ಜೂರಿಕ್ ಡೈಮಂಡ್ ಲೀಗ್: ಅರ್ಹತಾ ಸುತ್ತಿನಲ್ಲಿ 2ನೇ ಸ್ಥಾದೊಂದಿಗೆ ಫೈನಲ್‌ಗೆ ಪ್ರವೇಶಿಸಿದ ನೀರಜ್ ಚೋಪ್ರ
ಇತ್ತೀಚೆಗಷ್ಟೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದ ನೀರಜ್ ಚೋಪ್ರ ಮತ್ತೊಂದು ಸಾಧನೆಯ ಸನಿಹದಲ್ಲಿದ್ದಾರೆ. ಅಮೆರಿಕಾದ ಯೂಜಿನ್ ನಗರದಲ್ಲಿ ನಡೆಯುತ್ತಿರುವ ಜೂರಿಕ್ ಡೈಮಂಡ್ ಲೀಗ್ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನದೊಂದಿಗೆ ನೀರಜ್ ಚೋಪ್ರ ಫೈನಲ್‌ಗೆ ಪ್ರವೇಶ ಅರ್ಹತೆ ಪಡೆದುಕೊಂಡಿದ್ದಾರೆ.
ಮತ್ತೊಂದೆಡೆ ಪುರುಷರ ಲಾಂಗ್ ಜಂಪ್‌ನಲ್ಲಿ ಭಾರತದ ಮುರಳಿ ಶ್ರೀಶಂಕರ್ ಐದನೇ ಸ್ಥಾನದೊಂದಿಗೆ ಮೊದಲ ಸುತ್ತು ಮುಗಿಸಿದ್ದಾರೆ. 7.99 ಮೀ ದೂರಕ್ಕೆ ಜಿಗಿದಿರುವ ಮುರಳಿ ಶ್ರೀಶಂಕರ್ ಈ ಮೂಲಕ ಫೈನಲ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ ಎನ್ನುವುದು ಗಮನಾರ್ಹ ಅಂಶ.

ಮೊದಲ ಸ್ಥಾನ ಕಳೆದುಕೊಂಡ ನೀರಜ್
ವಿಶ್ವ ಅಥ್ಲಟಿಕ್ಸ್ ಚಾಂಪಿಯನ್ ಹಾಗೀ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ ನೀರಜ್ ಚೋಪ್ರ ಈ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆಯಲು ವಿಫಲವಾದರು. ಮೂರು ಲೀಗಲ್ ಥ್ರೋಗಳನ್ನು ಮಾಡಿದ ನೀರಜ್ ಚೋಪ್ರ 80.79ಮೀ, 85.22 ಮೀಟರ್ ಹಾಗೂ 85. 71 ಮೀಟರ್ ದೂರಕ್ಕೆ ಎಸೆಯುವಲ್ಲಿ ಯಶಸ್ವಿಯಾಗಿದ್ದರು. ಭಾರತದ ಸ್ಟಾರ್ ಮೂರು ಫೌಲ್‌ಗಳನ್ನು ಮಾಡುವ ಮೂಲಕ ಈ ದಿನ ತಮ್ಮ ಅತ್ಯುತ್ತಮ ಲಯದಲ್ಲಿ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು.
ಕಳೆದ ಭಾನುವಾರ ನೀರಜ್ ಚೋಪ್ರ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್ಸ್‌ನಲ್ಲಿ 88.17 ಮೀ ಎಸೆದಿದ್ದರು. ಈ ಮೂಲಕ ಚಿನ್ನ ಗೆದ್ದು ವಿಶ್ವ ಚಾಂಪಿಯನ್ ಕಿರೀಟವನ್ನು ಮುಡುಗೇರಿಸಿಕೊಂಡಿದ್ದರು. ಆದರೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ (85.86) ಅವರಿಗಿಂತ ನಂತರದ ಸ್ಥಾನವನ್ನು ನೀರಜ್ ಡೈಮಂಡ್ ಲೀಗ್‌ನಲ್ಲಿ ಪಡೆದುಕೊಂಡಿದ್ದಾರೆ.
ಇನ್ನು ಈ ಆವೃತ್ತಿಯುದ್ದಕ್ಕೂ ನೀರಜ್ ಚೋಪ್ರ ಅಗ್ರಸ್ಐಆನದೊಂದಿಗೆ ಅಜೇಯವಾಗಿಯೇ ಉಳಿದುಕೊಂಡಿದ್ದರು. ಆದರೆ ಡೈಮಂಡ್ ಲೀಗ್‌ನಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೂ ಫೈನಲ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಗಮನಾರ್ಹ. ಅಲ್ಲಿ ನೀರಜ್ ಚೋಪ್ರ ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications