ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಯುದ್ಧಪೀಡಿತ ಉಕ್ರೇನ್ ಮಕ್ಕಳ ಶಿಕ್ಷಣಕ್ಕೆ 5 ಲಕ್ಷ ಡಾಲರ್ ದೇಣಿಗೆ ನೀಡಿದ ಟೆನಿಸ್ ದಿಗ್ಗಜ ರೋಜರ್ ಫೆಡರರ್

Rojer federer

20 ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳ ಒಡೆಯ, ಸ್ವಿಸ್ ಟೆನಿಸ್ ದಿಗ್ಗಜ ರೋಜರ್ ಫೆಡರರ್ ರಷ್ಯಾದೊಂದಿಗಿನ ಯುದ್ಧದಿಂದ ತೀವ್ರವಾಗಿ ನಲುಗಿರುವ ಉಕ್ರೇನ್‌ಗೆ ಬೆಂಬಲ ಘೋಷಿಸಿದ್ದಾರೆ. ಅತ್ಯಂತ ದುರಂತ ಸಂದರ್ಭಗಳಲ್ಲಿ ರೋಜರ್ ಫೆಡರರ್ ಫೆಡರೇಶನ್, ಉಕ್ರೇನ್ ಮಕ್ಕಳ ಶಿಕ್ಷಣಕ್ಕೆ ಭದ್ರಕೋಟೆಯಾಗಿ ನಿಲ್ಲಲಿದೆ ಎಂದು ಬಹಿರಂಗಪಡಿಸಿದರು. ಅವರು ತಮ್ಮ ಫೌಂಡೇಶನ್ ಮೂಲಕ $ 5 ಮಿಲಿಯನ್ (ಅಂದಾಜು ರೂ. 3.8 ಕೋಟಿ) ದೇಣಿಗೆ ನೀಡಿದರು.

ರಷ್ಯಾದ ಆಕ್ರಮಣವು ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದ ಶಾಲೆಗಳನ್ನು ನಾಶಪಡಿಸಿದ್ದು, ಮಕ್ಕಳ ಶಿಕ್ಷಣವನ್ನು ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್‌ಗೆ ವಿವಿಧ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಪಡೆಯುತ್ತಿದೆ. ಈ ವೇಳೆ ಫೆಡರರ್ ಕೂಡ ತಮ್ಮ ಬೆಂಬಲ ಘೋಷಿಸಿದರು.

ಧೋನಿ ಕುರಿತಾಗಿ 'U' ಟರ್ನ್ ಹೊಡೆದ ಗಂಭೀರ್: ಮಾಹಿ ಪರವಾಗಿ ಇರ್ತೀನಿ ಎಂದ ಗೌತಮ್ಧೋನಿ ಕುರಿತಾಗಿ 'U' ಟರ್ನ್ ಹೊಡೆದ ಗಂಭೀರ್: ಮಾಹಿ ಪರವಾಗಿ ಇರ್ತೀನಿ ಎಂದ ಗೌತಮ್

ಉಕ್ರೇನ್‌ನಲ್ಲಿ ಮಕ್ಕಳ ದುಃಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಫೆಡರರ್ ಟ್ವಿಟ್ಟರ್‌ನಲ್ಲಿ ತಮ್ಮ ಬೇಸರ ವ್ಯಕ್ತಪಡಿಸಿ ಬೆಂಬಲ ನೀಡಿದ್ದಾರೆ.

''ಉಕ್ರೇನ್‌ನಿಂದ ಬಂದ ಫೋಟೋಗಳನ್ನು ನೋಡಿ ನಾನು ಮತ್ತು ನನ್ನ ಕುಟುಂಬಕ್ಕೆ ಶಾಕ್ ಆದೆ. ಮುಗ್ಧ ಜನರಿಗೆ ನನ್ನ ಪಾಲಿನ ಸಹಾಯ ಮಾಡಲು, ಶಾಂತಿಗಾಗಿ ನಮ್ಮ ಪ್ರಯತ್ನ ಮಾಡುತ್ತೇವೆ. ಸುಮಾರು 6 ಮಿಲಿಯನ್ ಉಕ್ರೇನಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಈ ಮಕ್ಕಳಿಗೆ ನಮ್ಮ ಫೆಡರೇಶನ್ ನೆರವು ನೀಡುತ್ತದೆ'' ಎಂದಿದ್ದಾರೆ.

ರೋಜರ್ ಫೆಡರರ್ ಫೌಂಡೇಶನ್ ಮೂಲಕ ಶಾಲಾ ಶಿಕ್ಷಣವನ್ನು ಮುಂದುವರಿಸಲು ನಾವು $ 5 ಮಿಲಿಯನ್ ಖರ್ಚು ಮಾಡುತ್ತೇವೆ ಎಂದು ರೋಜರ್ ಫೆಡರರ್ ಟ್ವೀಟ್ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ರಷ್ಯಾದ ಪಡೆಗಳು ಉಕ್ರೇನ್‌ನ ನಗರಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿವೆ.

ವಿಂಬಲ್ಡನ್ 2021 ರ ಕ್ವಾರ್ಟರ್ ಫೈನಲ್ ಸೋಲಿನ ನಂತರ ರೋಜರ್ ಫೆಡರರ್ ಮತ್ತೆ ಯಾವುದೇ ಪಂದ್ಯವನ್ನಾಡಿಲ್ಲ. ಮೊಣಕಾಲಿನ ಗಾಯದಿಂದಾಗಿ ಅವರು ಟೋಕಿಯೊ ಒಲಿಂಪಿಕ್ಸ್‌ ಸೇರಿದಂತೆ ಈ ವರ್ಷದ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿಯಾದ ಯುಎಸ್ ಓಪನ್‌ನಿಂದ ಹೊರಗುಳಿದಿದ್ದಾರೆ. ಮತ್ತೊಬ್ಬ ಟೆನಿಸ್ ತಾರೆ ಆಂಡಿ ಮರ್ರೆ ಕೂಡ ಉಕ್ರೇನಿಯನ್ ಮಕ್ಕಳಿಗೆ ಬೆಂಬಲವನ್ನು ಘೋಷಿಸಿದರು. ಈ ವರ್ಷದ ಎಲ್ಲಾ ಬಹುಮಾನದ ಹಣವನ್ನು ಉಕ್ರೇನ್‌ನ ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುವುದಾಗಿ ಘೋಷಿಸಿದರು.

Story first published: Saturday, March 19, 2022, 14:56 [IST]
Other articles published on Mar 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X