For Quick Alerts
ALLOW NOTIFICATIONS  
For Daily Alerts

ವಿಂಬಲ್ಡನ್ ಕ್ವಾಲಿಫೈಯರ್ಸ್: ಅಂಕಿತಾ ರೈನಾ ದ್ವಿತೀಯ ಸುತ್ತಿಗೆ ಪ್ರವೇಶ

Ankita Raina enters second round of Wimbledon qualifiers

ಲಂಡನ್, ಜೂನ್ 26: ಲಂಡನ್‌ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಕ್ವಾಲಿಫೈಯರ್ ಟೆನಿಸ್ ಟೂರ್ನಿಯಲ್ಲಿಯಲ್ಲಿ ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಅಂಕಿತಾ ರೈನಾ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಟರ್ಕಿ ಆಟಗಾರ್ತಿ ಕಾಗ್ಲಾ ಬೈಯುಕಾಕೆ ಸೋಲಿಸಿ ರೈನಾ ಮುನ್ನಡೆ ಗಿಟ್ಟಿಸಿಕೊಂಡರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜೂನ್ 25) ನಡೆದ ಮಹಿಳಾ ಸಿಂಗಲ್ಸ್ ಸ್ಪರ್ಧೆಯಲ್ಲಿ ವಿಮೆನ್ಸ್ ಟೆನಿಸ್ ಅಸೋಸಿಯೇಷನ್‌ನಲ್ಲಿ 171ನೇ ಶ್ರೇಯಾಂಕಿತೆ, 26ರ ಹರೆಯದ ಅಂಕಿತಾ, ಟರ್ಕಿ ಸ್ಪರ್ಧಿ ಬೈಯುಕಾಕೆ ಎದುರು 6-4, 6-3ರ ನೇರ ಸೆಟ್ ಗೆಲುವು ದಾಖಲಿಸಿದರು.

ಆರಂಭದಲ್ಲಿ ರೈನಾ ಮೊದಲ ಬ್ರೇಕ್ ವೇಳೆ 2-0 ಮುನ್ನಡೆ ಸಾಧಿಸಿದ್ದರು. ಪಂದ್ಯ ಮುಂದುವರಿದಂತೆ ಎದುರಾಳಿ 3 ಅಂಕ ಗಳಿಸುವಲ್ಲಿ ಸಫಲರಾದರು. ಈ ತಿಂಗಳಾರಂಭದಲ್ಲಿ ಪಂದ್ಯವೊಂದರಲ್ಲಿ ಅಂಕಿತಾ ರೈನಾ ವಿಂಬಲ್ಡನ್ ಫೈನಲಿಸ್ಟ್ ಜರ್ಮನ್ ಆಟಗಾರ್ತಿ ಸಬೈನ್ ಲಿಸಿಕಿ ಎದುರು ಗೆಲುವು ದಾಖಲಿಸಿ ಗಮನ ಸೆಳೆದಿದ್ದರು.

Story first published: Wednesday, June 26, 2019, 10:17 [IST]
Other articles published on Jun 26, 2019
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+