ್ದು ಚಿನ್ನದ ಪದಕ ಗೆದ್ದುಕೊಂಡಿದೆ. ಈ ಸ್ಪರ್ಧೆಯಲ್ಲಿ ಚೀನಾ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದು ಕೆನಡಾ ಪಾಲಿಗೆ ಕಂಚಿನ ಪದಕ ಗೆದ್ದುಕೊಂಡಿದೆ.

ಇನ್ನು ಪದಕ ಪಟ್ಟಿಯಲ್ಲಿ ನಾರ್ವೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು 5 ಚಿನ್ನದ ಪದಕ, ಮೂರು ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿರುವ ಜರ್ಮನಿ ಖಾತೆಯಲ್ಲಿ ಐದು ಚಿನ್ನದ ಪದಕ, ಮೂರು ಕಂಚಿನ ಪದಕಗಳಿದೆ. ಈ ಮೂಲಕ ಒಟ್ಟು 8 ಪದಕಗಳಿದೆ. ಇನ್ನು ಅಮೆರಿಕಾ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದು ನಾಲ್ಕು ಚಿನ್ನದ ಪದಕ ಐದು ಬೆಳ್ಳಿ ಹಾಗೂ ಇಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಆಸ್ಟ್ರಿಯಾ ಇದ್ದು ನಾಲ್ಕು ಚಿನ್ನದ ಪದಕ, ನಾಲ್ಕು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕವಿದೆ. ಐದನೇ ಸ್ಥಾನದಲ್ಲಿ ನೆದರ್ಲ್ಯಾಂಡ್ಸ್ ಇದ್ದು ನಾಲ್ಕು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕವಿದೆ.

Story first published: Thursday, February 10, 2022, 19:33 [IST]
Other articles published on Feb 10, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+