ಸ್ಪೇನ್‌ನ 29ರ ಹರೆಯದ ಟೆನಿಸ್ ಆಟಗಾರನಿಗೆ 8 ವರ್ಷಗಳ ನಿಷೇಧ ಶಿಕ್ಷೆ

ಮ್ಯಾಡ್ರಿಡ್: ಸ್ಪೇನ್‌ನ ಟೆನಿಸ್ ಆಟಗಾರ ಎನ್ರಿಕ್ ಲೋಪೆಜ್ ಪೆರೆಜ್ 8 ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ. ಜೊತೆಗೆ 18 ಲಕ್ಷ ರೂ.ಗಳ ದಂಡವೂ ವಿಧಿಸಲಾಗಿದೆ. 2017ರಿಂದಲೂ ಬೇರೆ ಬೇರೆ ಟೂರ್ನಿಗಳಲ್ಲಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪೆರೆಜ್‌ಗೆ ಶಿಕ್ಷೆ ವಿಧಿಸಲಾಗಿದೆ.
8 ವರ್ಷಗಳ ನಿಷೇಧಕ್ಕೀಡಾಗಿರುವುದರಿಂದ ಅಧಿಕೃತವಾಗಿ ಮಾನ್ಯತೆ ಪಡೆದ ಯಾವುದೇ ಟೂರ್ನಿಗಳಲ್ಲಿ ಎನ್ರಿಕ್ ಲೋಪೆಜ್ ಪೆರೆಜ್ ಭಾಗವಹಿಸುವಂತಿಲ್ಲ ಎಂದು ಟೆನಿಸ್ ಸಮಗ್ರತೆ ಘಟಕ ಹೇಳಿದೆ. ಪೆರೆಜ್‌ಗೀಗ 29ರ ಹರೆಯ.
ಎನ್ರಿಕ್ ಲೋಪೆಜ್ ಪೆರೆಜ್ ಅವರ ಸಿಂಗಲ್ಸ್ ಬೆಸ್ಟ್ ಸಾಧನೆಯೆಂದರೆ 2018ರಲ್ಲಿ 154ನೇ ಶ್ರೇಯಾಂಕ ತಲುಪಿದ್ದು ಮತ್ತು ಪೆರೆಜ್ ಡಬಲ್ಸ್ ಬೆಸ್ಟ್ ಸಾಧನೆಯೆಂದರೆ ಕಳೆದ ವರ್ಷ 135ನೇ ರ್‍ಯಾಂಕಿಂಗ್‌ಗೆ ತಲುಪಿದ್ದು.
'ಎನ್ರಿಕ್ ಲೋಪೆಜ್ ಪೆರೆಜ್ ಭ್ರಷ್ಟಾಚಾರ ಆರೋಪದ ವಿಚಾರಣೆಯನ್ನು ಭ್ರಷ್ಟಾಚಾರ ವಿರೋಧಿ ಅಧಿಕಾರಿ ರಿಚರ್ಡ್ ಮೆಕ್‌ಲಾರೆನ್ ಅವರು 2020ರ ನವೆಂಬರ್ 5ರಂದು ನಡೆಸಿದ್ದಾರೆ,' ಎಂದು ಟೆನಿಸ್ ಇಂಟಗ್ರಿಟಿ ಯುನಿಟ್ ಪ್ರಕಟಣೆಯ ಮೂಲಕ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications