ವಿಂಬಲ್ಡನ್ ಟೆನಿಸ್ ಹಬ್ಬ ನೋಡಲು ರೆಡಿನಾ?
ಲಂಡನ್, ಜೂ.23: ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಿಂದ ವೇಯ್ನ್ ರೂನಿ ನೇತೃತ್ವದ ಇಂಗ್ಲೆಂಡ್ ಪಡೆ ಲೀಗ್ ಹಂತದಿಂದಲೇ ಹೊರ ಬಿದ್ದಿರುವ ನೋವಿನ ಬೆನ್ನಲ್ಲೇ ಕ್ರೀಡಾಭಿಮಾನಿಗಳು ಲಂಡನ್ನಿನಲ್ಲಿ ಟೆನಿಸ್ ಕೋರ್ಟ್ ನತ್ತ ಮುಖ ಮಾಡಿದ್ದಾರೆ. ವಿಂಬಲ್ಡನ್ ಟೆನಿಸ್ ಟೂರ್ನಿ ಸೋಮವಾರ ಸಂಜೆಯಿಂದ ಆರಂಭಗೊಂಡಿದೆ.
ಪ್ರಸ್ತುತ ಋತುವಿನ ವಿಂಬಲ್ಡನ್ ಟೆನಿಸ್ ಟೂರ್ನಿ ಆತಿಥ್ಯಕ್ಕೆ ಭರ್ಜರಿ ತಯಾರಿಯಾಗಿದೆ. 77 ವರ್ಷಗಳ ನಂತರ ಆತಿಥೇಯ ಇಂಗ್ಲೆಂಡ್‌ಗೆ ವಿಂಬಲ್ಡನ್ ಕಿರೀಟ ತೊಡಿಸಿದ ಹಾಲಿ ಚಾಂಪಿಯನ್ ಆಂಡಿ ಮರ್ರೆ ಮೊದಲ ದಿನವೇ ಸೆಂಟರ್ ಕೋರ್ಟ್ ನಲ್ಲಿ ಆಡಲಿದ್ದಾರೆ. ಭಾರತದಲ್ಲಿ ಪ್ರತಿ ದಿನ ಸಂಜೆ ಟೆನ್ನಿಸ್ ಪ್ರಿಯರು ಸ್ಟಾರ್ ಸ್ಪೋರ್ಟ್ಸ್ ಟಿವಿ ಚಾನೆಲ್ ಆನ್ ಮಾಡಿ ಲೈವ್ ಪಂದ್ಯಗಳನ್ನು ನೋಡಬಹುದು.
ಮರೆ ಮತ್ತೆ ಪ್ರಶಸ್ತಿ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಸಹಜವಾಗಿ ಅಭಿಮಾನಿಗಳಲ್ಲಿದೆ. ಆದರೆ, ಸೆರ್ಬಿಯಾದ ನೊವಾಕ್ ಜೊಕೋವಿಕ್ ಕಳೆದ ಬಾರಿ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಕಾದಿದ್ದಾರೆ. ಇದರ ಜತೆಗೆ ಹುಲ್ಲಿನ ಅಂಕಣದ ರಾಜ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಹಾಗೂ ಸ್ಪೇನ್‌ನ ರಾಫೆಲ್ ನಡಾಲ್ ಅವರು ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.[ರೂನಿ ಗೋಲು ಹೊಡೆದ್ರು ಇಂಗ್ಲೆಂಡ್ ಗೆಲ್ಲಲಿಲ್ಲ]
ಹಾಲಿ ಚಾಂಪಿಯನ್ ಮರಿಯನ್ ಬಾರ್ಟೊಲಿ ಗೈರು ಹಾಜರಿ ಹಿನ್ನೆಲೆಯಲ್ಲಿ ಮಹಿಳೆಯರ ವಿಭಾಗದಲ್ಲಿ ರಷ್ಯಾದ ಮರಿಯಾ ಶರಪೋವಾ, ಅಮೆರಿಕದ ಸೆರೆನಾ ವಿಲಿಯಮ್ಸ್ ಪ್ರಶಸ್ತಿಯ ಫೇವರಿಟ್ ಆಟಗಾರ್ತಿಯರು.ರೊಮೇನಿಯಾದ ಸಿಮೋನಾ ಹಾಲೆಪ್, ರಷ್ಯಾದ ಆಕ್ರಮಣಕಾರಿ ಆಟಗಾರ್ತಿ ಮರಿಯಾ ಶರಪೋವಾ, ಚೆಕ್ ರಿಪಬ್ಲಿಕ್‌ನ ಪೆಟ್ರೊ ಕ್ವಿಟೋವಾ ಕೂಡ ಸ್ಟಾರ್ ಆಟಗಾರ್ತಿಯರಾಗಿದ್ದಾರೆ. ಈ ಬಾರಿಯ ವೇಳಾಪಟ್ಟಿ ಬಗ್ಗೆ ಅಭಿಮಾನಿಗಳು ಥ್ರಿಲ್ ಆಗಿದ್ದು ಏಕೆ?ಮುಂದೆ ಓದಿ...

ಹಾಲಿ ಚಾಂಪಿಯನ್ ಗಳು ಮರೆ, ಬಾರ್ಟೊಲಿ
ಲಂಡನ್ : ಹಾಲಿ ಪುರುಷರ ಚಾಂಪಿಯನ್ ಇಂಗ್ಲೆಂಡಿನ ಆಂಡೆ ಮರೆ, ಮಹಿಳೆಯರ ಚಾಂಪಿಯನ್ ಫ್ರಾನ್ಸಿನ ಮಾರಿಯನ್ ಬಾರ್ಟೊಲಿ ಅವರು ಟ್ರೋಫಿಯೊಂದಿಗೆ. ಚಿತ್ರ : ಪಿಟಿಐ.

ಮಹಿಳಾ ಆಟಗಾರ್ತಿಯರಲ್ಲಿ ಯಾರು ಫೇವರೀಟ್
ಈ ಬಾರಿ ಮಹಿಳಾ ಆಟಗಾರ್ತಿಯರಲ್ಲಿ ರಷ್ಯಾದ ಮರಿಯಾ ಶರಪೋವಾ, ಅಮೆರಿಕದ ಸೆರೆನಾ ವಿಲಿಯಮ್ಸ್ ಫೇವರಿಟ್.ರೊಮೇನಿಯಾದ ಸಿಮೋನಾ ಹಾಲೆಪ್, ಚೆಕ್ ರಿಪಬ್ಲಿಕ್‌ನ ಪೆಟ್ರೊ ಕ್ವಿಟೋವಾ ಕೂಡಾ ಗಮನ ಸೆಳೆಯಬಲ್ಲರು.

ರಾಫೆಲ್ ನಡಾಲ್ ಗೆ ಕಠಿಣ ಪರೀಕ್ಷೆ
ವೇಳಾಪಟ್ಟಿ ಗಮನಿಸಿದರೆ ಸೆಮಿಫೈನಲ್ ಹಂತದಲ್ಲಿ ಫೆಡರರ್ ಹಾಗೂ ನಡಾಲ್ ಕಾದಾಡುವ ಸಾಧ್ಯತೆ ಕಂಡು ಬರುತ್ತದೆ. ಇನ್ನೊಂದೆಡೆ ಮತ್ತೊಮ್ಮೆ ಕಳೆದ ಬಾರಿ ಫೈನಲಿಸ್ಟ್ ಮರೆ ಹಾಗೂ ಜೋಕವಿಕ್ ಸೆಮೀಸ್ ನಲ್ಲೇ ಎದುರಾಗುವ ಸಾಧ್ಯತೆಯಿದೆ.

ದಾಖಲೆಯ ಹಿಂದೆ ಬಿದ್ದಿರುವ ರೋಜರ್
ದಾಖಲೆಯ ಹಿಂದೆ ಬಿದ್ದಿರುವ ರೋಜರ್ ಫೆಡರರ್ 18ನೇ ಗ್ರಾಂಡ್ ಸ್ಲಾಮ್ ಹಿಂದೆ ಬಿದ್ದಿದ್ದು ಪ್ರಸಕ್ತ ಋತುವಿನಲ್ಲಿ ಜರ್ಮನಿನ ಹುಲ್ಲಿನ ಹಾಸಿನಲ್ಲಿ ಉತ್ತಮ ಆಟ ಪ್ರದರ್ಶಿಸಿ ತಯಾರಾಗಿದ್ದಾರೆ.ಸೆಮಿಸ್ ನಲ್ಲಿ ನಡಾಲ್ ಎದುರಿಸುವುದೊಂದೆ ದೊಡ್ಡ ಸವಾಲು.

ಲಯ ಕಳೆದುಕೊಂಡಿರುವ ಹಳೆ ಹುಲಿ
ಲಯ ಕಳೆದುಕೊಂಡಿರುವ ಹಳೆ ಹುಲಿ ಸೆರೆನಾ ವಿಲಿಯಮ್ಸ್ ಈ ವರ್ಷದಲ್ಲಿ ಮಿಯಾಮಿ ಓಪನ್, ರೋಮ್ ನಲ್ಲಿ ಆವೆ ಮಣ್ಣಿನಲ್ಲಿ ಆಡಿ ಗೆದ್ದಿದ್ದು ಬಿಟ್ಟರೆ ಆಸ್ಟ್ರೇಲಿಯನ್ ಹಾಗೂ ಫ್ರೆಂಚ್ ಓಪನ್ ನಲ್ಲಿ ಕಳಪೆ ಸಾಧನೆ ಮಾಡಿದ್ದಾರೆ. ವಿಂಬಲ್ಡನ್ ನಲ್ಲಿ 6ನೇ ಬಾರಿ ಕಪ್ ಎತ್ತುವ ಉತ್ಸಾಹದಲ್ಲಿದ್ದಾರೆ.

ಶರಪೋವಾ ಈ ಬಾರಿ ಫೇವರಿಟ್ ಆಟಗಾರ್ತಿ
ರಷ್ಯಾ ಮರಿಯಾ ಶರಪೋವಾ ಈ ಬಾರಿ ಫೇವರಿಟ್ ಆಟಗಾರ್ತಿಯಾಗಿದ್ದು, ಹತ್ತು ವರ್ಷದ ಕೆಳಗೆ ಸೆರೆನಾ ವಿಲಿಯಮ್ಸ್ ವಿರುದ್ಧ ತೋರಿದ ಸಾಧನೆ ಮರುಕಳಿಸಲು ಸಿದ್ಧರಾಗಿದ್ದಾರೆ. ಫ್ರೆಂಚ್ ಓಪನ್ ಗೆದ್ದಿರುವ ಖುಷಿಯಲ್ಲಿರುವ ಶರಪೋವಾಗೆ ಕ್ವಾರ್ಟರ್ ಫೈನಲ್ ನಲ್ಲೇ ಸೆರೆನಾ ಎದುರಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications